Sunday, April 20, 2025
Google search engine

Homeರಾಜ್ಯಬಹುಸಂಖ್ಯಾತರನ್ನು ಓಲೈಸಲು ರಾಷ್ಟ ಧ್ವಜ ಹಾರಿಸಿದ ಬಿಜೆಪಿ: ಬಿ.ಕೆ. ಹರಿಪ್ರಸಾದ್ ಆರೋಪ

ಬಹುಸಂಖ್ಯಾತರನ್ನು ಓಲೈಸಲು ರಾಷ್ಟ ಧ್ವಜ ಹಾರಿಸಿದ ಬಿಜೆಪಿ: ಬಿ.ಕೆ. ಹರಿಪ್ರಸಾದ್ ಆರೋಪ

ಮಂಗಳೂರು(ದಕ್ಷಿಣ ಕನ್ನಡ): ನಾಗ್ಪುರದ ಆರ್‌ ಎಸ್‌ ಎಸ್ ಕಚೇರಿಯಲ್ಲಿ 52 ವರ್ಷಗಳಲ್ಲಿ ಒಮ್ಮೆಯೂ ರಾಷ್ಟ ಧ್ವಜ ಹಾರಿಸದ ಬಿಜೆಪಿ ಬಹುಸಂಖ್ಯಾತರನ್ನು ಓಲೈಸಲು ಈ ಕೃತ್ಯ ಮಾಡಿದೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಆರೋಪಿಸಿದ್ದಾರೆ.

ಮಂಗಳೂರಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಯ ನಂತರ ರಾಜ್ಯದ ಕಾಂಗ್ರೆಸ್ ಸರಕಾರ ಪತನವಾಗಲಿದೆ ಎಂದು ವಿಧಾನಸಭೆಯ ವಿಪಕ್ಷ ನಾಯಕ ಆರ್. ಅಶೋಕ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯಲ್ಲಿ ಬಹಳಷ್ಟು ಮಂದಿ ಮುಖ್ಯ ಮಂತ್ರಿ ಹುದ್ದೆಗೆ ಸರದಿಯಲ್ಲಿ ಕಾಯುತ್ತಿದ್ದಾರೆ. ಅವರಲ್ಲಿ ಅಶೋಕ್ ಕೂಡಾ ಒಬ್ಬರು. ಆರ್. ಅಶೋಕ್ ತಿರುಕನ ಕನಸು ಕಾಣುತ್ತಿ ದ್ದಾರೆ. ಅವರ ಮುಖ್ಯಮಂತ್ರಿ ಕನಸು ನನಸಾಗದು ಎಂದರು.

ಮಾಜಿ ಮುಖ್ಯ ಮಂತ್ರಿ ಜಗದೀಶ್ ಶೆಟ್ಟರ್ ಯಾವುದೇ ಪಕ್ಷದಲ್ಲಿರಲಿ ಸೌಮ್ಯ ಸ್ವಭಾವದ ವ್ಯಕ್ತಿ ಅವರು. ಅವರು ಕಾಂಗ್ರೆಸ್‌ಗೆ ಸೇರಿ ಬೇಗನೆ ಬಿಟ್ಟು ಹೋಗಿದ್ದಾರೆ. ಅವರನ್ನು ಕಾಂಗ್ರೆಸ್ ಪಕ್ಷ ಉಳಿಸಿಕೊಳ್ಳಬೇಕಾಗಿತ್ತು ಎಂದು ಹೇಳಿದರು.

ರಾಜ್ಯಸಭೆಗೆ ಚುನಾವಣೆ ಘೋಷಣೆ ಆಗಿದೆ. ನೀವು ಸ್ಪರ್ಧಿಸುವಿರಾ ಎಂಬ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಹರಿಪ್ರಸಾದ್ ಈ ಬಗ್ಗೆ ಯೋಚನೆ ಮಾಡಿಲ್ಲ. ವಿಧಾನ ಪರಿಷತ್‌ನಲ್ಲಿ ಇನ್ನೂ ಎರಡು ವರ್ಷ ಅಧಿಕಾರದ ಅವಧಿ ಇದೆ ಎಂದು ಸ್ಪಷ್ಟಪಡಿಸಿದರು.

RELATED ARTICLES
- Advertisment -
Google search engine

Most Popular