Monday, April 14, 2025
Google search engine

Homeರಾಜಕೀಯಬಿಜೆಪಿ– ಜೆಡಿಎಸ್‌ ಅಸ್ತಿತ್ವ ಉಳಿಸಿಕೊಳ್ಳಲು ಬೇರೆ ಬೇರೆ ಆಗಬೇಕಾಗುತ್ತದೆ: ಜಿ.ಪರಮೇಶ್ವರ್‌

ಬಿಜೆಪಿ– ಜೆಡಿಎಸ್‌ ಅಸ್ತಿತ್ವ ಉಳಿಸಿಕೊಳ್ಳಲು ಬೇರೆ ಬೇರೆ ಆಗಬೇಕಾಗುತ್ತದೆ: ಜಿ.ಪರಮೇಶ್ವರ್‌

ಹುಬ್ಬಳ್ಳಿ: ಬಿಜೆಪಿ– ಜೆಡಿಎಸ್‌ ಒಂದಿಲ್ಲ, ಒಂದು ದಿನ ಬೇರೆ ಬೇರೆ ಆಗುತ್ತಾರೆ. ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಬೇರೆ ಬೇರೆ ಆಗಬೇಕಾಗುತ್ತದೆ  ಎಂದು ಗೃಹ ಸಚಿವ ಜಿ.ಪರಮೇಶ್ವರ್‌ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಎರಡೂ ಪಕ್ಷದವರು ಸ್ವಲ್ಪದಿನ ಒಟ್ಟಿಗೆ ಇರಬಹುದು. ಆ ನಂತರ ಬೇರೆ ಆಗುತ್ತಾರೆ. ಜೆಡಿಎಸ್‌ನವರು ಹಿಂದೆ ನಮ್ಮ ಜೊತೆ ಸೇರಿದ್ದರು. ಸರ್ಕಾರವನ್ನೂ ರಚಿಸಿದ್ದರು. ಕೆಲದಿನಗಳ ನಂತರ ನಮ್ಮನ್ನು ಬಿಟ್ಟುಹೋದರು. ಅದೇ ರೀತಿ ಈ ಸಲವೂ ಆಗುತ್ತದೆ  ಎಂದು ಹೇಳಿದರು.

ಮುಡಾ ಪ್ರಕರಣದಲ್ಲಿ ಕಾನೂನು ಬಾಹಿರವಾಗಿ ಏನೂ ನಡೆದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಬಿಜೆಪಿ, ಜೆಡಿಎಸ್‌ನ ಕೆಲವರಿಗೆ ಅರ್ಥವಾಗಿದೆ. ಆದರೆ, ಕೆಲವರಿಗೆ ಅರ್ಥವಾಗಿಲ್ಲ. ಪ್ರತಿಭಟನೆ ನಡೆಸಿದ್ದಾರೆ ಎಂದರು.

RELATED ARTICLES
- Advertisment -
Google search engine

Most Popular