Friday, April 4, 2025
Google search engine

Homeರಾಜಕೀಯಲೋಕಸಭಾ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ: ಚುನಾವಣೆಯ ಪ್ರಕ್ರಿಯೆ ಆರಂಭವಾದಾಗ ಉತ್ತರ ಸಿಗಲಿದೆ ಎಂದ ಹೆಚ್.ಡಿ.ಕುಮಾರಸ್ವಾಮಿ

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ: ಚುನಾವಣೆಯ ಪ್ರಕ್ರಿಯೆ ಆರಂಭವಾದಾಗ ಉತ್ತರ ಸಿಗಲಿದೆ ಎಂದ ಹೆಚ್.ಡಿ.ಕುಮಾರಸ್ವಾಮಿ

ರಾಮನಗರ: ರಾಜಕಾರಣದಲ್ಲಿ ಚರ್ಚೆ, ಊಹಾಪೋಹಗಳು ಹುಟ್ಟುವುದು ಸಹಜ. ಕೆಲವೊಮ್ಮೆ ಗಾಳಿ ಸುದ್ದಿಗಾಗಿ ಚರ್ಚೆ ಮಾಡುತ್ತಾರೆ. ಇದಕ್ಕೆಲ್ಲ ಚುನಾವಣೆಯ ಪ್ರಕ್ರಿಯೆ ಆರಂಭವಾದಾಗ ಉತ್ತರ ಸಿಗಲಿದೆ. ಆ ರೀತಿ ನನ್ನ‌ ಮುಂದೆ ಯಾವುದೇ ಚರ್ಚೆ ಆಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ಈ ಬಗ್ಗೆ ಇಂದು  ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಮಾತನಾಡಿರುವ ಕುಮಾರಸ್ವಾಮಿ, ಲೋಕಸಭಾ ಚುನಾವಣೆಗೆ ನಿಲ್ಲುವ ನಿರ್ಧಾರವಾಗಿಲ್ಲ. ಜಿಲ್ಲಾವಾರು ಜೆಡಿಎಸ್ ಮುಖಂಡರ ಸಭೆ‌ ಮಾಡಿದ್ದೇನೆ ನಿಮ್ಮ ಜೊತೆ ನಿಲ್ಲುತ್ತೇವೆ ಎಂದು ಮುಖಂಡರು ಹೇಳಿದ್ದಾರೆ. ಏನು ಮಾಡಬೇಕು ಎಂಬುದನ್ನ ಆ ಸಂದರ್ಭದಲ್ಲಿ ‌ತೆಗೆದುಕೊಳ್ಳುತ್ತೇವೆ. ನನಗೆ ರಾಜಕಾರಣದಲ್ಲಿ ಒಲವಿಲ್ಲ. ಸಿಎಂ ಸ್ಥಾನದಿಂದ ಕೆಳಗೆ ಇಳಿದಾಗಲೇ ತೀರ್ಮಾನ ಮಾಡಬೇಕು ಎಂದುಕೊಂಡಿದ್ದೆ. ಆದ್ರೆ, ಕಾರ್ಯಕರ್ತರಿಗೋಸ್ಕರ ಇದ್ದೇನೆ ಎಂದು ರಾಜಕಾರಣ ಸಾಕು ಎನ್ನುವ ಅರ್ಥದಲ್ಲಿ ಹೇಳಿದರು.

ನನ್ನದು ಬಿಡಿ, ಈಗಿನ ಎಂಪಿ ಸುರೇಶ್ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾರೆ. ಅವರೇ ಈ ರೀತಿ ಯೋಚನೆ ಮಾಡಬೇಕಾದರೇ ನನ್ನಂತವನ ಪರಿಸ್ಥಿತಿ ಏನು? ಅಂತವರೇ ಆ ರೀತಿ ಹೇಳುತ್ತಿದ್ದಾರೆ. ರಾಜಕೀಯ ನಿವೃತ್ತಿ ಬಗ್ಗೆ ಮಾತನಾಡುತ್ತಾರೆ. ಯಾಕೆಂದರೆ ಅವರ ಸಾಕ್ಷಿ ಗುಡ್ಡೆ ಬಹಳ ಇದೆ. ನಾನು ಯಾವ ರೀತಿ ಚುನಾವಣೆ ಎದುರಿಸಲಿ ಎಂದರು.

ಇನ್ನು ಇದೇ ವೇಳೆ ಕಾಂಗ್ರೆಸ್ ನ ಐದು ಗ್ಯಾರಂಟಿ ಯೋಜನೆಗಳ ಜಾರಿ ಬಗ್ಗೆ ಮಾತನಾಡಿ, ಈ ಯೋಜನೆಗಳ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಈ ಬಗ್ಗೆ ಚರ್ಚೆ ಮಾಡುವುದು ಪ್ರೀ ಮೆಚ್ಯುರ್. ಚರ್ಚೆ ಮಾಡುವುದಕ್ಕೆ ಇನ್ನು ಸಮಯ ಇದೆ. ಸರ್ಕಾರಕ್ಕೆ ಯಾವುದೇ ಕಾರ್ಯಕ್ರಮ ಕೊಡಬೇಕಾದರೆ ಹಣ ಒದಗಿಸುವುದು ಕಷ್ಟವಲ್ಲ. ಆದರೆ‌ ಫಲಾನುಭವಿಗಳಿಗೆ ಎಷ್ಟರಮಟ್ಟಿಗೆ ತಲಪಿಸುತ್ತಾರೆ ಎಂಬುದು‌ ಮುಖ್ಯ. ಇದೀಗ ಬಾಡಿಗೆದಾರರಿಗೆ ಓನರ್ ಗಳು ಅಗ್ರಿಮೆಂಟ್ ಪೇಪರ್ ಕೊಡಲು ತಯಾರಿಲ್ಲ. ಘೋಷಣೆ ‌ಮಾಡಿದಾಗ ನನಗೂ 200, ನಿನಗೂ 200 ಎಂದು ಹೇಳಿದವರು ಈಗ ಏನು ಹೇಳುತ್ತಿದ್ದಾರೆ. ಅವತ್ತು ಪರಿಜ್ಞಾನ ‌ಎಲ್ಲಿತ್ತು ಎಂದು ಕಾಂಗ್ರೆಸ್​ ಪ್ರಶ್ನಿಸಿದರು.

ಬೆಂಗಳೂರು ಬಿಬಿಎಂಪಿಯಲ್ಲಿ ಮೇ.8 ರಂದಯ 675 ಕೋಟಿ ರೂ. ರಿಲೀಸ್ ಮಾಡಿದ್ರು. ಅದು ಟೆಂಡರ್ ಕೆಲಸಕ್ಕೆ ಅಲ್ಲ. ಕೆಲಸ ಮುಗಿಸಿದ ಗುತ್ತಿಗೆದಾರನಿಗೆ ಹಣ ಬಿಡುಗಡೆ ‌ಮಾಡಿದ್ರು. ಹಣ ಬಿಡುಗಡೆ ಮಾಡಬೇಡಿ ಎಂದು ಕಾಂಗ್ರೆಸ್ ನವರು ಅಟ್ಯಾಕ್ ಮಾಡಿದ್ರು. ಮೀಟಿಂಗ್ ‌ಮಾಡಿ, ಕೆಲಸದ ಬಗ್ಗೆ ವರದಿಯೂ ಪಡೆದರೂ ಏಕೆ ಹಣವನ್ನ ಬಿಡುಗಡೆ ಮಾಡಿಲ್ಲ. 40 ಪರ್ಸೆಂಟ್ ಬಗ್ಗೆ ರಾಜ್ಯಾದ್ಯಂತ ಗುತ್ತಿಗೆದಾರರು ಹಬ್ಬಿಸಿದ್ರು. ಅವರ ಬಳಿಯೇ 5 ಪರ್ಸೆಂಟ್ ತಂದುಕೊಡಿ ಎಂದು ಯಾರು ಕೇಳುತ್ತಿದ್ದಾರೆ ಎನ್ನುವುದನ್ನು ಸತ್ಯ ಹೇಳಿ. 40 ಪರ್ಸೆಂಟ್ ಎಂದು ಡಂಗೂರ ಹೊಡೆದುಕೊಂಡು ಬಂದರು. ಕಾಂಗ್ರೆಸ್ ನವರು ಯಾವ ಸಾಕ್ಷಿಯನ್ನ ಇಟ್ಟರು. ಅವನು ಯಾವನೋ ಗುತ್ತಿಗೆದಾರರ ಸಂಘದ ಪದಾಧಿಕಾರಿ ಆರೋಪ ಮಾಡಿದ್ದನಲ್ಲ ಸಾಕ್ಷಿ ಕೊಟ್ಟಿದ್ದಾನಾ? ಏಕೆ ಇವರು ಲೋಕಾಯುಕ್ತಕ್ಕೆ ದೂರು ಕೊಡಲಿಲ್ಲ ಎಂದು ಗುಡುಗಿದರು.

ಈಗ ನಿಮ್ಮದೆ ಸರ್ಕಾರ ಇದೆ. ಜನ ನಿಮಗೆ ಅಧಿಕಾರ ಕೊಟ್ಟಿದ್ದಾರೆ. 40 ಪರ್ಸೆಂಟ್ ಹೊರಗೆ ತನ್ನಿ. ಈ ಆಟ ನನ್ನ ಬಳಿ ನಡೆಯಲ್ಲ. ಏನೇನು ಮಾಡಿತ್ತಿದ್ದೀರಿ ಎನ್ನುವುದು ನನಗೆ ಗೊತ್ತಿದೆ. 675 ಕೋಟಿ ಎಲ್ ಒಸಿ ಯಾಕೆ ಬಿಡುಗಡೆ ಮಾಡಿಲ್ಲ. ಅದನ್ನ ಜನತೆ ಮುಂದೆ ಇಡಿ. ಇದು ಒಂದು ಸ್ಯಾಂಪಲ್ ಹೇಳುತ್ತಿದ್ದೇನೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

RELATED ARTICLES
- Advertisment -
Google search engine

Most Popular