ಮಂಗಳೂರು (ದಕ್ಷಿಣ ಕನ್ನಡ): ದೆಹಲಿಯಲ್ಲಿ ಬಿಜೆಪಿಯು ಅತೀ ಹೆಚ್ಚಿನ ಬಹುಮತದಿಂದ ವಿಜಯಶಾಲಿಯಾದ ಪ್ರಯುಕ್ತ ಇಂದು ಮಧ್ಯಾಹ್ನ ಮಂಗಳೂರು ನಗರದ ಪಿವಿಎಸ್ ಸರ್ಕಲ್ ಬಳಿ ಇರೋ ಬಿಜೆಪಿ ಜಿಲ್ಲಾ ಕಚೇರಿಯ ಮುಂದೆ ವಿಜಯೋತ್ಸವ ನಡೆಯಿತು.
ಇದೇ ವೇಳೆ ಮಂಗಳೂರು ನಗರದ ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಹಾಗೂ ಮಂಗಳೂರು ನಗರ ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ, ಪಾಲಿಕೆ ಮೇಯರ್ ಮನೋಜ್ ಕುಮಾರ್ ಸೇರಿದಂತೆ ಬಿಜೆಪಿ ನಾಯಕರು ಕಾರ್ಯಕರ್ತರು ಹಾಜರಿದ್ದರು. ಹಾಗೂ ಇದೇ ವೇಳೆ ಸಿಹಿಯನ್ನು ಹಂಚಿ ಪಟಾಕಿಯನ್ನು ಸಿಡಿಸಿ ಸಂಭ್ರಮಾಚರಣೆ ಮಾಡಲಾಯಿತು.
