ಬೆಂಗಳೂರು : `ವಿಪಕ್ಷ ನಾಯಕ ತಲೆ ಹಿಡುಕ’ ಎಂದಿದ್ದ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಹರಿಪ್ರಸಾದ್ ಮಾತಿಗೆ ಇಂದಿನ ಕಲಾಪವೇ ಬಲಿಯಾಯ್ತು.
ಜನವರಿ 23 ರಂದು ಕಲಾಪದಲ್ಲಿ ಮಾತನಾಡುವಾಗ, ಬಿಜೆಪಿ- RSS ವಿರುದ್ಧ ವಿವಾದಾತ್ಮಕ ಮಾತುಗಳನ್ನ ಬಿ.ಕೆ ಹರಿಪ್ರಸಾದ್ ಆಡಿದ್ರು. ಬಿಜೆಪಿ ಅವರು, RSS ಅವರು ಯಾವ ಮಹಿಳೆಯರನ್ನೂ ಬಿಟ್ಟಿಲ್ಲ, ಪೋಕ್ಸೋ ಕೇಸ್ ನಲ್ಲಿ ಇರೋರು, ಲಫಾಂಗಗಳು ಅಂತ ವಿವಾದಾತ್ಮಕ ಮಾತು ಆಡಿದ್ರು. ಇದೇ ವೇಳೆ ಮಾತನಾಡುವಾಗ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ನೀನು ತಲೆ ಹಿಡುಕ ಎಂದಿದ್ದರು. ಇಂದೂ ಕೂಡ ರಾಜ್ಯಪಾಲರ ವಿಚಾರವಾಗಿ ಚರ್ಚೆ ಆಗೋವಾಗ ರಾಜ್ಯಪಾಲರಿಗೆ ಕೈ ತೋರಿಸದೇ ಕಾಲು ತೋರಿಸೋಕೆ ಆಗುತ್ತಾ ಅಂತ ವಿವಾದದ ಮಾತಾಡಿದ್ರು.
ಜನವರಿ 23, 28, 29 ರಂದು ವಿವಾದದ ಮಾತಾಡಿದ್ದ ಹರಿಪ್ರಸಾದ್ ಅವರನ್ನ ಅಮಾನತು ಮಾಡುವಂತೆ ಬಿಜೆಪಿಯಿಂದ ಸಭಾಪತಿಗಳಿಗೆ ದೂರು ನೀಡಿದ್ರು. ಕಾನೂನು ಸಚಿವರ ಅಭಿಪ್ರಾಯ ಪಡೆದಿದ್ದ ಸಭಾಪತಿ. ಮತ್ತೆ ಕಲಾಪ ಪ್ರಾರಂಭವಾದಾಗ ಹರಿಪ್ರಸಾದ್ ಆಡಿದ್ದ ಮಾತುಗಳನ್ನ ಉಲ್ಲೇಖ ಮಾಡಿದ ಸಭಾಪತಿಗಳು ಹರಿಪ್ರಸಾದ್ ಗೆ ಈ ಬಗ್ಗೆ ಅಭಿಪ್ರಾಯ ಕೇಳಿದ್ರು. ಬಿಜೆಪಿ- RSS ಅವರು ಯಾವ ಮಹಿಳೆಯನ್ನು ಬಿಟ್ಟಿಲ್ಲ, ಫೋಕ್ಸೋ ಕೇಸ್ ಇರೋದು ಅಂತ ಹೇಳಿದ್ದ ಪದ ವಾಪಸ್ ಪಡೆಯುತ್ತೇನೆ. ಯಾರಿಗಾದ್ರು ನೋವಾಗಿದ್ದರೆ, ವಿಷಾದ ವ್ಯಕ್ತಪಡಿಸುತ್ತೇನೆ ಅಂತ ಹರಿಪ್ರಸಾದ್ ತಿಳಿಸಿದರು.
ಆದರೆ ವಿಪಕ್ಷ ನಾಯಕ ತಲೆ ಹಿಡುಕ ಅನ್ನೋ ಪದದ ಬಗ್ಗೆ ಮಾತಾಡಲಿಲ್ಲ. ಬಳಿಕ ಹರಿಪ್ರಸಾದ್ ಮಾತಾಡಿದ್ದ ವಿವಾದದ ಪದಗಳನ್ನು ಕಡತದಿಂದ ಸಭಾಪತಿಗಳು ತೆಗೆದು ಹಾಕಿದ್ರು. ಈ ವೇಳೆ ಮಾತಾಡಿದ ಸಭಾಪತಿಗಳು, ದೊಡ್ಡ ಮನಸು ಮಾಡಿ. ಸದನದಲ್ಲಿ ಇಂತಹ ಮಾತು ಆಡೋದು ಶೋಭೆ ತರೊಲ್ಲ. ನೀವು ಸಿನಿಯರ್ ಇದ್ದೀರಾ. ದೊಡ್ಡ ಮನಸು ಮಾಡಿ ವಿಷಾದ ವ್ಯಕ್ತಪಡಿಸಿ ಎಂದರು.
ಸಭಾಪತಿ ಮಾತಿಗೆ ಒಪ್ಪಿ ವಿಷಾದ ವ್ಯಕ್ತಪಡಿಸುತ್ತೇನೆ ಎಂದರು ಹರಿಪ್ರಸಾದ್. ಇದಕ್ಕೆ ಒಪ್ಪದ ವಿಪಕ್ಷ ನಾಯಕ ಅವರ ವಿರುದ್ದ ಕ್ರಮ ಆಗಬೇಕು. ಅಮಾನತು ಆಗಬೇಕು ಅಂತ ಪಟ್ಟು ಹಿಡಿದರು. ಬಳಿಕ ಮಾತಾಡಿದ ಸಭಾಪತಿ ಹರಿಪ್ರಸಾದ್ ವಿಷಾದ ವ್ಯಕ್ತಪಡಿಸಿದ್ದಾರೆ. ಮುಂದೆ ಯಾರು ಮಾತಾಡಬೇಡಿ. ಸದನಕ್ಕೆ ಇದು ಗೌರವ ಅಲ್ಲ ಅಂತ ಹೇಳಿ ಗಲಾಟೆ ಆಗುತ್ತದೆ ಅಂತ ಕಲಾಪ ನಾಳೆಗೆ ಮುಂದೂಡಿದರು.
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಛಲವಾದಿ ನಾರಾಯಣಸ್ವಾಮಿ, ಹರಿಪ್ರಸಾದ್ ತುಂಬಾ ಕೆಟ್ಟ ಪದಗಳಲ್ಲಿ ನಿಂದನೆ ಮಾಡಿದ್ದಾರೆ. ಚಿಂತಕರ ಚಾವಡಿಯ ಇತಿಹಾಸಕ್ಕೆ ಅಪಮಾನ ಮಾಡಿದ್ದಾರೆ. ಸಂವಿಧಾನ, ಕಾನೂನಿಗೆ ಅಪಮಾನ ಮಾಡಿದ್ದಾರೆ. ಅವರು ಸದನಕ್ಕೆ ಅಗೌರವ ತಂದಿದ್ದಾರೆ. ಕ್ಷಮೆ ಕೇಳದೇ ಉದ್ಧಟತನ ತೋರಿದ್ದಾರೆ. ರಾಜ್ಯಪಾಲರಿಗೂ ಅಪಮಾನ ಮಾಡಿದ್ದಾರೆ. ಹರಿಪ್ರಸಾದ್ ಉಚ್ಚಾಟನೆ ಆಗಲೇಬೇಕು. ನಾಳೆ ಏನ್ ಮಾಡಬೇಕು ಅಂತ ಚರ್ಚೆ ಮಾಡಿ ತೀರ್ಮಾನ ಮಾಡ್ತೀವಿ ಎಂದರು.



