ಚಿಕ್ಕಬಳ್ಳಾಪುರ : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ವಿಪಕ್ಷಗಳು ಪಾದಯಾತ್ರೆ ಮುಂದುವರೆಸಿದ್ದು, ಆಗಸ್ಟ್ ೧೦ ರಂದು ಮೈಸೂರಿನಲ್ಲಿ ಸಮಾರೋಪ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಚಿಕ್ಕಬಳ್ಳಾಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರಿಗೆ ಯಾವುದೇ ಮಾರ್ಗದಿಂದ ಆದರೂ ಅಧಿಕಾರ ಬೇಕಾಗಿದೆ. ಅಧಿಕಾರ ಬಿಟ್ಟು ಬಿಜೆಪಿ ಅವರಿಗೆ ಇರಲು ಸಾಧ್ಯವಾಗುತ್ತಿಲ್ಲ ಎಂದು ಚಿಕ್ಕಬಳ್ಳಾಪುರದಲ್ಲಿ ಇಂಧನ ಇಲಾಖೆಯ ಸಚಿವ ಕೆಜೆ ಜಾರ್ಜ್ ವಾಗ್ದಾಳಿ ನಡೆಸಿದರು.
ಕೈ ಸರ್ಕಾರ ಬೀಳುತ್ತೆ ಅಂತ ಅಧಿಕಾರಿಗಳನ್ನು ಹೆದರಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ರಾಜ್ಯ ಕಾಂಗ್ರೆಸ್ ಸರ್ಕಾರ ಪತನವಾಗುವುದಿಲ್ಲ. ಸಿಎಂ ಸಿದ್ದರಾಮಯ್ಯ ಜೊತೆಗೆ ಕಾಂಗ್ರೆಸ್ಸಿನ ೧೩೬ ಶಾಸಕರು ಇದ್ದೇವೆ. ಮುಡಾ ಹಗರಣದಲ್ಲಿ ಸಿಎಂ ವಿರುದ್ಧ ಸುಮ್ಮನೆ ಆರೋಪ ಮಾಡುತ್ತಿದ್ದಾರೆ.ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರದ್ದು ಏನು ತಪ್ಪು ಇಲ್ಲ. ಸಿದ್ದರಾಮಯ್ಯ ಪಾತ್ರದ ಬಗ್ಗೆ ಇದುವರೆಗೂ ವಿಪಕ್ಷಗಳು ದಾಖಲೆಗಳನ್ನು ಕೊಟ್ಟಿಲ್ಲ. ಲಾಭವಾಗುತ್ತೆ ಅಂದರೆ ಎಚ್ ಡಿ ಕುಮಾರಸ್ವಾಮಿ ಯಾವುದೇ ಗೌಡರ ಜೊತೆಯು ಹೋಗುತ್ತಾರೆ. ಪಾದಯಾತ್ರೆಯಲ್ಲಿ ಜೆಡಿಎಸ್ ಭಾಗಿಯಾಗಲ್ಲವೆಂದು ಹೇಳಿ ಇದೀಗ ಪಾದಯಾತ್ರೆಗೆ ಹೋಗಿದ್ದಾರೆ ಎಂದು ಹೇಳಿದರು.