ಮಂಗಳೂರು(ದಕ್ಷಿಣ ಕನ್ನಡ): ರಾಮ ಮಂದಿರ ಲೋಕಾರ್ಪಣೆ ಕಾರ್ಯಕ್ರಮವನ್ನು ಬಿಜೆಪಿ ರಾಜಕೀಯ ಮಾಡುತ್ತಿದೆ. ಅಲ್ಲದೇ ಬಿಜೆಪಿಯ ಜನಪ್ರತಿನಿಧಿಗಳು, ಜವಾಬ್ದಾರಿ ಸ್ಥಾನದಲ್ಲಿರುವವರು ಜನರ ನಡುವೆ ಕಂದಕ ಸಷ್ಟಿಸುವ ಕೆಲಸ ಮಾಡುತ್ತಿದ್ದು, ಇದನ್ನು ರಾಮ ಕೂಡ ಮೆಚ್ಚಲ್ಲ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಟೀಕಿಸಿದ್ದಾರೆ.
ಅವರು ಮಂಗಳೂರಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಅಯೋಧ್ಯೆ ವಿಚಾರ ವಿವಾದ ಕೋರ್ಟ್ ನಲ್ಲಿ ಇತ್ಯರ್ಥ ಆಗಿದೆ. ಇದರಲ್ಲಿ ರಾಜಕೀಯ ಮಾಡುವ ಔಚಿತ್ಯವೇನು..? ಬಿಜೆಪಿ ಜನಪ್ರತಿನಿಧಿಗಳು ಅವಿದ್ಯಾವಂತರು ಮಾತನಾಡುವ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಹುಬ್ಬಳ್ಳಿಯಲ್ಲಿ ಇಬ್ಬರ ಮೇಲೆ ಹಳೆಯ ಕ್ರಿಮಿನಲ್ ಪ್ರಕರಣ ಇತ್ತು. ನ್ಯಾಯಾಲಯದ ಆಜ್ಞೆ ಪ್ರಕಾರ ಅವರನ್ನು ಬಂಧಿಸಲಾಗಿದೆ. ಇದನ್ನೂ ರಾಜಕೀಯಕ್ಕೆ ಬಳಸುವುದು ಎಷ್ಟು ಸರಿ? ಈ ಬಗ್ಗೆ ಹೇಳಿಕೆ ನೀಡುವಾಗ ಸಾಮಾನ್ಯ ಜ್ಞಾನ ಹೊಂದಿರಬೇಕು ಎಂದು ಸ್ಥಳೀಯ ಶಾಸಕರ ಹೇಳಿಕೆಯನ್ನು ಉಲ್ಲೇಖಿಸಿ ಅವರು ಪ್ರತಿಕ್ರಿಯಿಸಿದರು.