ಮಂಡ್ಯ: ಸದನದ ಸಮಯ ಹಾಳುಮಾಡೋದೆ ಬಿಜೆಪಿಯವರ ಅಜೆಂಡಾ. ಹಗರಣ ಸಂಬಂಧ ಮುಚ್ಚು ಮರೆಯಿಲ್ಲದೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮದ್ದೂರಿನಲ್ಲಿ ಶಾಸಕ ಕದಲೂರು ಉದಯ್ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅವರದೇ ಪಕ್ಷದ ಸಭಾಪತಿಗಳಿದ್ದಾರೆ. ಅವರು ಸಹ ಚರ್ಚೆಯನ್ನ ನಿರಾಕರಿಸಿದ್ದಾರೆ. ಆದ್ರೂ ಕೂಡ ಪ್ರತಿಭಟನೆ ಮಾಡ್ತಾರೆ ಅಂದರೆ ಅವರ ಉದ್ದೇಶ ಪ್ರತಿಭಟನೆ ಮಾಡೋದೆ ಉದ್ದೇಶ. ವಿರೋಧ ಪಕ್ಷದ ಕರ್ತವ್ಯ ವಿರೋಧ ಮಾಡೋದೆ ಅಂತ ಭಾವಿಸಿಕೊಂಡಿದ್ದಾರೆ. ವಸ್ತು ಸ್ಥಿತಿ ಅರಿತು ಚರ್ಚೆ ಮಾಡುವ ಕೆಲಸ ಮಾಡ್ತಿಲ್ಲ. ಸದನದ ಸಮಯ ಹಾಳುಮಾಡೋದೆ ಅವರ ಅಜೆಂಡಾ. ಹಾಗಾಗಿ ಅವರು ಪ್ರತಿಭಟನೆ ಮಾಡ್ತಿದ್ದಾರೆ. ಹಗರಣ ಸಂಬಂಧ ಮುಚ್ಚುಮರೆಯಿಲ್ಲದೆ ತನಿಖೆಯಾಗುತ್ತದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತೆ. ಎಂದು ಹೇಳಿದರು.