ಮಂಗಳೂರು (ದಕ್ಷಿಣ ಕನ್ನಡ): ಮಂಗಳೂರಿನ ಜೈಲಿನಲ್ಲಿ ಆಳವಡಿಸಿರುವ ಜಾಮರ್‌ನಿಂದಾಗಿ ಸಾರ್ವಜನಿಕರಿಗೆ ವಿಪರೀತ ತೊಂದರೆಯಾಗುತ್ತಿದೆ. ಆದ್ರೆ ಸಂಬಂಧಪಟ್ಟವರು ನಮ್ಮ ಯಾವುದೇ ಮನವಿಗೂ ಸ್ಪಂದಿಸುತ್ತಿಲ್ಲ.
ಹಾಗಾಗಿ, ಏಪ್ರಿಲ್ 3 ರ ರೊಳಗೆ ಜೈಲಿನ ಜಾಮರ್ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ಏಪ್ರಿಲ್ 4 ನೇ ತಾರೀಕಿನಂದು ಸಾರ್ವಜನಿಕರ ಪರವಾಗಿ ಬಿಜೆಪಿ ಕಾರ್ಯಕರ್ತರೆಲ್ಲರೂ ಸೇರಿಕೊಂಡು ರಾಸ್ತಾ ರೋಕೋ ನಡೆಸಿ, ಜೈಲಿನೊಳಗೆ ನುಗ್ಗಿ ಜಾಮರ್ ಕಿತ್ತು ಬಿಸಾಕ ಬೇಕಾಗುತ್ತದೆ ಎಂದು ಮಂಗಳೂರು ನಗರದ ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಎಚ್ಚರಿಕೆ ನೀಡಿದ್ದಾರೆ.