Friday, April 18, 2025
Google search engine

Homeರಾಜಕೀಯಬಿಜೆಪಿ:ರಾಜ್ಯದ 20 ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆ;ಪ್ರತಾಪ್ ಸಿಂಹ, ಕಟೀಲ್, ಡಿವಿಎಸ್​ಗೆ ಕೈ ತಪ್ಪಿದ ಟಿಕೆಟ್

ಬಿಜೆಪಿ:ರಾಜ್ಯದ 20 ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆ;ಪ್ರತಾಪ್ ಸಿಂಹ, ಕಟೀಲ್, ಡಿವಿಎಸ್​ಗೆ ಕೈ ತಪ್ಪಿದ ಟಿಕೆಟ್

ಹೊಸದಿಲ್ಲಿ: ಲೋಕಸಭೆ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ. ಕರ್ನಾಟಕದ 28 ಲೋಕಸಭೆ ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳಿಗೆ ಟಿಕೆಟ್​ ಪ್ರಕಟಿಸಲಾಗಿದೆ. ಕೆಲ ಹಾಲಿ ಸಂಸದರಿಗೆ ಕೊಕ್ ಕೊಡಲಾಗಿದೆ. ಹೊಸಬರಿಗೆ ಅವಕಾಶ ನೀಡಲಾಗಿದೆ. ವಿರೋಧದ ನಡುವೆಯೂ ಕೆಲವರಿಗೆ ಮಣೆ ಹಾಕಲಾಗಿದ್ದು, ಬಿಜೆಪಿ ಸದಸ್ಯತ್ವ ಪಡೆಯದೇ ಇರುವ ಡಾ. ಮಂಜುನಾಥ್ ಅವರಿಗೂ ಟಿಕೆಟ್ ಪ್ರಕಟಿಸಲಾಗಿದ್ದು, ಮೈಸೂರು ಕ್ಷೇತ್ರದಿಂದ ಯದುವೀರ್ ಒಡೆಯರ್ ಅವರಿಗೆ ಮಣೆ ಹಾಕಲಾಗಿದೆ. ಮೈಸೂರಿನಲ್ಲಿ ಹಾಲಿ ಸಂಸದ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಕೈ ತಪ್ಪಿದ್ದು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ನೀಡಲಾಗಿದೆ.

ಕ್ಷೇತ್ರವಾರು ಅಭ್ಯರ್ಥಿಗಳ ಮಾಹಿತಿ ಈ ಕೆಳಗಿನಂತಿದೆ.

ಹಾವೇರಿ- ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು ಗ್ರಾಮಾಂತರ- ಡಾ. ಸಿಎನ್ ಮಂಜುನಾಥ್

ಚಿಕ್ಕಮಗಳೂರು – ಉಡುಪಿ – ಕೋಟ ಶ್ರೀನಿವಾಸ್ ಪೂಜಾರಿ

ಚಿಕ್ಕೋಡಿ -ಹಾಲಿ ಸಂಸದ  ಅಣ್ಣಾಸಾಹೇಬ್ ಜೊಲ್ಲೆ,

ಬಾಗಲಕೋಟೆ -ಹಾಲಿ ಸಂಸದ ಪಿ.ಸಿ. ಗದ್ದಿಗೌಡರ್

ವಿಜಯಪುರ -ಹಾಲಿ ಸಂಸದ ರಮೇಶ ಜಿಗಜಿಣಗಿ

ಕಲಬುರಗಿ- ಹಾಲಿ ಸಂಸದ ಉಮೇಶ್ ಜಾಧವ್

ಬೆಂಗಳೂರು- ಉತ್ತರ- ಶೋಭಾ ಕರಂದ್ಲಾಜೆ

ದಕ್ಷಿಣ ಕನ್ನಡ -ಕ್ಯಾಪ್ಟನ್ ಬ್ರಿಜೇಶ್ ಚೌಟ

ಬೆಂಗಳೂರು- ದಕ್ಷಿಣ- ತೇಜಸ್ವಿ ಸೂರ್ಯ

ಮೈಸೂರು- ಕೊಡಗು- ಯದುವೀರ್ ಒಡೆಯರ್

ತುಮಕೂರು- ವಿ ಸೋಮಣ್ಣ

ದಾವಣಗೆರೆ- ಗಾಯತ್ರಿ ಸಿದ್ದೇಶ್ವರ್

ಬಳ್ಳಾರಿ- ಶ್ರೀರಾಮುಲು

ಶಿವಮೊಗ್ಗ- ಬಿ ವೈ ರಾಘವೇಂದ್ರ

ಚಾಮರಾಜನಗರ- ಎಸ್. ಬಾಲರಾಜು

ಕೊಪ್ಪಳ- ಡಾ. ಬಸವರಾಜ್ ಕ್ಯಾವತ್ತೂರು

ಧಾರವಾಡ- ಪ್ರಹ್ಲಾದ ಜೋಶಿ

ಬೀದರ್- ಕೇಂದ್ರ ಸಚಿವ ಭಗವಂತ್ ಖೂಬಾ

ಬೆಂಗಳೂರು ಸೆಂಟ್ರಲ್- ಹಾಲಿ ಸಂಸದ ಪಿ.ಸಿ ಮೋಹನ್

RELATED ARTICLES
- Advertisment -
Google search engine

Most Popular