Friday, April 4, 2025
Google search engine

Homeರಾಜಕೀಯಸಂಸದ ಕೆ.ಸುಧಾಕರ್ ನಿಂದಲೇ ರಾಜ್ಯದಲ್ಲಿ ಬಿಜೆಪಿ ಸೋತಿದ್ದು : ಎಂ.ಪಿ ರೇಣುಕಾಚಾರ್ಯ ಆಕ್ರೋಶ

ಸಂಸದ ಕೆ.ಸುಧಾಕರ್ ನಿಂದಲೇ ರಾಜ್ಯದಲ್ಲಿ ಬಿಜೆಪಿ ಸೋತಿದ್ದು : ಎಂ.ಪಿ ರೇಣುಕಾಚಾರ್ಯ ಆಕ್ರೋಶ

ದಾವಣಗೆರೆ : ಸದ್ಯಕ್ಕೆ ರಾಜ್ಯ ಬಿಜೆಪಿ ನಾಯಕರಲ್ಲಿ ಎಲ್ಲವೂ ಸರಿಯಿಲ್ಲ. ಒಬ್ಬೊಬ್ರದು ಒಂದೊಂದು ಬಣವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಿರುದ್ಧ ಮುಗಿಬಿದ್ದಿದ್ದಾರೆ. ಒಂದು ಕಡೆ ಶಾಸಕ ಯತ್ನಾಳ್ ಕಿಡಿ ಕಾರಿದರೆ ಇನ್ನೊಂದು ಕಡೆ ಸಂಸದ ಡಾ. ಕೆ ಸುಧಾಕರ್ ಅವರು ನಿನ್ನೆ ವಾಗ್ದಾಳಿ ನಡೆಸಿದ್ದಾರೆ. ಕೆ ಸುಧಾಕರ್ ಮಾತನಾಡಿರುವ ವಿಚಾರವಾಗಿ ಮಾಜಿ ಶಾಸಕ ಎಂ ಪಿ ರೇಣುಕಾಚಾರ್ಯ ಇವರಿಂದಲೇ ರಾಜ್ಯದಲ್ಲಿ ಬಿಜೆಪಿ ಸೋತಿದ್ದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಾವಣಗೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿವೈ ವಿಜಯೇಂದ್ರ ವಿರುದ್ಧ ಸಂಸದ ಸುಧಾಕರ್ ಸಮಾಧಾನ ವಿಚಾರವಾಗಿ ಸುಧಾಕರ್ ವಿರುದ್ಧ ಏಕವಚನದಲ್ಲಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಬಗ್ಗೆ ಮಾತನಾಡಿದರೆ ಹುಷಾರ್ ನಿನ್ನ ಬಂಡವಾಳ ಬೈಲು ಮಾಡುತ್ತೇನೆ. ನೀನು ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಸಚಿವ ಸ್ಥಾನ ಕೊಡಲಿಲ್ಲ. ಆಗ ನೀನು ಇಂಧನ ಸಚಿವ ಆಗಬೇಕು ಎಂದು ಪಟ್ಟು ಹಿಡಿದಿದ್ದೆ. ಕಾಂಗ್ರೆಸ್ ಪಕ್ಷದಲ್ಲಿ ಏನು ಆಗದೆ ಇದ್ದಾಗ ಬಿಜೆಪಿಗೆ ಬಂದೆ. ಜಗಳ ಮಾಡಿದ್ದಕ್ಕೆ ಹೊನ್ನಾಳಿಯಲ್ಲಿ 200 ಹಾಸಿಗೆ ಆಸ್ಪತ್ರೆ ನಿರ್ಮಾಣ ಮಾಡಲಾಯಿತು.

ಕೆ ಸುಧಾಕರ್ ನಂತಹ ವ್ಯಕ್ತಿಯಿಂದಲೇ ನಾವು ಸೋತಿದ್ದು, ಸಚಿವನಾಗಿದ್ದಾಗ ಅವರು ಮಾಡಬಾರದಂತಹ ಕೆಲಸ ಮಾಡಿದ್ದಾರೆ. ಇವರು ನಡೆದುಕೊಂಡ ರೀತಿಯಿಂದಲೇ ಬಿಜೆಪಿ ರಾಜ್ಯದಲ್ಲಿ ಸೋತಿದೆ. ನಿಮಗೆ ತಾಕತ್ತಿದ್ದರೆ ಕನಕಪುರ ವರುಣಾದಲ್ಲಿ ಪಾದಯಾತ್ರೆ ಮಾಡಿ. ಇದನ್ನು ಬಿಟ್ಟು, ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ವಾಗ್ದಾಳಿ ನಡೆಸುವುದು ಸರಿಯಲ್ಲ. ಶಾಸಕ ಯತ್ನಾಳ ಜೆಡಿಎಸ್ ಗೆ ಯಾಕೆ ಹೋಗಿದ್ದೆ? ಟಿಪ್ಪು ಖಡ್ಗ ಹಿಡಿದೆ? ಯತ್ನಾಳ್ ಹಿಂದೂನೇ ಅಲ್ಲ ಎಂದು ರೇಣುಕಾಚಾರ್ಯ ದಾವಣಗೆರೆಯಲ್ಲಿ ಮಾಜಿ ಶಾಸಕ ಎಂಕಾಚಾರ್ಯ ವಾಗ್ದಾನ ನಡೆಸಿದರು.

RELATED ARTICLES
- Advertisment -
Google search engine

Most Popular