Thursday, January 29, 2026
Google search engine

Homeರಾಜಕೀಯಮನ್ರೇಗಾ ಜಾಹೀರಾತು ಖಂಡಿಸಿ ಬಿಜೆಪಿ ಶಾಸಕರ ಸಭಾತ್ಯಾಗ!

ಮನ್ರೇಗಾ ಜಾಹೀರಾತು ಖಂಡಿಸಿ ಬಿಜೆಪಿ ಶಾಸಕರ ಸಭಾತ್ಯಾಗ!

ಬೆಂಗಳೂರು : ಮನರೇಗಾ ವಿಚಾರದಲ್ಲಿ ಪಂಚಾಯತ್‌ ರಾಜ್‌ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ನೀಡಿರುವ ಜಾಹೀರಾತನ್ನು ಖಂಡಿಸಿ ಇಂದು ಬಿಜೆಪಿ ಶಾಸಕರು ವಿಧಾನಸಭೆಯಲ್ಲಿ ಸಭಾತ್ಯಾಗ ಮಾಡಿದರು.

ಈ ವೇಳೆ ಮುಂದೂಡಿದ ಸದನ ಮತ್ತೆ ಸಮಾವೇಶಗೊಂಡಾಗ ಇದೇ ವಿಚಾರದ ಬಗ್ಗೆ ಕಾಂಗ್ರೆಸ್‌‍ ಮತ್ತು ಬಿಜೆಪಿ ಶಾಸಕರ ನಡುವೆ ವಾಗ್ವಾದ, ಆರೋಪ-ಪ್ರತ್ಯಾರೋಪಗಳು ನಡೆದಿದ್ದು, ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಮಾತನಾಡಿ, ಜನರ ತೆರಿಗೆ ಹಣವನ್ನು ಬಳಸಿ ಜಾಹೀರಾತು ನೀಡಿರುವುದು ತಪ್ಪು. ಮಹಾತ್ಮ ಗಾಂಧೀಜಿಯವರಿಗೂ ಅಪಮಾನ ಮಾಡಿದ್ದಾರೆ. ಕೇಂದ್ರ ಸರ್ಕಾರ ನಡೆಯುತ್ತಿರುವುದು ಕರ್ನಾಟಕದ ಜನರ ತೆರಿಗೆ ಹಣದಿಂದಲೇ ಹೊರತು ಕಾಂಗ್ರೆಸ್‌‍ನವರಿಂದಲ್ಲ ಎಂದು ಆಕ್ಷೇಪಿಸಿದರು.

ಸುದೀರ್ಘ ವಾಗ್ವಾದದ ನಂತರ ಬಲವಾಗಿ ಜಾಹೀರಾತು ನೀಡಿರುವುದನ್ನು ಸಚಿವ ಪ್ರಿಯಾಂಕ್‌ ಖರ್ಗೆ ಸಮರ್ಥಿಸಿಕೊಂಡರು. ಇದರಿಂದ ತೃಪ್ತರಾಗದೇ ಬಿಜೆಪಿ ಶಾಸಕರು ಸಭಾತ್ಯಾಗ ಮಾಡಿದರು.

RELATED ARTICLES
- Advertisment -
Google search engine

Most Popular