Saturday, April 19, 2025
Google search engine

Homeರಾಜ್ಯಬಿಜೆಪಿ ನಾಯಕ ಎಲ್​​ಆರ್​ ಶಿವರಾಮೇಗೌಡಗೆ ಬಂಧನ ಭೀತಿ: ಜಾಮೀನಿಗಾಗಿ ಕೋರ್ಟ್​ ಮೊರೆ

ಬಿಜೆಪಿ ನಾಯಕ ಎಲ್​​ಆರ್​ ಶಿವರಾಮೇಗೌಡಗೆ ಬಂಧನ ಭೀತಿ: ಜಾಮೀನಿಗಾಗಿ ಕೋರ್ಟ್​ ಮೊರೆ

ಬೆಂಗಳೂರು: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಗೆ 20 ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದ ಭೀತಿಯಿಂದಾಗಿ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಕೇಸ್​ನಲ್ಲಿ ಈಗಾಗಲೇ ನಿರೀಕ್ಷಣಾ ಜಾಮೀನು ಪಡೆದಿರುವ ಎಲ್.ಆರ್.ಶಿವರಾಮೇಗೌಡ ಇದೀಗ ಯೂನಿಯನ್‌‌ ಬ್ಯಾಂಕ್ ವಂಚನೆ ಕೇಸ್​ನಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಆಕ್ಷೇಪಣೆ ಸಲ್ಲಿಸಲು ಸಿಬಿಐ ಪರ ಅಭಿಯೋಜಕರು ಕಾಲಾವಕಾಶ ಕೋರಿದ್ದು, ಆಕ್ಷೇಪಣೆ ಸಲ್ಲಿಸುವಂತೆ ಸಿಬಿಐಗೆ ಸೂಚಿಸಿ ವಿಚಾರಣೆಯನ್ನು ಆ.7ಕ್ಕೆ ಮುಂದೂಡಲಾಗಿದೆ.

ಜಮೀನು ಮಾಲೀಕರೊಂದಿಗೆ ಸೇರಿ ಬ್ಯಾಂಕ್​ಗಳಿಂದ 32 ಕೋಟಿ ರೂ. ಪಡೆದುಕೊಳ್ಳಲಾಗಿದೆ. ಶಾಲೆಯ ಬಾಡಿಗೆಯ ಹಣವನ್ನು ಬ್ಯಾಂಕ್​ಗೆ ನೀಡುವುದಾಗಿ ಒಡಂಬಡಿಕೆ ಮಾಡಲಾಗಿದೆ.

ಇನ್ನು ಎಲ್.ಆರ್.ಶಿವರಾಮೇಗೌಡ ರಾಯಲ್ ಕಾನ್​ಕಾರ್ಡ್ ಸಂಸ್ಥೆಯ ಟ್ರಸ್ಟಿ ಆಗಿದ್ದು, ವರ್ತೂರಿನ ಅಂಬಲೀಪುರದ ಜಮೀನಿನ ಮೇಲೆ ಮಾಲೀಕರು ಸಾಲ ಪಡೆದಿದ್ದಾರೆ. ಒಪ್ಪಂದದಂತೆ ಸಾಲ ತೀರಿಸದೇ ಇದ್ದಾಗ ವಂಚನೆ ಆರೋಪದಡಿ ಸಿಬಿಐ ಕೇಸ್​ ದಾಖಲಿಸಲಾಗಿದೆ.

RELATED ARTICLES
- Advertisment -
Google search engine

Most Popular