ಬೋಪಾಲ್: ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದ ಪಡೆದು ಅಧಿಕಾರ ಪಡೆಯಲಿದೆ ಎಂದು ಚುನಾವಣೋತ್ತರ ಸಮೀಕ್ಷೆ ಹೇಳಿದೆ. ರಾಜ್ಯದ ಪ್ರತಿಪಕ್ಷ ಕಾಂಗ್ರೆಸ್ ೭೪ ಕ್ಷೇತ್ರದಲ್ಲಿ ಮಾತ್ರ ಜಯಗಳಿಸಲಿದೆ.
ಮಧ್ಯಪ್ರದೇಶದ ೨೩೦ ಸದಸ್ಯಬಲದ ವಿಧಾನಸಭೆ ಚುನಾವಣಾ ಫಲಿತಾಂಶ ಹೊರಬರುತ್ತಿದೆ. ಚುನಾವಣಾ ಆಯೋಗದ ಮಾಹಿತಿ ಪ್ರಕಾರ, ಬಿಜೆಪಿ ೧೫೮, ಕಾಂಗ್ರೆಸ್ ೬೯, ಬಿಎಸ್‌ಪಿ ೨ ಹಾಗೂ ಇತರರು ೧ ಸ್ಥಾನದಲ್ಲಿ ಮುನ್ನಡೆ ಹೊಂದಿದ್ದಾರೆ. ಇದು ಕೇಸರಿ ಪಾಳಯ ಬೃಹತ್ ಗೆಲುವಿನ ಮೂಲಕ ಮತ್ತೆ ಆಡಳಿತದ ಚುಕ್ಕಾಣಿಯುವ ಸ್ಪಷ್ಟ ಸೂಚನೆ ನೀಡಿದೆ. ಮತ್ತೆ ಮುಖ್ಯಮಂತ್ರಿ ಗಾದಿಯ ಮೇಲೆ ಶಿವರಾಜ್ ಸಿಂಗ್ ಚೌಹಾಣ್ ಕಣ್ಣಿಟ್ಟಿದ್ದಾರೆ. ರಾಜಧಾನಿ ಬೋಪಾಲ್‌ನ ಬಿಜೆಪಿ ಕಚೇರಿಯಲ್ಲಿ ವಿಜಯೋತ್ಸವ ನಡೆಯುತ್ತಿದೆ.