ಕೊಳ್ಳೇಗಾಲ: ಮಾಜಿ ಶಾಸಕ ಎನ್.ಮಹೇಶ್ ರವರು ನೆನ್ನೆ ಹಲ್ಲೆಗೊಳಗಾಗಿದ್ದ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಕಿರಣ್ ಕುಮಾರ್ ಯೋಗಕ್ಷೇಮ ವಿಚಾರಿಸಲು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದರು.
ಈ ಸಂಧರ್ಭದಲ್ಲಿ ಮಾಧ್ಯಮದರ ಜೊತೆ ಮಾತನಾಡಿದ ಇವರು ನೆನ್ನೆ ಹಲ್ಲೆ ನಡೆದ ಸ್ಥಳದಲ್ಲಿ ಮಳಿಗೆ ಮಾರಮ್ಮನ ಜಾತ್ರೆಯ ತಂಪು ಉತ್ಸವ ಇತ್ತು. ಹಬ್ಬ ಹರಿದಿನಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಿರುತ್ತದೆ. ಯಾವುದೇ ಹಬ್ಬ ನಡೆದರೂ ಪೊಲೀಸ್ ಬಂದ್ ಬಸ್ತ ಮಾಡಬೇಕು. ನೆನ್ನೆ ಈ ಸ್ಥಳದಲ್ಲಿ ಪೊಲೀಸ್ ಇದಿದ್ದರೇ ಈ ಘಟನೆ ನಡೆಯುತ್ತಿರಲಿಲ್ಲ. ಕಿರಣ್ ಕುಮಾರ್ ಮೇಲೆ ಹಲ್ಲೆ ಮಾಡಿದವರು ಪ್ರವೀಣ್, ಚಂದು, ಪ್ರಶಾಂತ್, ಪ್ರಜ್ವಲ್ ನಾಲ್ಕು ಮಂದಿ ಕುಡಿದು ಕಿರಣ್ ಸ್ನೇಹಿತ ಚೇತನ್ ಎಂಬುವನ ಪೋನ್ ನಂಬರ್ ಕೊಡು ಮಾತನಾಡಬೇಕು ಎಂದಿದ್ದಾರೆ. ಅವಾಗ ಇವರು ನಂಬರ್ ಗೊತ್ತಿಲ್ಲ ಬೆಳಿಗ್ಗೆ ಮಾತನಾಡೋಣ ಎಂದು ಹೇಳಿ ಬುದ್ಧಿ ಹೇಳಿದಾಗ ಏಕಾಏಕಿ ಕುಡಿದ ಮತ್ತಿನಲ್ಲಿ ಇವರು ನಾಲ್ಕು ಮಂದಿ ಕಿರಣ್ ಮೇಲೆ ಹಲ್ಲೆ ನಡೆಸಿದ್ದಾರೆ. ಕೆಲವು ಮಾಧ್ಯಮದಲ್ಲಿ ಬಂದಿರುವಂತೆ ಇದು ರಾಜಕೀಯ ಸಂಬಂಧಪಟ್ಟ ಗಲಾಟೆ ಅಲ್ಲ ಎಂದು ತಿಳಿಸಿದ್ದಾರೆ. ನಾನು ಪೊಲೀಸ್ ವೈಫಲ್ಯದ ಬಗ್ಗೆ ಡಿಐಜಿ ಅವರನ್ನು ಭೇಟಿ ಮಾಡಿ ಕೊಳ್ಳೇಗಾಲದಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆ ಬಗ್ಗೆ ಗಮನಹರಿಸಿ ಮುಂದೆ ಇಂತಹ ಗಲಾಟೆಗಳು ಆಗದಂತೆ ಗಮನಹರಿಸುವಂತೆ ತಿಳಿಸಲು ನಾಳೆ ಭೇಟಿ ಮಾಡುತ್ತಿದ್ದೇನೆ. ಸ್ಥಳೀಯ ಪೊಲೀಸ್ ಠಾಣೆಯ ಅಧಿಕಾರಗಳು ತಪಿಸ್ಥರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ಎಚ್ಚರಿಕೆ ನೀಡುತ್ತಿದ್ದೇನೆ ಎಂದು ತಿಳಿಸಿದರು. ಕಿರಣ್ ಕುಮಾರ್ ಚೇತರಿಸಿಕೊಳ್ಳುತ್ತಿದ್ದು ಒಂದೆರಡು ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆಂದು ತಿಳಿಸಿದರು.