Monday, April 21, 2025
Google search engine

Homeರಾಜ್ಯಹಿಂದೂರಾಷ್ಟ್ರ ನಿರ್ಮಾಣವೇ ಬಿಜೆಪಿಯ ಅಂತಿಮ ಗುರಿ: ಅನಂತಕುಮಾರ ಹೆಗಡೆ

ಹಿಂದೂರಾಷ್ಟ್ರ ನಿರ್ಮಾಣವೇ ಬಿಜೆಪಿಯ ಅಂತಿಮ ಗುರಿ: ಅನಂತಕುಮಾರ ಹೆಗಡೆ

ಶಿರಸಿ: ಹಿಂದೂರಾಷ್ಟ್ರ ನಿರ್ಮಾಣವೇ ಬಿಜೆಪಿಯ ಅಂತಿಮ ಗುರಿ ಹಾಗೂ ಗೆಲುವು ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು.

ಸಿದ್ದಾಪುರ ತಾಲ್ಲೂಕಿನ ಕಾನಸೂರಿನಲ್ಲಿ ಶನಿವಾರ ಶ್ರೀರಾಮ ಮಂದಿರ ಹಾಗೂ ಮಾರುತಿ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ ನಂತರ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಜಗತ್ತಿಗೆ ಭಾರತ ಬೇಕು, ದೇಶಕ್ಕೆ ಬಿಜೆಪಿ ಬೇಕು. ಒಮ್ಮೆ ಗೆದ್ದರೆ ಸಾಲುವುದಿಲ್ಲ ಅಂತಿಮದ ತನಕವೂ ನಮ್ಮದೇ ಗೆಲುವಾಗಬೇಕು. ಬಿಜೆಪಿಯ ಅಂತಿಮ ಗೆಲುವು ಎಂದರೆ ಹಿಂದೂರಾಷ್ಟ್ರ ನಿರ್ಮಾಣವಾಗಿದೆ. ಇದು ಕಾರ್ಯಗತವಾದರೆ ಈಗಿರುವ ಜಾತಿ, ಧರ್ಮ, ವ್ಯವಸ್ಥೆಗಳ ದೋಷ ಸರಿಯಾಗಲಿದೆ ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷ ಬೇಕು ಆದರೆ ದೇಶದ್ರೋಹಿಗಳಿರುವ ವಿರೋಧ ಪಕ್ಷವಲ್ಲ ಎಂದ ಅವರು, ಲಾಲ್ ಬಹದ್ದೂರ್ ಶಾಸ್ತ್ರೀ ಹತ್ಯೆ ನಂತರ 15 ದಿನಗಳಲ್ಲಿ ಜಹಾಂಗೀರ್ ಬಾಬಾ ಹತ್ಯೆಯಾಯಿತು. ಸಾರಾಬಾಯಿ ಅಂತ್ಯವಾಯಿತು. ಇದ್ಯಾವುದು ಕೂಡ ಸ್ವಾಭಾವಿಕ ಸಾವಲ್ಲ. ಇಂಥ ಘಟನೆಗಳು ಸರಣಿಯಾಗಿ ದೇಶದಲ್ಲಿ ನಡೆದಿದೆ. ಹೊರಗಿನ ಶಕ್ತಿ ಇಲ್ಲಿನವರನ್ನು ಆಳುತ್ತಿತ್ತು. ಸ್ವತಃ ದೇಶದ ಪ್ರಧಾನಿಯನ್ನೂ ಕೈಗೊಂಬೆ ಮಾಡಿಕೊಂಡಿತ್ತು. ಈ ದೇಶವನ್ನು ಮುಗಿಸಬೇಕು ಎಂದು ಸಂಚು ನಡೆದಿತ್ತು. ಆದರೆ ದೈವದ ಇಚ್ಛೆ ಬೇರೆಯಿತ್ತು. 2014ರ ನಂತರ ಅದಕ್ಕೊಂದು ನಿಯಂತ್ರಣ ಹಾಕಲಾಗಿದೆ ಎಂದರು.

RELATED ARTICLES
- Advertisment -
Google search engine

Most Popular