ಮಂಗಳೂರು (ದಕ್ಷಿಣ ಕನ್ನಡ): ಕಾರಣಾಂತರದಿಂದ ಬಿಜೆಪಿ ಮಂಗಳೂರಲ್ಲಿ ಗೆದ್ದಿರಬಹುದು. ಮಂಗಳೂರಲ್ಲಿ ಈ ಸಲ ಬದಲಾವಣೆ ಆಗುತ್ತೆ ಎಂದು ವಿಧಾನಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ವಿಶ್ವಾಸ ವ್ಯಕ್ತಪಡಿಸಿದರು.
ಮಂಗಳೂರಿನಲ್ಲಿ ಮಾತನಾಡಿದ ಅವರು, ಹಿಂದುತ್ವದ ಕೋಟೆ ಮಹಾರಾಷ್ಟ್ರದಲ್ಲೇ ಇಲ್ಲ. ಮಹಾರಾಷ್ಟ್ರದಲ್ಲಿ ಹಿಂದುತ್ವದ ಕೋಟೆ ಎಂಬುದನ್ನು ಸೃಷ್ಟಿ ಮಾಡಿದ್ದು ಸಾವರ್ಕರ್ ಎಂದು ಹೇಳಿದ್ದಾರೆ.
ಖರೀದಿ ಮಾಡಿ ಹಿಂದೂತ್ವದ ಕೋಟೆ ಕಟ್ಟೊಕ್ಕಾಗಲ್ಲ. ರಾಜಮಹಾರಾಜರ ಕೋಟೆಗಳೇ ಓಡೆದು ಹೋಗಿವೆ ಎಂದು ಹೇಳಿದರು.