ಮಂಡ್ಯ: ಬಿಜೆಪಿಯವರು ಚುನಾವಣೆಗೋಸ್ಕರ ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಮಾಡ್ತಿದ್ದಾರೆ ಎಂದು ಎಂಎಲ್ ಸಿ ಮಧು ಜಿ ಮಾದೇಗೌಡ ವಾಗ್ದಾಳಿ ನಡೆಸಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಚುನಾವಣೆ ಸಂದರ್ಭದಲ್ಲಿ ರಾಮ ಮಂದಿರ ಉದ್ಘಾಟನೆ ಮಾಡೋದು ಅಥವಾ ಪುಲ್ವಾಮಾ ದಾಳಿ ಮಾಡಿಸುವಂತ ಕೆಲಸ ಮಾಡಿ ವೋಟು ಗಳಿಸುವ ಕೆಲಸ ಮಾಡ್ತಾರೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ನಮ್ಮ ಊರಿನಲ್ಲೂ ರಾಮ ಮಂದಿರ ಇದೆ ಎಲ್ಲಾ ಕಡೆ ಉದ್ಘಾಟನೆಯಾಗ್ತಿದೆ. ನಾವು ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆಗೆ ಹೋಗಲ್ಲ. ನಮ್ಮ ಊರಿನಲ್ಲಿರುವ ರಾಮ ಮಂದಿರದಲ್ಲೆ ಪೂಜೆ ಮಾಡ್ತೇವೆ ಎಂದರು.
ಕಾಂಗ್ರೆಸ್ ನಿಂದ ರಾಮನಿಗೆ ಅಪಮಾನ ಬಿಜೆಪಿ ಟೀಕೆ ವಿಚಾರವಾಗಿ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಇದೆಲ್ಲಾ ಸಹಜವಾಗಿ ನಡೆಯುತ್ತೆ. ಇದಕ್ಕೆ ಹೆಚ್ಚಿನ ಮಹತ್ವ ಕೊಡುವುದು ಅವಶ್ಯಕತೆ ಇಲ್ಲ ಎಂದು ತಿಳಿಸಿದರು.