Sunday, April 20, 2025
Google search engine

Homeರಾಜಕೀಯಮದ್ದೂರಿನಲ್ಲಿ ರೈತರ ಸಮಸ್ಯೆ ಆಲಿಸಿದ ಬಿಜೆಪಿಯ ಬರ ಅಧ್ಯಯನ ತಂಡ

ಮದ್ದೂರಿನಲ್ಲಿ ರೈತರ ಸಮಸ್ಯೆ ಆಲಿಸಿದ ಬಿಜೆಪಿಯ ಬರ ಅಧ್ಯಯನ ತಂಡ

ಮದ್ದೂರು: ಮಾಜಿ ಸಿಎಂ ಸದಾನಂದಗೌಡ ನೇತೃತ್ವದ ಬಿಜೆಪಿಯ ಬರ ಅಧ್ಯಯನ ತಂಡ ಮದ್ದೂರಿಗೆ ಆಗಮಿಸಿದ್ದು,  ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಸಿದ್ದೇಗೌಡನದೊಡ್ಡಿ ಗ್ರಾಮದ ಕಾಳಯ್ಯ ಎಂಬುವವರ ಮನೆಗೆ ಭೇಟಿ ನೀಡಿದ್ದಾರೆ.

ಸದಾನಂದಗೌಡಗೆ  ಮಾಜಿ ಶಾಸಕ ಪ್ರೀತಂಗೌಡ, ಮಾಜಿ ಎಂಎಲ್ ಸಿ ಅಶ್ವತ್ಥ್ ನಾರಾಯಣ್ ಗೌಡ ಸಾಥ್ ನೀಡಿದರು.

ಕಾಳಯ್ಯ ಮನೆ ಬಳಿ ಮೇಕೆ ಮತ್ತು ನಾಯಿಯನ್ನ ಚಿರತೆ ಎತ್ತಿಕೊಂಡು ಹೋಗಿತ್ತು. ಈ ಹಿನ್ನಲೆ ಕಾಳಯ್ಯನ ಮನೆಗೆ ಮೊದಲು ಬರ ಅಧ್ಯಯನ ತಂಡ ಭೇಟಿ ನೀಡಿದೆ.

ರೈತನ ಬಳಿ ಬಿಜೆಪಿ ಬರ ಅಧ್ಯಯನ ತಂಡ ಸಮಸ್ಯೆ ಕೇಳುತ್ತಿದ್ದು, ಚಿರತೆ ಹಾವಳಿ ಹೆಚ್ಚಾಗಿದೆಯಾ, ಮಳೆ ಹೇಗೆ ಬಂದಿದೆ.? ವಿದ್ಯುತ್ ಪೂರೈಕೆ ಹೇಗಿದೆ ? ತ್ರೀಫೇಸ್ ಕರೆಂಟ್ ಕೊಡುತ್ತಿದ್ದಾರೆ? ಎಂದು ಮಾಜಿ ಸಿಎಂ ಸದಾನಂದಗೌಡ ಮಾಹಿತಿ ಪಡೆದಿದ್ದಾರೆ.

ಅಧಿಕಾರಿಗಳ ಸ್ಥಳಕ್ಕೆ ಬಂದಿದ್ದಾರಾ? ಸಮಸ್ಯೆ ಕೇಳಿದ್ದಾರಾ ಎಂದು ರೈತರ ಬಳಿ ಪ್ರಶ್ನಿಸಿದರು.

ಸಿದ್ದೇಗೌಡನದೊಡ್ಡಿ ಗ್ರಾಮದಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ವಿದ್ಯುತ್ ಸಮಸ್ಯೆ, ಚಿರತೆ ಹಾವಳಿ ಬಗ್ಗೆ ರೈತರು ಸಮಸ್ಯೆ ಹೇಳಿಕೊಂಡಿದ್ದಾರೆ.

ವಿದ್ಯುತ್ ದರ ಕೂಡ ಹೆಚ್ಚಳವಾಗಿರೋ ಬಗ್ಗೆ ಕೂಡ ಪ್ರಸ್ತಾಪ ಮಾಡಿರುವ ರೈತರು, ವಿದ್ಯುತ್ ಟಿಸಿ ಗೂ ದುಡ್ಡು ಕೊಡಬೇಕಿದೆ. ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದು ಹೇಳಿದ್ದಾರೆ.

ಸಹಕಾರ ಬ್ಯಾಂಕ್ ನಿಂದ ಏನಾದರೂ ಸಾಲ ಮನ್ನಾ ಆಗಿದೀಯಾ ಎಂದು ರೈತರಿಗೆ  ಸದಾನಂದ ಗೌಡರು ಪ್ರಶ್ನೆ ಮಾಡಿದರು.

ಚಿರತೆ ಹಾವಳಿ ಹೆಚ್ಚಾದ ಹಿನ್ನೆಲೆ ಆರ್ ಎಫ್ ಓ ಹಾಗೂ ಡಿಎಫ್ ಒ ಗೆ ಮಾಜಿ ಸಿಎಂ ಸದಾನಂದಗೌಡ ಸ್ಥಳದಿಂದಲೇ ಕರೆ ಮಾಡಿ, ಚಿರತೆ ಹಾವಳಿ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

ಇದೇ ವೇಳೆ ಆರ್ ಎಫ್ ಒ ತಾವು ಯಾರು ಎಂದು ಪ್ರಶ್ನೆ ಕೇಳಿದ್ದಕ್ಕೆ ಏಕಾಏಕಿ ಆರ್ ಎಫ್ ಒಗೆ ಫೊನ್ ಮಾಡಿಕೊಟ್ಟ ಬಿಜೆಪಿ ಕಾರ್ಯಕರ್ತ. ನಂತರ ಡಿಎಫ್ ಒ ಶ್ರೀಧರ್ ಗೆ ಕರೆ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ.

ಮಕ್ಕಳಿಗೆ ತೊಂದರೆ ಆಗಿದೆ. ಒಂದು ವಾರದ ಒಳಗೆ ಈ ಬಗ್ಗೆ ವರದಿ ಕೂಡ ಕೊಡಬೇಕು ಎಂದು ಡಿಎಫ್ ಓಗೆ ಸೂಚನೆ ನೀಡಿದ್ದಾರೆ.

ಆರ್ ಟಿಸಿ ಯನ್ನ ಬ್ಯಾನ್ ಮಾಡಿದ್ದಾರೆ. ಅರಣ್ಯ ಘೋಷಣೆಗೂ ಮೊದಲೇ ರೈತರು ಸಾಗುವಳಿ ಮಾಡುತ್ತಿದ್ದಾರೆ. ಆದರೆ ಅರಣ್ಯ ಇಲಾಖೆ , ರೆವಿನ್ಯೂ ಇಲಾಖೆಯವರು ತೊಂದರೆ ಕೊಡುತ್ತಿದ್ದಾರೆ ಎಂದು ರೈತ ಪುಟ್ಟಸ್ವಾಮಿ ಮನವಿ ಮಾಡಿದ್ದಾರೆ.

ತಕ್ಷಣ ಮಂಡ್ಯ ಡಿಸಿ ಡಾ ಕುಮಾರ್ ಗೆ ಕರೆ ಮಾಡಿ ಸದಾನಂದ ಗೌಡರು ಮಾಹಿತಿ ಪಡೆದುಕೊಂಡರು.

ರೈತ ಮಹಿಳೆಗೆ ಪರಿಹಾರ

ಚಿರತೆ ಹಾವಳಿ ಹಿನ್ನೆಲೆ ರೈತ ಮಹಿಳೆ ಮಂಗಳಮ್ಮ  ಎಂಬುವವರಿಗೆ ಬಿಜೆಪಿ ತಂಡ ಪರಿಹಾರ ನೀಡಿದೆ.

RELATED ARTICLES
- Advertisment -
Google search engine

Most Popular