Monday, April 7, 2025
Google search engine

Homeರಾಜಕೀಯ'ಮುಡಾ ಭ್ರಷ್ಟಾಚಾರದಲ್ಲಿ ಬಿಜೆಪಿ ಮುಖಂಡರದ್ದು ಸಿಂಹಪಾಲು' ; ಶೀಘ್ರದಲ್ಲೇ ದಾಖಲೆ ಬಿಡುಗಡೆ : ಶಾಸಕ ಹರೀಶ್...

‘ಮುಡಾ ಭ್ರಷ್ಟಾಚಾರದಲ್ಲಿ ಬಿಜೆಪಿ ಮುಖಂಡರದ್ದು ಸಿಂಹಪಾಲು’ ; ಶೀಘ್ರದಲ್ಲೇ ದಾಖಲೆ ಬಿಡುಗಡೆ : ಶಾಸಕ ಹರೀಶ್ ಗೌಡ

ಮೈಸೂರು: ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಮತ್ತವರ ಕುಟುಂಬ ಯಾವುದೇ ತಪ್ಪು ಮಾಡಿಲ್ಲ, ಅವರು ನ್ಯಾಯಯುತವಾಗಿದ್ದಾರೆ. ಆದರೇ, ಆರೋಪ ಮಾಡುತ್ತಿರುವ ಬಿಜೆಪಿ ಮುಖಂಡರಿಂದಲೇ ಹೆಚ್ಚಿನ ಭ್ರಷ್ಟಾಚಾರ ನಡೆದಿದ್ದು, ಶೀಘ್ರದಲ್ಲೆ ಇದರ ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ಶಾಸಕ ಕೆ.ಹರೀಶ್‌ಗೌಡ ಹೊಸ ಬಾಂಬ್ ಸಿಡಿಸಿದರು.

ಮಂಗಳವಾರ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಮುಡಾ ಭ್ರಷ್ಟಾಚಾರ ಕುರಿತು ದಾಖಲೆಗಳನ್ನು ಸಂಗ್ರಹ ಮಾಡುತ್ತಿದ್ದೇನೆ. ತಕ್ಷಣದಲ್ಲೆ ಇದೆಲ್ಲವನ್ನೂ ದೇಸಾಯಿ ಆಯೋಗ, ಲೋಕಾಯುಕ್ತ ತನಿಖೆಗೆ ನೀಡಿ ಮಾದ್ಯಮಗಳಿಗೂ ಬಿಡುಗಡೆ ಮಾಡಲಾಗುವುದು ಎಂದು ಶಾಸಕ ಹರೀಶ್ ಗೌಡ ಹೇಳಿದರು.

ಮುಡಾದಲ್ಲಿ ಹಗರಣ ನಡೆದಿರುವುದು ನಿಜ. ಆದರೆ, ಸಿಎಂ ಪ್ರಕರಣದಲ್ಲಿ ಯಾವುದೇ ಕಾನೂನು ಉಲ್ಲಂಘನೆ ಆಗಿಲ್ಲ. ೧೦ ವರ್ಷದ ಹಿಂದೆ ಅರ್ಜಿ ಸಲ್ಲಿಸಿದ್ದರ ಪರಿಣಾಮ, ಮುಡಾ ಕಾನೂನು ಪ್ರಕಾರ ನಿವೇಶನ ನೀಡಿದೆ. ಆದರೆ, ನಿಜಕ್ಕೂ ಮುಡಾದಲ್ಲಿ ಹಗರಣ ಮಾಡಿರುವವರು ಯಾರು ಎಂಬ ಮಾಹಿತಿ ಕಲೆ ಹಾಕುತ್ತಿದ್ದು, ಶೀಘ್ರದಲ್ಲೇ ದಾಖಲೆಯ ಪಟ್ಟಿ ಬಿಡುಗಡೆ ಮಾಡಲಾಗುವುದು. ಅದನ್ನು ಲೋಕಾಯುಕ್ತಕ್ಕೂ ದೂರು ನೀಡುತ್ತೇನೆ. ಜತೆಗೆ ಸರ್ಕಾರ ರಚಿಸಿರುವ ದೇಸಾಯಿ ಆಯೋಗಕ್ಕೂ ಮಾಹಿತಿ ನೀಡುತ್ತೇನೆ ಎಂದರು.

ಇನ್ನೂ ವಿಶ್ವನಾಥ್ ಆರೋಪ ಕುರಿತು ಮಾತನಾಡಿ, ಅವರು ಹಿರಿಯರು ಎಂಬ ಕಾರಣಕ್ಕೆ ಸುಮ್ಮನಾಗಿದ್ದೇನೆ. ಇಲ್ಲದಿದ್ದರೆ ಅವರ ವಿರುದ್ಧ ಮಾನನಷ್ಟ ಮೊಕ್ಕದ್ದಮೆ ದಾಖಲಿಸುತ್ತಿದ್ದೆ. ಅವರ ಮತ್ತು ಮತ್ತೊಬ್ಬ ಸಾಮಾಜಿಕ ಕಾರ್ಯಕರ್ತ ಹೇಳಿರುವಂತೆ ಮುಡಾದಲ್ಲಿ ನಾನಾಗಲಿ ಮತ್ತು ನನ್ನ ಕುಟುಂಬದವರಾತಲಿ ಒಂದು ನಿವೇಶನ ಪಡೆದಿದ್ದರೆ ಅಥವಾ ಹಣಕಾಸಿನ ಲಾಭ ಪಡೆದಿದ್ದನ್ನು ಸಾಬೀತು ಮಾಡಿದರೆ, ಸಾರ್ವಜನಿಕ ಜೀವನದಿಂದಲೇ ದೂರ ಉಳಿಯುತ್ತೇನೆ. ವಿಶ್ವನಾಥ್ ಅವರು ಯಾವುದೇ ದಾಖಲೆ ಇಲ್ಲದೆ, ಇಂತಹ ಆರೋಪ ಮಾಡುವುದು ಸರಿಯಲ್ಲ ಎಂದು ಎಚ್ವರಿಕೆ ನೀಡಿದರು.

ಈ ಹಿಂದೆ ಮುಡಾದಿಂದ ಆಂದೋಲನ ವೃತ್ತದಲ್ಲಿ ೧೭ ಎಕರೆ ಭೂಮಿಯನ್ನು ಸೊಸೈಟಿಯೊಂದಕ್ಕೆ ನೀಡುವ ಪ್ರಯತ್ನ ನಡೆದಿತ್ತು. ಅದನ್ನು ಗಮನಿಸಿ ತಡೆಯುವ ಕೆಲಸ ಮಾಡಿದ್ದೇನೆ. ಈಗಲೂ ಅಂತಹದು ಗಮನಕ್ಕೆ ಬಂದರೆ ತಡೆಯುವುದಾಗಿ ಹೇಳಿದರು.

೧೩ ಕುಟುಂಬಗಳ ಹಕ್ಕು ಪತ್ರನೀಡಲು ಕ್ರಮ

ಹಲವು ವರ್ಷಗಳ ಹಿಂದೆ ಕುಕ್ಕರಹಳ್ಳಿ ಗ್ರಾಮದಲ್ಲಿ ೧೩ ಕುಟುಂಬಕ್ಕೆ ಮನೆ ನಿರ್ಮಾಣಕ್ಕೆ ಅವಕಾಶ ನೀಡಲಾಗಿತ್ತು. ಆದರೆ, ಅಂದು ಅಧಿಕಾರಿಗಳು ರಾಜಕಾಲುವೆ ಎಂದು ಹೇಳಿ ಅವರಿಗೆ ಹಕ್ಕುಪತ್ರ ಕೊಟ್ಟಿಲ್ಲ. ಈ ಸಂಬಂಧ ಈಗ ಅಧಿಕಾರಿಗಳ ಜತೆ ನಾನೇ ಸ್ಥಳ ಪರಿಶೀಲಿಸಿ ಅವರಿಗೆ ಹಕ್ಕು ಪತ್ರ ಕೊಡುವ ಬಗ್ಗೆ ಕ್ರಮಹಿಸುವುದಾಗಿ ಹೇಳಿದರು.

ಇನ್ನೂ ಲ್ಯಾನ್ಸ್ ಡೌನ್ ಕಟ್ಟಡ ಸಂಪೂರ್ಣವಾಗಿ ಕೆಡವಿ ಕಟ್ಟುವ ಬಗ್ಗೆ ಚರ್ಚೆ ನಡೆಯುತ್ತಿದೆ. ದೇವರಾಜ ಮಾರುಕಟ್ಟೆಯನ್ನು ಸಹ ಕೆಡವಿ ಕಟ್ಟಬೇಕಾಗಿದೆ. ಈ ಬಗ್ಗೆ ಸಿಎಂ ಅವರೊಂದಿಗೂ ಚರ್ಚಿಸಲಾಗಿದೆ. ಶೀಘ್ರ ಪರಿಹಾರ ಕಲ್ಪಿಸಲಾಗುವುದು. ಇನ್ನೂ ಮಹಾರಾಣಿ ಕಾಲೇಜು ಹಾಗೂ ವಸತಿ ನಿಲಯ ನಿರ್ಮಾಣಕ್ಕೆ ಟೆಂಡರ್ ಕರೆದಿದ್ದು, ಶೀಘ್ರ ಕಾಮಗಾರಿಗೆ ಚಾಲನೆ ಸಿಗಲಿದೆ ಎಂದು ತಿಳಿಸಿದರು.

RELATED ARTICLES
- Advertisment -
Google search engine

Most Popular