Friday, April 18, 2025
Google search engine

Homeರಾಜ್ಯಸುದ್ದಿಜಾಲರಾಜ್ಯದ ಕಲಾವಿದರ ವೇತನ ಮಂಜೂರು ಮಾಡುವಂತೆ ಬಿಜೆಪಿಯ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಸ್ಟ ಅಗ್ರಹ

ರಾಜ್ಯದ ಕಲಾವಿದರ ವೇತನ ಮಂಜೂರು ಮಾಡುವಂತೆ ಬಿಜೆಪಿಯ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಸ್ಟ ಅಗ್ರಹ

ರಾಜ್ಯಾದ್ಯಂತ ಹೋರಾಟಕ್ಕೆ ಎಚ್ಚರಿಕೆ ನೀಡಿದ ಬಿಜೆಪಿಯ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಸ್ಟ ರಾಜ್ಯ ಸಂಚಾಲಕರಾದ ರೂಪ ಅಯ್ಯರ್

ಬೆಂಗಳೂರು: ಬಿಜೆಪಿಯ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಸ್ಟ ವತಿಯಿಂದ ಬೆಂಗಳೂರಿನ ಕನ್ನಡ ಭವನದಲ್ಲಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾದ ಡಾ. ಕೆ ಧರಣಿ ದೇವಿ ರವರಿಗೆ ಕಲೆ ಮತ್ತು ಸಂಸ್ಕೃತಿ ಪ್ರಕೋಷ್ಠ ರಾಜ್ಯ ಸಂಚಾಲಕರಾದ ರೂಪ ಅಯ್ಯರ್ ಹಾಗೂ ಸಹ ಸಂಚಾಲಕರಾದ ಆತ್ಮಾನಂದ ಮನವಿ ಪತ್ರ ಸಲ್ಲಿಸಿದರು.

ಮನವಿ ಪತ್ರದಲ್ಲಿ ಕಲೆ ಮತ್ತು ಸಂಸ್ಕೃತಿ ಇಲಾಖೆಗೆ ರಾಜ್ಯದ ಕಲೆ ಸಂಸ್ಕೃತಿ ಮತ್ತು ಭಾಷೆಗೆ ಸರ್ಕಾರದಿಂದ ಸಿಗುವ ಅನುದಾನ ಮತ್ತು ಸಹಕಾರವನ್ನು ಕಲಾವಿದರಿಗೆ ಕಲೆ, ಸಂಸ್ಕೃತಿಗೆ ಬಳಸಬೇಕಾದ ಇಲಾಖೆ ಈ ಬಗ್ಗೆ ಅಸಡ್ಡೆ ತೋರುತ್ತಿರುವುದು ದುಃಖಕರವಾಗಿದೆ .ಈಗಾಗಲೇ ಕಲಾಸಂಸ್ಥೆಗಳು ನಿರಂತರವಾಗಿ ಕಾರ್ಯಕ್ರಮಗಳನ್ನು ತಮ್ಮ ಖರ್ಚಿನಲ್ಲೇ ನಿರ್ವಹಿಸಿ ತೊಂದರೆಗೆ ಒಳಗಾಗಿದ್ದಾರೆ. ಈಗಾಗಲೇ 23 -24 ನೇ ಸಾಲಿನ ಧನಸಹಾಯ ಮಂಜೂರಾಗಿದ್ದು 30% ಹಾಗೂ 40% ರಂತೆ ಬಿಡುಗಡೆ ಮಾಡಿದೆ ಇನ್ನ ಉಳಿದ ಧನಸಹಾಯವನ್ನು ಒಂದೇ ಕಂತಿನಲ್ಲಿ ಮಾಡಬೇಕೆಂದು ಈ ಪತ್ರದ ಮೂಲಕ ಒತ್ತಾಯಿಸುತ್ತೇವೆ.

ಕಲಾತಂಡಗಳಿಗೆ ನೀಡುವ ಇಲಾಖೆಯ ಪ್ರಯೋಜನೆಯನ್ನು ಒಂದೇ ವ್ಯಕ್ತಿಗೆ ಕೊಡುತ್ತಿದ್ದು ಇದರಿಂದ ಜನಪದ ಕಲಾತಂಡಗಳಿಗೆ ,ವಿಶೇಷ ಘಟಕ ಕಲಾತಂಡಗಳಿಗೆ ಪ್ರೋತ್ಸಾಹ ದೊರಕದಂತಾಗಿದೆ .ಇಲಾಖೆಯ ಅಧಿಕಾರಿಗಳ ನಿರಂತರ ಸಂಪರ್ಕದಲ್ಲಿರುವಂತ ನಗರ ಪ್ರದೇಶದ ವ್ಯಕ್ತಿಗಳಿಗೆ ಪ್ರಯೋಜನ ನೀಡುವ ಹಗರಣವನ್ನು ಕೂಡಲೇ ನಿಲ್ಲಿಸಬೇಕೆಂದು ಈ ಮೂಲಕ ಭಾರತೀಯ ಜನತಾ ಪಕ್ಷದ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಠ ಒತ್ತಾಯಿಸುತ್ತದೆ ಇಲ್ಲವಾದಲ್ಲಿ ನಿರಂತರ ಹೋರಾಟದ ಚಳುವಳಿ ಮಾಡಲು ಮುಂದಾಗುತ್ತದೆ.

ಕಲಾವಿದರಿಗೆ ಸಿಗಬೇಕಾದ ಕಲಾವಿದರ ವೇತನ ಕಳೆದ ಮೂರು ತಿಂಗಳಿನಿಂದ ಯಾವುದೇ ಕಲಾವಿದರಿಗೆ ಬಂದಿಲ್ಲ ಆದ್ದರಿಂದ ಹಿರಿಯ ಕಲಾವಿದರಿಗೆ ವೈದ್ಯಕೀಯ ಖರ್ಚಿಗೆ ತೊಂದರೆಯಾಗುತ್ತದೆ ಎಂದು ಹೇಳಿಕೊಂಡು ಕಛೇರಿಗೆ ಅಲೆದಾಡುತ್ತಿದ್ದಾರೆ ಕೂಡಲೇ ವೇತನ ಕಲಾವಿದರಿಗೆ ಸಿಗಬೇಕೆಂದು ಒತ್ತಾಯ ಮಾಡುತ್ತೇವೆ.

ಇಲಾಖೆ ಕೂಡಲೇ ಕ್ರಮ ಜರುಗಿಸಿ ಕಲಾವಿದರಿಗೆ ಅನುಕೂಲವಾಗುವಂತೆ ಮಾಡಬೇಕು ಇಲ್ಲವಾದಲ್ಲಿ ಭಾರತೀಯ ಜನತಾ ಪಕ್ಷ ರಾಜ್ಯ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಟ ತಿಳಿಸುವುದೇನೆಂದರೆ ಈ ಎಲ್ಲಾ ವಿಷಯಗಳ ಬಗ್ಗೆ ಹತ್ತು ದಿನಗಳ ಒಳಗೆ ಕಲಾವಿದರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸುತ್ತದೆ ಇಲ್ಲವಾದಲ್ಲಿ ಎಲ್ಲಾ ಜಿಲ್ಲೆಯಲ್ಲಿ ಹೋರಾಟ ಮಾಡಲು ಮುಂದಾಗುತ್ತದೆ ಎಂದು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular