ಮಂಡ್ಯ: ಬಿಜೆಪಿ-ಜೆಡಿಎಸ್ ಪಕ್ಷದವರಿಗೆ ಜನರ ಕಷ್ಟ ಕಾರ್ಪಣ್ಯ ಬೇಕಿಲ್ಲ, ಅವರಿಗೆ ಬೇಡವಾದ ಪಾದಯಾತ್ರೆ ಮೇಲೆ ಪ್ರೀತಿ ಎಂದು ಮದ್ದೂರಿನ ಜನಾಂದೋಲನ ಸಭೆಯಲ್ಲಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.
ನಂತರ ಮಾತನಾಡಿ, ಅವರಿಗೆ ಕಳೆದ ಚುನಾವಣೆಯಲ್ಲಿ ಜನರ ಆಶೀರ್ವಾದ ಸಿಗಲಿಲ್ಲ, ಕುಮಾರಸ್ವಾಮಿ ಆಗ ಸಿಂಗಾಪುರದಲ್ಲಿ ಕುಳಿತು ಪತ್ರಿಕಾ ಷರತ್ತು ವಿಧಿಸಿ ಪ್ರಕಟಣೆ ಹೊರಡಿಸಿದ್ರು, ಆಗಿನಿಂದ ಅವರಿಗೆಲ್ಲ ಭ್ರಮ ನಿರಸನವಾಗಿದ್ರೆ, ಅವರಿಗೆ ನಿದ್ರೆ ಬರ್ತಿಲ್ಲ , ಅವರ ನಿದ್ರೆ ಬರಿಸುವ ಇಂಜೆಕ್ಷನ್ ಇನ್ನು ಸಿಕ್ಕಿಲ್ಲ.
ಅಧಿಕಾರ ಕಳೆದಕೊಂಡ ಮೇಲೆ ಇವರೆಲ್ಲ ವಿಚಿತ್ರವಾಗಿ ಆಡ್ತಿದ್ದಾರೆ ಎಂದು ಕುಮಾರಸ್ವಾಮಿ ವಿರುದ್ದ ಚಲುವರಾಯಸ್ವಾಮಿ ಕಿಡಿ ಕಾರಿದ್ದಾರೆ.
ಕುಮಾರಸ್ವಾಮಿ ದ್ವೇಷದ ರಾಜಕಾರಣ ಮಾಡ್ತಾರೆ, ಕುಮಾರಾಸ್ವಾಮಿ ಮಾತ್ರ ಪ್ರಾಮಾಣಿಕರು, ಶುದ್ದ ಹಸ್ತರೆಂದು ಚಲುವರಾಯಸ್ವಾಮಿ ವ್ಯಂಗ್ಯವಾಡಿದರು.
ಕುಮಾರಸ್ವಾಮಿ ಮಾತ್ರ ಮಣ್ಣಿನ ಮಗ ನಾವೆಲ್ಲ ಕಾರ್ಮಿಕರಾಗಿದ್ದವು. ಮೈತ್ರಿ ಪಕ್ಷದಲ್ಲಿ ಅಧಿಕಾರಕ್ಕಾಗಿ ಕಿತ್ತಾಟ ನಡೆತೀದೆ. ಪಾದಯಾತ್ರೆ ಮಾಡ್ತಿರೋ ಮೈತ್ರಿ ಪಕ್ಷದಲ್ಲಿ ಮೂರು ಗುಂಪಿದೆ. ಎರಡು ಬಿಜೆಪಿಯಲ್ಲಿ ಒಂದು ಜೆಡಿಎಸ್ ನಲ್ಲಿ ಮೂರು ಗುಂಪಿನಿಂದ ಇವರು ಪಾದಯಾತ್ರೆ ಮಾಡ್ತಿದ್ದಾರೆ. ಆದ್ರೆ ಮಾತ್ರ ನಮ್ಮಲ್ಲಿ ಮಾತ್ರ ಒಂದೇ ಗುಂಪು ಇರೋದು ಎಂದು ಬಹಿರಂಗ ಸಭೆಯಲ್ಲಿ ಎಚ್ಡಿಕೆ ವಿರುದ್ದ ಚಲುವರಾಯಸ್ವಾಮಿ ಆಕ್ರೋಶ ಹೊರ ಹಾಕಿದರು.
ನಂತರ ಸಚಿವ ಹೆಚ್.ಕೆ.ಪಾಟೀಲ್ ಮಾತನಾಡಿ, ಕರ್ನಾಟಕದಲ್ಲಿ ಹೊಸ ಗಾಳಿ ನಡೆದಿದೆ. ಸಿದ್ದರಾಮಯ್ಯ ನಾಯಕತ್ವದ ಸರ್ಕಾರವನ್ನು ಅಭದ್ರಗೊಳಿಸಲು ಮುಂದಾಗಿದ್ದಾರೆ. ಗ್ಯಾರಂಟಿ ಮೂಲಕ ಜನರಿಗೆ ಒಳ್ಳೆಯ ಕೆಲಸ ಮಾಡ್ತಿದ್ದಾರೆ. ಬಡವರ ಕಲ್ಯಾಣ ವನ್ನು ಸಹಿಸದೆ ಡಿಕೆ ಸಿದ್ದರಾಮಯ್ಯ ಕೆಡವಲು ಸಂಚು ಮಾಡಿದ್ದಾರೆ..
ಬಿಜೆಪಿ-ಜೆಡಿಎಸ್ ಇವತ್ತು ದೊಡ್ಡ ರೀತಿಯಲ್ಲಿ ಹುನ್ನಾರ ನಡೆದಿದೆ.
ಮುಡಾ ಸೈಟ್ ಹಂಚಿಕೆ ಮಾಡಿದನ್ನ ಪಾದಯಾತ್ರೆ ಮಾಡ್ತಿದ್ದಾರೆ. ಪಾದಯಾತ್ರೆ ರಾಜಕೀಯ ನಾಟಕ ಮಾಡಿದ್ದಾರೆ. ರಾಜಭವನದ ಸಹಾಯದಿಂದ ಸಿದ್ದರಾಮಯ್ಯ ಕುರ್ಚಿ ಅಲುಗಾಡಿಸಲು ಯಡಿಯೂರಪ್ಪ ಪ್ಲಾನ್ ಮಾಡಿದ್ದಾರೆ. ಅಮೀತ್ ಷಾ ಅವರ ಪರ ನಿಂತಿದ್ದಾರೆ. ಸಿದ್ದರಾಮಯ್ಯ ಮುಡಾ ದಲ್ಲಿ ಸೈಟ್ ಪಡೆದಿದ್ದಾರಾ? ಸಿದ್ದರಾಮಯ್ಯ ಪತ್ನಿ ಅವರ ಭೂಮಿಯನ್ನ ಮುಡಾ ತೆಗೆದುಕೊಂಡಿದ್ರು ಪರ್ಯಾಯವಾಗಿ ಸೈಟ್ ಕೊಟ್ಟಿದ್ದಾರೆ. ಯಡಿಯೂರಪ್ಪ ಸಿಎಂ ಆಗಿದ ಸಂದರ್ಭದಲ್ಲಿ ಈ ಸೈಟ್ ಹಂಚಿಕೆಯಾಗಿದೆ. ಆರ್.ಅಶೋಕ್ ಸೇರಿ ವಿಜಯೇಂದ್ರ ಆರೋಪ ಮಾಡ್ತಾರೆ.
ಸಿದ್ದರಾಮಯ್ಯ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯ ವಿರುದ್ದ ಆರೋಪ ಬಂದ ತಕ್ಷಣವೇ ವಿಚಾರಣೆಗೆ ಒಳಗೊಂಡಿದಿದ್ದಾರೆ. ಅವರು ದೊಡ್ಡ ನಾಯಕ . ಸಿದ್ದರಾಮಯ್ಯ ಸಿಎಂ ಗಿರಿ ಹೋಗಲು ಷಡ್ಯಂತ್ರ.
ರಾಜ್ಯಪಾಲರು ಸಿಎಂ ಗೆ ನೋಟಿಸ್ ಕೊಟ್ಟಿದ್ದಾರೆ. ಅಬ್ರಹಾಂ ಅವರು ದೂರಿನ ಮೇರೆಗೆ ನೋಟಿಸ್ ನೀಡಿದ್ದಾರೆ.
ನಮ್ಮ ಸರ್ಕಾರಕ್ಕೆ ರಾಜ್ಯಪಾಲರು ಮುಡಾ ವಿಚಾರವಾಗಿ ಪತ್ರ ಬರೆದಿದ್ದಾರೆ. ಸಿಎಂ ಸಿದ್ದರಾಮಯ್ಯ ಇದಕ್ಕೆಲ್ಲ ಸ್ಪಷ್ಟೀಕರಣ ಕೊಟ್ಟಿದ್ದಾರೆ. ಚುನಾಯಿತ ಮುಖ್ಯಮಂತ್ರಿಗೆ ವಿನಾಕಾರಣವಾಗಿ ನೋಟಿಸ್ ಕೊಟ್ಟಿದ್ದರೆ ಅದು ಕರ್ನಾಟಕದ ರಾಜ್ಯಪಾಲರು ಮಾತ್ರ ರಾಜಭವನದಲ್ಲಿ ರಾಜ್ಯಪಾಲರು ನ್ಯಾಯಯುತವಾಗಿ ಕೆಲಸ ಮಾಡಬೇಕು.
ಯಾವ ಕಾರಣಕ್ಕೆ ಸಿಎಂ ಗೆ ನೋಟಿಸ್ ಕೊಟ್ಟಿದ್ದಿರಿ? ನಿರಾಣಿ ಅವರ ಮೇಲೆ ಯಾಕೆ ಅವರ ವಿರುದ್ದ ಕ್ರಮ ಇಲ್ಲ.?
ಇದು ಯಾವ ನ್ಯಾಯ ಯಾವ ಕಾನೂನು ಮೇಲೆ ನಡೆದುಕೊಳ್ಳುತ್ತಿದ್ದಿರಿ.? ರಾಜ್ಯಪಾಲರು ಮಾಡಿರುವ ಕ್ರಮ ಅನ್ಯಾಯದ ಕ್ರಮ ಕನ್ನಡ ನಾಡಿನ ಜನತೆ ಸುಮ್ಮನಿರಲ್ಲ. ಬಿಜೆಪಿ-ಜೆಡಿಎಸ್ ಹುನ್ನಾರ,ಕುತಂತ್ರ ಜನರಿಗೆ ಗೊತ್ತಿದೆ.
ಕನ್ನಡಿಗರಿಗೆ ಆಶೀರ್ವಾದದ ಮೇಲೆ ನಮ್ಮ ಸರ್ಕಾರ ಇದೆ.
ಬಿಜೆಪಿ-ಜೆಡಿಎಸ್ ನಾಯಕರು ಎಚ್ಚರಿಕೆಯಿಂದ ಇರಿ.ಪಾದಯಾತ್ರೆಗೆ ಜನಾಂದೋಲನದ ಮೂಲಕ ತಕ್ಕ ಉತ್ತರ ಕೊಟ್ಟಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.