ಮಂಡ್ಯ: ಪಡಿತರ ಕಾರ್ಡ್ ಬಗ್ಗೆ ಸಿಎಂ ಸಿದ್ದರಾಮಯ್ಯ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಆದರೆ ಬಿಜೆಪಿಯವರು ಸುಮ್ಮನೆ ಆರೋಪ ಮಾಡುತ್ತಿದ್ದು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಕುಟುಕಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೃಷಿ ಸಚಿವ ಚಲುವರಾಯಸ್ವಾಮಿ, ವಿಶೇಷವಾದ ತೀರ್ಮಾನ ತೆಗದುಕೊಂಡು ಬಿಪಿಎಲ್ ಕಾರ್ಡ್ ರದ್ದು ಮಾಡಿಲ್ಲ ನಾವು ಜನರ ಪರ ಇದ್ದೇವೆ. ಬಿಜೆಪಿಯವರು ಮುಂದಿನ ಗುರಿ ಬಗ್ಗೆ ಏನನ್ನೂ ಹೇಳಲ್ಲ. ಬಿಜೆಪಿಯವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
5 ವರ್ಷ ಎಂಪಿ ಆಗಿ ಸುಮಲತಾ ಬಹಳ ಕೆಲಸ ಮಾಡಿದ್ದಾರೆ. ಈಗ ಹೋರಾಟ ಮಾಡಲಿ
ವಕ್ಫ್ ವಿಚಾರವಾಗಿ ಬಿಜೆಪಿ ಪ್ರತಿಭಟನೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಚಲುವರಾಯಸ್ವಾಮಿ, ಬಿಜೆಪಿ ಕಾಲದಲ್ಲಿ ನಿರ್ದೇಶನ ಮೇರೆಗೆ ಖಾತೆ ಬದಲಾವಣೆ ಆಗಿದೆ. ಬಿಜೆಪಿ ಆಡಳಿತ ಸಂದರ್ಭಧಲ್ಲಿ ರೈತರಿಗೆ ಅನ್ಯಾಯವಾಗಿದೆ. ಸುಮಲತಾ ಅವರು 5 ವರ್ಷ ಎಂಪಿಯಾಗಿ ಬಹಳ ಕೆಲಸ ಮಾಡಿದ್ದಾರೆ. ಇದೀಗ ಹೋರಾಟ ಮಾಡಲಿ ಹೋರಾಟ ಮಾಡದೆ ಇದ್ದರೇ ಅವರಿಗೆ ಹೇಗೆ ಸ್ಥಾನ ಸಿಗುತ್ತೆ ಎಂದು ಟಾಂಗ್ ಕೊಟ್ಟರು.