Friday, April 18, 2025
Google search engine

Homeರಾಜಕೀಯಸಿ.ಟಿ.ರವಿ ಪ್ರಕರಣದಲ್ಲಿ ಬಿಜೆಪಿ ಸಮರ್ಥನೆ ದುರಾದೃಷ್ಟಕರ: ದಿನೇಶ್ ಗುಂಡೂರಾವ್ ವಾಗ್ದಾಳಿ

ಸಿ.ಟಿ.ರವಿ ಪ್ರಕರಣದಲ್ಲಿ ಬಿಜೆಪಿ ಸಮರ್ಥನೆ ದುರಾದೃಷ್ಟಕರ: ದಿನೇಶ್ ಗುಂಡೂರಾವ್ ವಾಗ್ದಾಳಿ

ಮಂಗಳೂರು(ದಕ್ಷಿಣ‌ ಕನ್ನಡ): ಸಿ.ಟಿ.ರವಿ ಪ್ರಕರಣದಲ್ಲಿ ಬಿಜೆಪಿ ಸಮರ್ಥನೆ ದುರಾದೃಷ್ಟಕರ. ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಸಿ.ಟಿ.ರವಿ ಹೇಳಿರುವ ವಿಡಿಯೋ ನಾವು ನೋಡಿದ್ದೇವೆ. ಇದು ಕಟ್ಟುಕಥೆಯಲ್ಲ ಎಂದು
ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಅವರು ಇಂದು ಪುತ್ತೂರಿನಲ್ಲಿ ಮಾಧ್ಯಮಗಳಿಗೆ ಈ ರೀತಿ ಪ್ರತಿಕ್ರಿಯಿಸಿದರು. ಪರಿಷತ್ ನಲ್ಲಿರುವ ಅನೇಕ ಸದಸ್ಯರೂ ಇದನ್ನು ನೋಡಿದ್ದಾರೆ. ಸಿ.ಟಿ.ರವಿ ಹೇಳಿಕೆ‌ ಸಹಿಸಲ ಸಾಧ್ಯವಾದದ್ದು. ಈ ಹೇಳಿಕೆಗೆ ಅಗತ್ಯವಾಗಿ‌ ಕಾನೂನು‌ಕ್ರಮ‌ ಆಗಬೇಕಿದೆ. ಸಭಾಪತಿಗಳೂ ಈ ವಿಚಾರವನ್ನು‌ ಪ್ರಿವಿಲೇಜ್ ಕಮಿಟಿಗೆ ನೀಡಿದ್ದಾರೆ. ಸಿಟಿ ರವಿ ಹೇಳಿಕೆಗೆ ಬಿಜೆಪಿ ಪಕ್ಷದ ವಿರೋಧವೂ ಇಲ್ಲ, ಖಂಡನೆಯೂ ಇಲ್ಲ. ಬಿಜೆಪಿಯವರು ದೇವರು, ಧರ್ಮ, ಭಾರತ್ ಮಾತಾ ಕಿ ಜೈ ಮಾತ್ರ ಹೇಳೋದು. ಆದರೆ ಮಹಿಳೆಯರ ಬಗ್ಗೆ ಅವರಿಗೆ ಗೌರವವಿಲ್ಲ.

ಸಿಟಿ ರವಿಗೆ ನ್ಯಾಯಾಲಯದಲ್ಲಿ ಬೇಲ್ ಸಿಕ್ಕಿರೋದು ಕಾನೂನು ಕ್ರಮ. ಬೇಲ್ ಸಿಕ್ಕಿದ ವಿಚಾರದಲ್ಲಿ ಬಿಜೆಪಿ ಡ್ರಾಮಾ ಮಾಡುತ್ತಿದೆ ಎಂದ ಅವರು, ಸಿ.ಟಿ. ರವಿ ಕೊಲ್ಲಿ ಕೊಲ್ಲಿ ಎನ್ನುತ್ತಾರೆ. ಅವರನ್ನು ಕೊಂದು ನಮಗೇನು ಆಗಬೇಕಿದೆ. ಬಿಜೆಪಿಯವರು ನಾಟಕ ಮಾಡುತ್ತಿದ್ದಾರೆ. ಸಿ.ಟಿ.ರವಿ ವಿಚಾರದಲ್ಲಿ RSS ಮತ್ತು ಸಂಘಟನೆಗಳ ನಿಲುವೇನು ಎಂದು ಪ್ರಶ್ನಿಸಿದ ಅವ್ರು, ಅವರ ನಿಲುವನ್ನು ಜನತೆಯ ಮುಂದೆ ಸ್ಪಷ್ಟಪಡಿಸಬೇಕು. ಸಿ‌.ಟಿ ರವಿ ತನ್ನ ತಪ್ಪನ್ನು ಒಪ್ಪಿಕೊಳ್ಳಬೇಕು. ತಕ್ಷಣವೇ ಕ್ಷಮಾಪಣೆ ಹೇಳಬೇಕು. ಅದು ಬಿಟ್ಟು ಹೇಳಿಕೆ ನೀಡಲೇ ಇಲ್ಲ ಎಂದು ಸುಳ್ಳು ಹೇಳುವುದನ್ನು ಬಿಡಬೇಕು ಎಂದು ಜೆಪಿ ವಿರುದ್ಧ ದಿನೇಶ್ ಗೂಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.

RELATED ARTICLES
- Advertisment -
Google search engine

Most Popular