Friday, April 4, 2025
Google search engine

Homeರಾಜಕೀಯಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸಿದ್ಧಗಂಗಾ ಮಠಕ್ಕೆ ಭೇಟಿ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸಿದ್ಧಗಂಗಾ ಮಠಕ್ಕೆ ಭೇಟಿ

ತುಮಕೂರು: ಬಿಜೆಪಿ ರಾಜ್ಯಾಧ್ಯಕ್ಷರಾದ ನಂತರ ಮೊದಲ ಬಾರಿಗೆ ತುಮಕೂರಿನ ಸಿದ್ದಗಂಗಾ ಮಠಕ್ಕೆ ಬಿ.ವೈ ವಿಜಯೇಂದ್ರ ಭೇಟಿ ನೀಡಿ ಡಾ. ಶಿವಕುಮಾರ ಸ್ವಾಮೀಜಿ ಗದ್ದುಗೆ ದರ್ಶನ ಪಡೆದು , ನಂತರ ಶ್ರೀ ಸಿದ್ದಲಿಂಗ ಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

ಶ್ರೀ ಸಿದ್ದಲಿಂಗ ಸ್ವಾಮೀಜಿ ಭೇಟಿ ಬಳಿಕ ತುಮಕೂರಿನ ಸಿದ್ದಗಂಗಾ ಮಠದಲ್ಲಿ ವಿಜಯೇಂದ್ರ ಬಿ.ವೈ ಮಾತನಾಡಿ, ವರಿಷ್ಟರಾದ ನಡ್ಡಾ, ಅಮಿತ್ ಷಾ, ಸಂತೋಷ್ ಜೀ ಎಲ್ಲಾರು ಚರ್ಚೆ ಮಾಡಿ ಪಾರ್ಟಿ ಅಧ್ಯಕ್ಷ ಮಾಡಿದ್ದಾರೆ.‌ ಅಧಿಕಾರ ವಹಿಸಿಕೊಳ್ಳುವ ಮುನ್ನ ಸಿದ್ದಗಂಗಾ ಮಠಕ್ಕೆ ಭೇಟಿ ಕೊಟ್ಟು ಆಶೀರ್ವಾದ ಪಡೆಯಲು ಬಂದಿದ್ದೇನೆ.

ಪೂಜ್ಯ ತಂದೆ ಯಡಿಯೂರಪ್ಪ ಯಾವುದೇ ನಿರ್ಣಯ ತೆಗೆದುಕೊಳ್ಳುವ ಮುನ್ನ ಶಿವಕುಮಾರ ಸ್ವಾಮೀಜಿ ಆಶೀರ್ವಾದ ಪಡೆದುಕೊಳ್ಳುತ್ತಿದ್ದರು. ಮುಂದಿನ ಬುಧವಾರ 15ನೇ ತಾರೀಖು ಬೆಂಗಳೂರು ಬಿಜೆಪಿ ಕಚೇರಿ ಜಗನಾಥ ಭವನದಲ್ಲಿ ಬೆಳಗ್ಗೆ 10 ಗಂಟೆಗೆ ಪಕ್ಷದ ಅಧ್ಯಕ್ಷನಾಗಿ ಜವಾಬ್ದಾರಿ ಸ್ವೀಕಾರ ಮಾಡುತ್ತಿದ್ದೇನೆ. ನಳೀನ್ ಕುಮಾರ್ ಕಟೀಲ್ ಜೀ ಯಶಸ್ವಿಯಾಗಿ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಕಟ್ಟಿದ್ರು. 16ನೇ ತಾರೀಖು ಗುರುವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೆಳಗ್ಗೆ 11 ಗಂಟೆಗೆ ಕಾರ್ಯಕರ್ತರ ಸಭೆ ನಿಶ್ಚಯ ಮಾಡಿದ್ದೇವೆ.

ಪಕ್ಷದ ಎಲ್ಲಾ‌ ಹಿರಿಯ ಮುಖಂಡರು ಯಡಿಯೂರಪ್ಪ, ಬಸವರಾಜು ಬೊಮ್ಮಾಯಿ, ಈಶ್ವರಪ್ಪ ಸದಾನಂದಗೌಡರು.ಗೋವಿಂದ ಕಾರಜೋಳ, ಯತ್ನಾಳ್, ಸೋಮಣ್ಣ, ಎಲ್ಲಾ ಹಿರಿಯ ಸಮುಖದಲ್ಲಿ ಜವಾಬ್ದಾರಿ ಸ್ವೀಕಾರ ಮಾಡುತ್ತಿದ್ದೇವೆ.ರಾಷ್ಟ್ರೀಯ ನಾಯಕರಿಗೆ ಚುನಾವಣೆ ಇರುವುದರಿಂದ ಬರುತ್ತಿಲ್ಲ. ‌ಕೇಂದ್ರದ ವೀಕ್ಷಕರು ಬರಲಿದ್ದಾರೆ.ಶುಕ್ರವಾರದೊಳಗೆ ಬಿಜೆಪಿ ಪಕ್ಷದ ಶಾಸಕಾಂಗ ಸಭೆ ಕರೆಯಲಿದ್ದೇವೆ.

ಸಂಜೆಯೊಳಗೆ ನಿರ್ಧಾರವಾಗುತ್ತೆ.ಬರ ವಿಚಾರ, ರೈತರನ್ನು ಕಾಡುತ್ತಿರುವ ಬರಕ್ಕೆ ಯಾವ ರೀತಿ ಪರಿಹಾರ ಮಾಡಬೇಕು ಅಂತ ಪಕ್ಷದ ಮುಖಂಡರೊಂದಿಗೆ ಚರ್ಚೆ ಮಾಡುತ್ತೇವೆ.

ಕೆಲ ಮುಖಂಡರ ಅಸಮಧಾನ ವಿಚಾರವಾಗಿ ಪ್ರತಿಕ್ರಿಯಿಸಿ,ದೊಡ್ಡ ಪಕ್ಷವಿದೆ ಸಣ್ಣ ಪುಟ್ಟ ಅಸಮಧಾನವಿದೆ. ಮಾಧುಸ್ವಾಮಿ ಕಾಲಿಗೆ ಪ್ರಾಬ್ಲಂ‌ ಆಗಿದೆ ಅದಕ್ಕೆ ಬಂದಿಲ್ಲ.ಎಲ್ಲಾರನ್ನು ಒಗ್ಗೂಡಿಸಿಕೊಂಡು ಹೋಗುತ್ತೇನೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದ ಮುಖಂಡರ ಸಲಹೆ ವಿಚಾರವಾಗಿ ಮಾತನಾಡಿ, ಎಲ್ಲಾ‌ ಹಿರಿಯರು ಸಲಹೆ ನೀಡುತ್ತಾರೆ. ಕಾಂಗ್ರೆಸ್ ಪಕ್ಷದ ಮುಖಂಡರು ನಮ್ಮ‌ ಮೇಲಿನ ಪ್ರೀತಿಯಿಂದ ಸಲಹೆ ನೀಡುತ್ತಾರೆ.‌ ಯಡಿಯೂರಪ್ಪ ಸೈಡ್ ಲೈನ್ ವಿಚಾರವಾಗಿ ಯಾರನ್ನು ಸೈಡ್ ಲೈನ್ ಮಾಡಿಲ್ಲ, ಚುನಾವಣೆಯಲ್ಲಿ ನಮಗೆ ಹಿನ್ನಡೆಯಾಗಿರಬಹುದು. ಎಲ್ಲಾವನ್ನು ಬದಿಗಿಟ್ಟು ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳಿಸಲು ಪ್ರಯತ್ನಿಸುತ್ತೇವೆ. ವಿರೋಧ ಪಕ್ಷ ನಾಯಕನ ಆಯ್ಕೆ ಬಳಿಕ ಕೇಂದ್ರಕ್ಕೆ‌ ಭೇಟಿ ಕೊಟ್ಟು ಮುಂದೆ ಯಾವ ರೀತಿ ನಡಿಬೇಕು ಅಂತ ಸಲಹೆ ಪಡೆಯುತ್ತೇನೆ ಎಂದು ಸಿದ್ಧಗಂಗಾ ಮಠದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು.

RELATED ARTICLES
- Advertisment -
Google search engine

Most Popular