ಪಶ್ಚಿಮ ಬಂಗಾಳ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ೨೦೦ ಸ್ಥಾನಗಳ ಗಡಿ ಮುಟ್ಟುವ ಸಾಧ್ಯತೆಗಳೂ ಇಲ್ಲ. ಇಂಡಿಯಾ ಒಕ್ಕೂಟವು ೩೦೦ ಸ್ತಾನಗಳ ಗಡಿಯನ್ನು ಸುಲಭವಾಗಿ ದಾಟುತ್ತದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಉತ್ತರ ೨೪ ಪರಗಣದ ಬೊಂಗಾವ್‌ನಲ್ಲಿ ನಡೆದ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಅವರು ಮಾತನಾಡಿದರು. ಇಂಡಿಯಾ ಒಕ್ಕೂಟವು ಕನಿಷ್ಠ ೩೧೫ ಸ್ಥಾನಗಳನ್ನು ಗೆಲ್ಲುತ್ತದೆ. ಬಿಜೆಪಿ ಹೆಚ್ಚೆಂದರೆ ೧೯೫ ಸ್ಥಾನಗಳನ್ನು ಗೆಲ್ಲಬಹುದು ಎಂದಿದ್ದಾರೆ. ಪ್ರಧಾನಿ ಮೋದಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂದಿರುವ ಬ್ಯಾನರ್ಜಿ, ಈ ಬಾರಿ ಇಂಡಿಯಾ ಕೂಟ ಅಧಿಕಾರಕ್ಕೆ ಬರುವುದು ಖಚಿತ. ಜೂನ್ ನಂತರ ದೆಹಲಿಯಲ್ಲಿ ಮೋದಿ ಇರುವುದಿಲ್ಲ. ಇಂಡಿಯಾ ಕೂಟ ಕನಿಷ್ಠ ೩೧೫ ಸೀಟುಗಳನ್ನು ಪಡೆಯಲಿದೆ ಎಂದು ಹೇಳಿದ್ದಾರೆ.