Friday, April 4, 2025
Google search engine

Homeರಾಜ್ಯಬಿಜೆಪಿಯವರು ಆಪರೇಷನ್ ಕಮಲ ಮಾಡಲು ಯತ್ನಿಸಿದ್ದರು : ಸಚಿವ ಬೋಸರಾಜ್ ಆರೋಪ

ಬಿಜೆಪಿಯವರು ಆಪರೇಷನ್ ಕಮಲ ಮಾಡಲು ಯತ್ನಿಸಿದ್ದರು : ಸಚಿವ ಬೋಸರಾಜ್ ಆರೋಪ

ಹುಬ್ಬಳ್ಳಿ : ಕಳೆದ ಕೆಲವು ದಿನಗಳ ಹಿಂದೆ ಮಂಡ್ಯ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ಅವರು ಬಿಜೆಪಿ ಅವರು ಕಾಂಗ್ರೆಸ್ ಶಾಸಕರಿಗೆ ೧೦೦ ಕೋಟಿ ಆಫರ್ ನೀಡಿ ಖರೀದಿಸುತ್ತಿದ್ದಾರೆ ಎಂದು ಸ್ಪೋಟಕ ವಾದಂತಹ ಆರೋಪ ಮಾಡಿದ್ದರು. ಇದಾದ ಬಳಿಕ ಇದೀಗ ಸಚಿವ ಎನ್.ಎಸ್ ಬೋಸರಾಜ್ ಅವರು, ನಮ್ಮ ಪಕ್ಷದ ೯ ಜನರನ್ನು ಸಂಪರ್ಕಿಸಿದ್ದು, ಈ ಮೂಲಕ ಬಿಜೆಪಿ ಆಪರೇಷನ್ ಕಮಲಕ್ಕೆ ಯತ್ನಿಸಿದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಸಂಪರ್ಕಿಸಿದ ೨೪ ಗಂಟೆಯಲ್ಲಿ ನನಗೆ ಮಾಹಿತಿ ಬಂತು. ಉತ್ತರ ಕರ್ನಾಟಕದವರು ಸೇರಿ ಕೆಲವರನ್ನು ಸಂಪರ್ಕಿಸಿದ್ದರು. ಆಪರೇಷನ್ ಕಮಲದ ಮೊದಲ ಪ್ರಯೋಗ ಬಯಲಾಯಿತು.ನಮ್ಮವರಿಗೆ ೧೦೦ ಕೋಟಿ ಅಥವಾ ೫೦ ಕೋಟಿ ಆಮಿಷ ಇರಬಹುದು. ಆದರೆ ಆಫರ್ ಮಾಡಿದ್ದಂತು ನಿಜ ಎಂದು ಸಚಿವ ಬೋಸರಾಜ್ ಸ್ಪೋಟಕವಾದಂತ ಹೇಳಿಕೆ ನೀಡಿದ್ದಾರೆ. ಉತ್ತರ ಕರ್ನಾಟಕದ ೬ರಿಂದ ೭ ಜನ ಇದ್ದಾರೆ.

ಸರ್ಕಾರದ ವಿರುದ್ಧ ಕುಮಾರಸ್ವಾಮಿ, ದೇವೇಗೌಡರು ಕುತಂತ್ರ ನಡೆಸಿದ್ದಾರೆ. ಅಮಿತ್ ಶಾ ಗೆ ಇಬ್ಬರು ಸೇರಿಕೊಂಡು ಮಾತುಕೊಟ್ಟಿದ್ದಾರೆ. ೬ ತಿಂಗಳಲ್ಲಿ ಸರ್ಕಾರ ತೆಗೆಯುತ್ತೇವೆ ಎಂದು ಮಾತು ಕೊಟ್ಟಿದ್ದಾರೆ.ಪ್ಲಾನ್ ಮತ್ತು ಕುತಂತ್ರ ಮಾಡೋರು ಅವರಿಬ್ಬರೇ. ಅಪ್ಪ ಮಗ ಸೇರಿಕೊಂಡು ಕುತಂತ್ರವನ್ನು ಮಾಡುತ್ತಿದ್ದಾರೆ. ಅವರ ಮಾತನ್ನು ಬಿಜೆಪಿಯವರು ಕೇಳುತ್ತಿದ್ದಾರೆ. ಕೊನೆಗೆ ಬಿಜೆಪಿಯವರು ಜೀರೋ ಆಗುತ್ತಾರೆ ಇದೀಗ ಮೂಡ ಹಗರಣ ತಂದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

RELATED ARTICLES
- Advertisment -
Google search engine

Most Popular