ಮದ್ದೂರು: ಮದ್ದೂರು ಪಟ್ಟಣದಲ್ಲಿರುವ ಎಳೆನೀರು ಮಾರುಕಟ್ಟೆಗೆ ಬಿಜೆಪಿ ರಾಜ್ಯ ರೈತ ಮೋರ್ಚ ಪ್ರಧಾನ ಕಾರ್ಯದರ್ಶಿ ಡಾ.ನವೀನ್ ಧೀಡಿರ್ ಭೇಟಿ ನೀಡಿದ್ದಾರೆ.
ಎಳೆನೀರು ಮಾರುಕಟ್ಟೆಯ ಆವರಣ ಪರಿಶೀಲನೆ ಹಾಗೂ ವಹಿವಾಟು, ಮೂಲಭೂತ ಸೌಕರ್ಯಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ.
ರೈತರ ಜೊತೆ ಮಾತುಕತೆ ನಡೆಸಿ ಸಮಸ್ಯೆ ಗಳನ್ನು ನವೀನ್ ಆಲಿಸಿದ್ದಾರೆ.
ಬಳಿಕ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾರುಕಟ್ಟೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದು, ಎಳೆನೀರು ಮಾರುಕಟ್ಟೆ ಅವ್ಯವಸ್ಥೆ ಬಗ್ಗೆ ಕಿಡಿಕಾರಿದ್ದಾರೆ.
ಈ ವೇಳೆ ಮಾತನಾಡಿದ ಡಾ.ನವೀನ್, ಪಕ್ಷದ ವತಿಯಿಂದ ಮಾರುಕಟ್ಟೆಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸುತ್ತಿದ್ದೇವೆ. ಸರಿಯಾದ ಶೌಚಾಲಯದ ವ್ಯವಸ್ಥೆ, ರೈತರು ಉಳಿದುಕೊಳ್ಳಲು ರೂಮ್ ವ್ಯವಸ್ಥೆ ಇಲ್ಲ. ಎಳೆನೀರು ಎಲ್ಲಂದರಲ್ಲಿ ಬಿದ್ದಿವೆ. ಮದ್ದೂರು ಎಳೆನೀರು ಮಾರುಕಟ್ಟೆ ಅವ್ಯವಸ್ಥೆಯಿಂದ ಕೂಡಿದೆ. ಮೂಲಭೂತ ಸೌಕರ್ಯ ಇಲ್ಲ, ಕ್ಯಾಂಟಿನ್ ವ್ಯವಸ್ಥೆ ಇಲ್ಲ. ಸರ್ಕಾರ ರೈತರ ಮೇಲೆ ದೌರ್ಜನ್ಯ ನಡೆಸುತ್ತಿದೆ. ಈ ವ್ಯವಸ್ಥೆ ಸರಿಪಡಿಸಲ್ಲವಾದರೆ ದೊಡ್ಡ ಹೋರಾಟ ಮಾಡ್ತೇವೆ ಎಂದು ಹೇಳಿದರು.
ಮಾರುಕಟ್ಟೆಯಲ್ಲಿನ ಅವ್ಯವಸ್ಥೆ ಬಗ್ಗೆ ಸರಿಪಡಿಸುವ ಬಗ್ಗೆ ಅಧಿಕಾರಿಗಳು ತಿಳಿಸಿದ್ದಾರೆ. ಮೂರು ತಿಂಗಳ ಗಡುವು ಕೊಡಲಾಗಿದೆ ಇಲ್ಲದಿದ್ದರೆ ದೊಡ್ಡ ಹೋರಾಟದ ಎಚ್ಚರಿಕೆ ಕೊಟ್ಟಿದ್ದೇವೆ. ಪತ್ರ ಬರಿದಿದ್ದೇವೆ ಅಂತಾರೆ, ರೈತರಿಗೆ ಸರಿಯಾದ ರೀತಿಯಲ್ಲಿ ಸೌಲಭ್ಯ ಕಲ್ಪಿಸಬೇಕು. ಕ್ರಿಯಾಶೀಲ ಸರ್ಕಾರ ಕೊಡ್ತೇವೆ ಅಂತ ವಾಗ್ದಾನ ಕೊಡ್ತಾರೆ. ಬೋರ್ಡ್ ಇಲ್ಲ, ಇದಕ್ಕೆಲ್ಲ ಸರ್ಕಾರವೇ ಜವಾಬ್ದಾರಿ ಹೊರಬೇಕು ಎಂದು ಹೇಳಿದರು.
ಡಾ.ನವೀನ್ ಗೆ ಬಿಜೆಪಿ ಮುಖಂಡ ಅಶೋಕ್ ಜಯರಾಮ್ ಸೇರಿ ಹಲವರು ಸಾಥ್ ನೀಡಿದ್ದಾರೆ.