ಮಂಡ್ಯ: ಬಿಜೆಪಿ ಬರಿ ಶೋ ಆಪ್ ರಾಜಕಾರಣಕ್ಕಾಗಿ ಕೆಆರ್ ಎಸ್ ಡ್ಯಾಂ ವೀಕ್ಷಣೆ ಮಾಡುತ್ತಿದ್ದು, ರಾಜಕಾರಣ ಬಿಟ್ಟು ಡೆಲ್ಲಿಗೆ ಹೋಗಿ ಪ್ರಧಾನಿಗೆ ಒತ್ತಡ ಹಾಕಿ ಎಂದು ಸಚಿವ ಎನ್.ಚಲುವರಾಯಸ್ವಾಮಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಅವರು, ಎರಡೂ ತಿಂಗಳಿಂದ ಸಮಸ್ಯೆಯಾಗಿದೆ. ಜೂನ್ ನಲ್ಲಿ ಮಳೆಯಾಗಿರಲಿಲ್ಲ.ಇವರೆಲ್ಲಾ ಅನುಭವದವರು. ಈಗ ತಾನೇ ಅಧಿಕಾರದಿಂದ ಕೆಳಗಿಳಿದು 4 ತಿಂಗಳಾಗಿದೆ. ಏನು ಮಾಡ್ಬೇಕು ಇವರು? 25 ಜನ ಎಂಪಿಗಳು ಎಲ್ಲಿಯಾದ್ರು ಮಾತನಾಡಿದ್ದಾರಾ? ಏನು ಮಾಡದೇ ಬಿಜೆಪಿಯವರು ಮಾತನಾಡ್ತಾರೆ ಎಂದು ಕಿಡಿಕಾರಿದ್ದಾರೆ.
ಅಪೀಲ್ ಹಾಕಿ ವಾಸ್ತವ ಸ್ಥಿತಿಯ ಬಗ್ಗೆ ನಾವು ಮನವರಿಕೆ ಮಾಡಿಕೊಟ್ಟು ಹೋರಾಟ ಮಾಡ್ತಿದ್ದೇವೆ. ಕುಡಿಯೋ ನೀರಿಗೆ ಮ್ಯಾನೆಜ್ ಮಾಡಬೇಕು, ರೈತರನ್ನು ಸಂಕಷ್ಟದಿಂದ ಪಾರು ಮಾಡಬೇಕು. ನಮ್ಮ ಕರ್ತವ್ಯ ನಾವು ಮಾಡ್ತೇವೆ. ಇದರ ಮಧ್ಯೆ ಬಿಜೆಪಿಯವರು ರಾಜಕಾರಣ ಮಾಡಬೇಡಿ. ಸಾಧ್ಯವಾದರೆ ನಮ್ಮ ಜೊತೆ ಸೇರಿ ರೈತರ ಪರ ಹೋರಾಟ ಮಾಡಿ. ಚುನಾವಣೆ ಗೋಸ್ಕರ ರಾಜಕಾರಣ ಮಾಡಬೇಡಿ.ನಾವು ರಾಜಕಾರಣ ಕಲ್ತಿದ್ದೇವೆ ಎಂದು ಹರಿಹಾಯ್ದರು.
ಬಿಜೆಪಿ -ಜೆಡಿಎಸ್ ಯಾರಾದ್ರು ಹೊಂದಾಣಿಕೆ ಮಾಡ್ಕೊಳ್ಳಿ ನಾವು ಚುನಾವಣೆ ಎದುರಿಸುತ್ತೇವೆ. ಮೊದಲು ರೈತರ ಸಮಸ್ಯೆ ಬಗೆಹರಿಸುವ ಕೆಲಸ ಮಾಡೋಣಾ. ಬರಿ ಮಾಧ್ಯಮದಲ್ಲಿ ಶೋ ಅಪ್ ಮಾಡೋದಲ್ಲ. ನಾವು ಕೆಲಸ ಮಾಡಿ ತೋರಿಸ್ತೇವೆ. ಯಾರ ಸಪೋರ್ಟ್ ಇಲ್ಲದಿದ್ದರೂ ನಮ್ಮ ಜಿಲ್ಲೆಯ ರೈತರಿಗೆ ಹೋರಾಟ ಮಾಡುವ ಶಕ್ತಿ ಇದೆ. ಬಿಜೆಪಿಯವರ ಅವಶ್ಯಕತೆ ಇಲ್ಲ. ನಿಮ್ಮ ಸಹಾಯ ಬೇಕಿರೋದು ಡೆಲ್ಲಿಗೆ ಸರ್ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿಗಳು, ಬಿಜೆಪಿ ನಾಯಕರು, 25 ಜನ ಎಂಪಿ ಎಲ್ಲರೂ ಹೋಗಿ ಕಾವೇರಿ ಪ್ರಾಧಿಕಾರದ ಬಳಿ ಮನವರಿಕೆ ಮಾಡಿಕೊಡಿ. ಹೋಗ್ತಿರುವ ನೀರನ್ನು ನಿಲ್ಲಿಸಿ ಎಂದು ಒತ್ತಡ ಹಾಕಿ. ಅದನ್ನ ಬಿಟ್ಟು ಕೆಆರ್ ಎಸ್ ಡ್ಯಾಂ ವೀಕ್ಷಣೆ ಮಾಡೋದು ಎಷ್ಟು ಸರಿ? ಒಕೆ ವೀಕ್ಷಣೆ ಮಾಡಿ ನಾಳೆಯಾದ್ರು ಹೋಗಿ ಮನವರಿಕೆ ಮಾಡಿಕೊಡಿ. ಬೊಮ್ಮಯಿ ಅವರು ಕೇಂದ್ರದ ಮೇಲೆ ಒತ್ತಡ ತಂದ್ರೆ ಅಭಿನಂದಿಸುತ್ತೇನೆ ಎಂದರು.
ಯಾರು ಎಷ್ಟೆ ಪ್ರಚೋದನೆ ಮಾಡಿದ್ರು ನಮ್ಮ ಜಿಲ್ಲೆಯ ಜನ ಪ್ರಚೋದನೆಗೆ ಒಳಗಾಗಬೇಡಿ. ಪ್ರತಿಭಟನೆ ಕೂಗು ನಮಗೆ ಅರ್ಥವಾಗಿದೆ. ನಾವು ಪ್ರಾಮಾಣಿಕವಾಗಿ ರೈತರ ಪರ ಇದ್ದೇವೆ. ಕಾವೇರಿ ಅಚ್ಚುಕಟ್ಟು ಜನರ ಬೀದಿಗೆ ಬೀಡುವ ಪ್ರಶ್ನೆ ಇಲ್ಲ. ನಿಮ್ಮ ರಕ್ಷಣೆಗೆ ಇದ್ದೇವೆ. ನಿಮ್ಮ ಕೂಗಿಗೆ ನಾವು ಪ್ರಾಮಾಣಿಕವಾಗಿ ಸ್ಪಂದಿಸುತ್ತೇವೆ ಎಂದರು.
ಪರಿಹಾರಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂಬ ಸಚಿವ ಶಿವಾನಂದ ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿ, ಒಂದು ಮಾತನಾಡಿದ್ರೆ ಇನ್ನೊಂದು ಆಗುತ್ತೆ ಅಷ್ಟೆ. ಅದರ ಬಗ್ಗೆ ಉತ್ತರ ಕೊಡಲ್ಲ. ನಮ್ಮ ಎದುರು ಇರುವ ಸಮಸ್ಯೆಗಳ ಬಗ್ಗೆ ಚಿಂತನೆ ಮಾಡೋಣಾ. ಯಾವ ಸಂದರ್ಭದಲ್ಲಿ ಮಾತನಾಡಿರಾರ್ತಾರೋ ಅವರೇ ಉತ್ತರ ಕೊಡಬೇಕು. ಇದರ ಬಗ್ಗೆ ಮುಖ್ಯಮಂತ್ರಿ ಪಕ್ಷದ ಅಧ್ಯಕ್ಷರು ಇದ್ದಾರೆ ನೊಡ್ಕೊತ್ತಾರೆ ಎಂದು ಹೇಳಿದರು.