ಮೈಸೂರು: ರಾಜ್ಯದಲ್ಲಿ ಸಿ.ಎಂ ಸಿದ್ದರಾಮಯ್ಯ- ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಉತ್ತಮ ಆಡಳಿತ ನೋಡಿ ಬಿಜೆಪಿ ಸಹಿಸುತ್ತಿಲ್ಲ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಕಿಡಿ ಕಾರಿದರು.
ಇಂದ ಶುಕ್ರವಾರ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಜನಾಂದೋಲನ ಸಮಾವೇಶ ದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ ಸರ್ಕಾರದ ಜನಪರ ತೀರ್ಮಾನ, ಒಳ್ಳೆಯ ಯೋಜನೆ ಅನುಷ್ಠಾನ ನೋಡಿ ಬಿಜೆಪಿ -ಜೆಡಿಎಸ್ ನವರಿಗೆ ಆತಂಕ ಉಂಟಾಗಿದೆ. ಹೀಗಾಗಿ ಸತ್ವ ಇಲ್ಲದ ಮೂಡ, ವಾಲ್ಮೀಕಿ ನಿಗಮ ವಿಚಾರ ಮುಂದಿಟ್ಟು ಪಾದಯಾತ್ರೆ ನಡೆಸುತ್ತಿದ್ದಾರೆ ಎಂದು ದೂರಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಒಂದೇ ವರ್ಷದಲ್ಲಿ ಐದು ಗ್ಯಾರಂಟಿ ಜಾರಿ ಮಾಡಿದೆ. ಆರನೇ ಗ್ಯಾರಂಟಿ ೨.೩೦ ಲಕ್ಷ ಬಡ ಕುಟುಂಬ ಗಳಿಗೆ ಉಚಿತವಾಗಿ ಮನೆ ಕಟ್ಟಿಕೊಡಲು ೮ ಸಾವಿರ ಕೋಟಿ ರೂ. ಭರಿಸಿದೆ. ಸಿದ್ದರಾಮಯ್ಯ ಅವಧಿ ಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ೩೫, ೪೧೯ ಮನೆ, ಮೈಸೂರು ಜಿಲ್ಲೆಯಲ್ಲಿ ೧ ಲಕ್ಷ ಮನೆ ನೀಡಲಾಗಿದೆ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ, ಬಿಜೆಪಿ ಅವರು ಮುಖ್ಯಮಂತ್ರಿ ಆಗಿದ್ದಾಗ ಕ್ರಮವಾಗಿ ೬೩೦, ೧೮೦೦ ಮನೆ ಕೊಟ್ಟಿದ್ದಾರೆ. ಇದು ಬಡವರ ಬಗ್ಗೆ ಇವರ ಕಾಳಜಿ. ಪಾದಯಾತ್ರೆ ಬರುತ್ತಿರುವ ಬಿಜೆಪಿ -ಜೆಡಿಎಸ್ ಮುಖಂಡರನ್ನು ರಾಜ್ಯದ ಅಭಿವೃದ್ಧಿ ಗೆ ನಿಮ್ಮ ಕೊಡುಗೆ ಏನು ಎಂದು ಜನತೆ ಪ್ರೆಶ್ನೆ ಮಾಡಬೇಕು ಎಂದು ಹೇಳಿದರು.