Monday, October 13, 2025
Google search engine

Homeರಾಜ್ಯಸುದ್ದಿಜಾಲಆರ್‌ಎಸ್‌ಎಸ್ ಇಲ್ಲದೆ ಬಿಜೆಪಿ ಶೂನ್ಯ: ಸಚಿವ ಪ್ರಿಯಾಂಕ ಖರ್ಗೆ ವಾಗ್ದಾಳಿ

ಆರ್‌ಎಸ್‌ಎಸ್ ಇಲ್ಲದೆ ಬಿಜೆಪಿ ಶೂನ್ಯ: ಸಚಿವ ಪ್ರಿಯಾಂಕ ಖರ್ಗೆ ವಾಗ್ದಾಳಿ

ಬೆಂಗಳೂರು : ರಾಜ್ಯದಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆಗಳ ಮೇಲೆ ಕಡಿವಾಣ ಹಾಕಬೇಕು ಎಂದು ಸಿಎಂ ಸಿದ್ದರಾಮಯ್ಯಗೆ ಸಚಿವ ಪ್ರಿಯಾಂಕ ಖರ್ಗೆ ಪತ್ರ ಬರೆದಿದ್ದು ಇದೀಗ ಬಿಜೆಪಿ ನಾಯಕರನ್ನು ಕೆರಳಿಸಿದೆ. ಇದೀಗ ಬಿಜೆಪಿಆರ್ ಎಸ್ ಎಸ್ ನ ಕೈಗೊಂಬೆ. ಆರ್ ಎಸ್ ಎಸ್ ಇಲ್ಲದೆ ಬಿಜೆಪಿ ಶೂನ್ಯ. ಧರ್ಮ ಇಲ್ಲದೆ ಆರ್ ಎಸ್ ಎಸ್ ಜೀರೋ ಎಂದು ಬೆಂಗಳೂರಿನಲ್ಲಿ ಐಟಿಬಿಟಿ ಸಚಿವ ಪ್ರಿಯಾಂಕ ಖರ್ಗೆ ವಾಗ್ದಾಳಿ ನಡೆಸಿದರು.

ನಾನು ಹಿಂದೂ, ಅಥವಾ ಹಿಂದೂ ಧರ್ಮದ ವಿರೋಧಿ ಅಲ್ಲ ‘RSS’ ವಿರೋಧಿ. ಕರಾವಳಿ ಮಲೆನಾಡಿನಲ್ಲಿ ಯಾರು ಬಲಿಯಾಗಿದ್ದಾರೆ ಮಾಹಿತಿ ತೆಗೆಯಿರಿ. ಬೇರೆ ಸಂಘಟನೆಗಳು ದೊಡ್ಡ ದೊಣ್ಣೆ ಹಿಡಿದುಕೊಂಡು ಓಡಾಡಿದರೆ ಒಪ್ಪುತ್ತಿರ? ಶಾಲೆಗಳಲ್ಲಿ ಆರ್ ಎಸ್ ಎಸ್ ನಿಂದ ನಡೆಯುತ್ತಿರುವ ಬ್ರೈನ್ ವಾಷ್ ನಿಲ್ಲಬೇಕು ಆರ್ಎಸ್ಎಸ್ ಲೈಂಗಿಕ ಕಿರುಕುಳದ ಬಗ್ಗೆ ಪುಸ್ತಕವನ್ನೇ ಬರೆದಿದ್ದಾರೆ ಹನುಮೇಗೌಡ ಎಂಬ ಪುಸ್ತಕ ಬರೆದಿದ್ದಾರೆ.

ಬಿಜೆಪಿ ಆರ್ ಎಸ್ ಎಸ್ ಕೈಗೊಂಬೆಯಾಗಿದ್ದು ಆರ್ ಎಸ್ ಎಸ್ ತೆಗೆದುಬಿಟ್ಟರೆ ಬಿಜೆಪಿ ಶೂನ್ಯ. ಇನ್ನು ಧರ್ಮವಿಲ್ಲದೆ ಆರ್ ಎಸ್ ಎಸ್ ಸಹ ಶೂನ್ಯ ನಾನು ಹಿಂದು ಅಥವಾ ಹಿಂದೂ ಧರ್ಮದ ವಿರೋಧಿ ಅಲ್ಲ ಆರ್ ಎಸ್ ಎಸ್ ವಿರೋಧಿ ಆ ತತ್ವದಲ್ಲಿ ಸಮಾನತೆ ಇಲ್ಲ ತತ್ವದಲ್ಲಿ ನಮ್ಮ ಸಂವಿಧಾನಕ್ಕೆ ಅವಕಾಶ ಇಲ್ಲ ಸಂವಿಧಾನ ಇಲ್ಲದಿದ್ದರೆ ನಾವು ಇಲ್ಲ.

ಕರಾವಳಿ ಮಲೆನಾಡಿನಲ್ಲಿ ಯಾರ್ಯಾರು ಬಲಿಯಾಗಿದ್ದಾರೆ ಲೆಕ್ಕ ಹಾಕಿ, ಬಿಜೆಪಿಯವರು ಮಕ್ಕಳು ಯಾರಾದ್ರೂ ಬಲಿಯಾಗಿದ್ದಾರೆ ಬಡವರು ಹಿಂದುಳಿದ ವರ್ಗದವರು ದಲಿತರು ಬಲಿಯಾಗಿದ್ದಾರೆ ನಮ್ಮ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಆರ್ ಎಸ್ ಎಸ್ ಇಂದ ಬ್ರೈನ್ ಮಾಷ್ ಆಗುತ್ತದೆ ಅದು ನಿಲ್ಲಬೇಕು ಎಂದು ವಾಗ್ದಾಳಿ ನಡೆಸಿದರು.

RELATED ARTICLES
- Advertisment -
Google search engine

Most Popular