Friday, April 18, 2025
Google search engine

Homeರಾಜ್ಯಬಿಜೆಪಿಯ ಬೆಳಗಾವಿ ಚಲೋಗೆ ಅನುಮತಿ ಇಲ್ಲ : ಸಚಿವ ಡಾ.ಜಿ ಪರಮೇಶ್ವರ್ ಸ್ಪಷ್ಟನೆ

ಬಿಜೆಪಿಯ ಬೆಳಗಾವಿ ಚಲೋಗೆ ಅನುಮತಿ ಇಲ್ಲ : ಸಚಿವ ಡಾ.ಜಿ ಪರಮೇಶ್ವರ್ ಸ್ಪಷ್ಟನೆ

ಬೆಂಗಳೂರು : ಬೆಳಗಾವಿಯಲ್ಲಿ ಅಧಿವೇಶನದ ಕೊನೆಯ ದಿನದಂದು ನಡೆದ ಘಟನೆಗೆ ಸಂಬಂಧಿಸಿದಂತೆ ಬಿಜೆಪಿಯ ಎಂಎಲ್ಸಿ ಸಿಟಿ ರವಿಯವರನ್ನು ಅರೆಸ್ಟ್ ಮಾಡಲಾಗಿತ್ತು. ಈ ಒಂದು ವಿಚಾರಕ್ಕೆ ಸಂಬಂಧಪಟ್ಟಂತೆ ಬಿಜೆಪಿಯು ಕಾಂಗ್ರೆಸ್ ಸರ್ಕಾರದ ವಿರುದ್ಧ ಬೆಳಗಾವಿ ಚಲೋ ಪ್ರತಿಭಟನೆ ಹಮ್ಮಿಕೊಳ್ಳಲು ತೀರ್ಮಾನಿಸಿತ್ತು. ಇದಕ್ಕೆ ಗೃಹ ಸಚಿವ ಜಿ ಪರಮೇಶ್ವರ್ ಅವರು ಬೆಳಗಾವಿ ಜಿಲ್ಲೆಗೆ ಅನುಮತಿ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಬೆಳಗಾವಿ ಚಲೋಗೆ ಅನುಮತಿ ಇಲ್ಲ. ನಾವು ಕಾನೂನು ಸುವ್ಯವಸ್ಥೆ ಸರಿ ಮಾಡುತ್ತೇವೆ ಬಿಜೆಪಿ ಚೊಲೋಗೆ ಪರ್ಮಿಷನ್ ಕೊಡಲ್ಲ ಎಂದಿದ್ದೇವೆ ಅದಕ್ಕೂ ಮೀರಿ ಏನಾದರೂ ಮಾಡಿದರೆ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಎಚ್ಚರಿಕೆ ನೀಡಿದ್ದಾರೆ.

ರಾಜ್ಯದಲ್ಲಿ ಗೃಹ ಸಚಿವರು ಇಲ್ವಾ ಎಂದು ಎಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ಗೃಹ ಸಚಿವ ಪರಮೇಶ್ವರ ಪ್ರತಿಕ್ರಿಯೆ ನೀಡಿದ್ದು ಪೊಲೀಸರಿಗೆ ಅವರದ್ದೇ ಆಗಿರುವಂತಹ ನಿಯಮಗಳಿವೆ. ಉನ್ನತ ಅಧಿಕಾರಿಗಳು ಇರುತ್ತಾರೆ ಅವರೇ ತೀರ್ಮಾನ ಮಾಡುತ್ತಾರೆ. ಎಲ್ಲವನ್ನು ನಮ್ಮನ್ನೇ ಕೇಳಬೇಕಿಲ್ಲ. ಘಟನೆ ಬಗ್ಗೆ ಪೊಲೀಸರು ಅಂತಿಮವಾಗಿ ಸರ್ಕಾರಕ್ಕೆ ವರದಿ ಕೊಡುತ್ತಾರೆ. ಪೊಲೀಸರ ಕೆಲಸದಿಂದ ಕೆಲವು ಬಾರಿ ಸರ್ಕಾರಕ್ಕೆ ಮುಜುಗರ ಆಗುತ್ತದೆ. ಕೆಲವೊಮ್ಮೆ ನಾವೇ ಸರಿ ಅಂತ ಹೇಳುತ್ತೇವೆ ಎಂದು ತಿಳಿಸಿದರು.

RELATED ARTICLES
- Advertisment -
Google search engine

Most Popular