Sunday, August 10, 2025
Google search engine

Homeರಾಜ್ಯಸುದ್ದಿಜಾಲಮಾಜಿ ಸಚಿವ ಸಾ.ರಾ. ಮಹೇಶ್ ಗೆ ಹುಟ್ಟುಹಬ್ಬದ ಶುಭಾಶಯ: ಜೆಡಿಎಸ್ ಮುಖಂಡರಿಂದ ಅಭಿನಂದನೆ, ವಿಶೇಷ ಪೂಜೆ...

ಮಾಜಿ ಸಚಿವ ಸಾ.ರಾ. ಮಹೇಶ್ ಗೆ ಹುಟ್ಟುಹಬ್ಬದ ಶುಭಾಶಯ: ಜೆಡಿಎಸ್ ಮುಖಂಡರಿಂದ ಅಭಿನಂದನೆ, ವಿಶೇಷ ಪೂಜೆ ಕಾರ್ಯಕ್ರಮ

ವಿನಯ್ ದೊಡ್ಡಕೊಪ್ಪಲು

ಕೆ.ಅರ್.ನಗರ: ಆ.10 ರ ಭಾನುವಾರ 59ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಮಾಜಿ ಸಚಿವ ಸಾ‌.ರಾ.ಮಹೇಶ್ ಅವರನ್ನು ಜೆಡಿಎಸ್ ಮುಖಂಡರು ಅಭಿನಂಧಿಸಿ ಶುಭ ಕೋರಿದರು.

ಮೈಸೂರಿನ‌ ಮೂಡಾ ಹತ್ತಿರ ಇವರ ಅವರ ಕಚೇರಿಯಲ್ಲಿ ಅಭಿನಂದಿಸಿ ಹುಟ್ಟು ಹಬ್ಬದ ಶುಭಾಶಯಯ ಕೋರಿದ ಜೆಡಿಎಸ್ ಮುಖಂಡರು ಉ ಮುಂದೆ ಸಾ.ರಾ.ಮಹೇಶ್ ಅವರಿಗೆ ಉನ್ನತ ರಾಜಕೀಯ ಸ್ಥಾನ ಮಾನ ದೊರೆಯಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಜೆಡಿಎಸ್ ಮುಖಂಡ ಹಳಿಯೂರು ಮಧುಚಂದ್ರ ಮಾತನಾಡಿ ಸಾ.ರಾ.ಮಹೇಶ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಭಾನುವಾರ ಚುಂಚನಕಟ್ಟೆ ಶ್ರೀರಾಮ ದೇವಾಲಯದಲ್ಲಿ 10 ಗಂಟೆಗೆ ವಿಶೇಷ ಪೂಜಾ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿದ್ದು ಇದರಲ್ಲಿ ಸಾ.ರಾ.ಮಹೇಶ್ ಅವರು ಭಾಗಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಹೊಸೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಳಿಯೂರು ಜಗದೀಶ್, ಹಳಿಯೂರು ಬಡಾವಣೆ ಡೈರಿ ಅಧ್ಯಕ್ಷ ಎಚ್.ಅರ್.ಕೃಷ್ಣಮೂರ್ತಿ, ಯುವ ಜೆಡಿಎಸ್ ಮುಖಂಡ ನಾಡಪ್ಪನಹಳ್ಳಿ ಮಹದೇವ್ ಹಾಜರಿದ್ದರು

RELATED ARTICLES
- Advertisment -
Google search engine

Most Popular