Friday, May 15, 2026
Google search engine

Homeರಾಜಕೀಯಬಿಜೆಪಿಯೇ ಹಿಜಾಬ್‌ಗೆ ತಡೆ ತಂದಿತ್ತು : ಹಿಜಾಬ್ ಹಳೆಯ ಪದ್ಧತಿ, ಹೊಸ ನೀತಿ ಅಲ್ಲ ...

ಬಿಜೆಪಿಯೇ ಹಿಜಾಬ್‌ಗೆ ತಡೆ ತಂದಿತ್ತು : ಹಿಜಾಬ್ ಹಳೆಯ ಪದ್ಧತಿ, ಹೊಸ ನೀತಿ ಅಲ್ಲ : ಡಾ ಜಿ ಪರಮೇಶ್ವರ್

ಬೆಂಗಳೂರು : ಬಿಜೆಪಿ ಅಧಿಕಾರದಲ್ಲಿದ್ದಾಗ ನೀತಿ ನಿರೂಪಣೆಗಳನ್ನು ಮಾಡುತ್ತಿರಲಿಲ್ಲವೇ, ಜನರು ಚೆನ್ನಾಗಿರಬೇಕೆಂದು ಕಾನೂನು, ನೀತಿಗಳನ್ನು ಅವರು ಮಾಡಿದ್ದಾರಾ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರಿಗೆ ಪ್ರಚೋದನೆ ಮಾಡುವ ರೀತಿಯಲ್ಲಿ ಸರ್ಕಾರ ನೀತಿ, ಕಾನೂನುಗಳನ್ನು ತರಬಾರದು. ಕರ್ನಾಟಕದಲ್ಲಿ ಹಿಜಾಬ್ ಹಿಂದಿನಿಂದಲೂ ಇದ್ದ ಧಾರ್ಮಿಕ ಪದ್ಧತಿ, ಹೊಸದಾಗಿ ನಾವು ನೀತಿ ತಂದಿಲ್ಲ ಎಂದರು.

ಬಿಜೆಪಿಯವರೇ ಮಧ್ಯದಲ್ಲಿ ಹಿಜಾಬ್ ಧರಿಸಬಾರದು ಎಂದು ಕಾನೂನು ತಂದರು. ಎಷ್ಟೋ ವರ್ಷಗಳಿಂದ ಇದ್ಧ ಪದ್ಧತಿಗೆ ತಡೆ ತಂದಿದ್ದೇ ಅವರು. ಜನಿವಾರ ಹಾಕಿ ಎಂದು ನಾವು ಹೊಸದಾಗಿ ಹೇಳುತ್ತಿಲ್ಲ, ಈಗಾಗಲೇ ಧರಿಸುವವರಿಗೆ ಬೇಡ ಅಂದಿಲ್ಲ, ಬಿಜೆಪಿಯವರು ಏನೇ ಟೀಕೆ ಟಿಪ್ಪಣಿ ಮಾಡಲಿ ಎಂದರು.

RELATED ARTICLES
- Advertisment -
Google search engine

Most Popular