ಮಂಗಳೂರು: ಮಂಗಳೂರು ಸಂಸದರಾಗಿರುವ ನಳಿನ್ ಕುಮಾರ್ ಕಟೀಲ್ ಬಗ್ಗೆ ಜಿಲ್ಲೆಯಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದ್ದರೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ತನ್ನ ಪಟ್ಟ ಶಿಷ್ಯನಿಗೆ ಬಹುಪರಾಕ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಜಿಲ್ಲಾ ಮಟ್ಟದ ಬಿಜೆಪಿ ಪ್ರಮುಖರ ಸಭೆಯಲ್ಲಿ ರಾಜ್ಯಾಧ್ಯಕ್ಷ ನಳಿನ್ ಕಟೀಲ್ ಪರ ಬ್ಯಾಟಿಂಗ್ ಮಾಡಿದ್ದಾರೆ.
ನಾನೇ ಟಾಪ್ ನಂಬರ್ ತ್ರೀ ಇದ್ದೇನೆ, ಬದಲಾವಣೆ ಇದ್ರೆ ನಾನೇ ಮಾಡ್ತೀನಿ. ಸಂಸದರ ಬದಲಾವಣೆ ಸೇರಿ ಯಾವುದೇ ವಿಷಯ ಚರ್ಚೆಯಾಗಿಲ್ಲ ಎಂದು ಸಭೆಯಲ್ಲಿ ತಿಳಿಸಿದ್ದಾರೆ.
ಪುತ್ತೂರಿನದ್ದು ಯಾವ ಸೀಮೆಯ ಲ್ಯಾಬೊರೇಟರಿ ಅದು. ಹಿಂದೆ ರಾಮ ಭಟ್, ಶಕುಂತಳಾ ಶೆಟ್ಟಿ, ಈಗ ಅರುಣ್ ಪುತ್ತಿಲ ಎಲ್ಲ ಬಂಡಾಯ ಎದ್ದವರೇ. ಅಲ್ಲಿನದ್ದು ಪ್ರಯೋಗ ಶಾಲೆಯೇ ಅಲ್ಲ ಎಂದು ರೆಬೆಲ್ ನಾಯಕರಿಗೆ ಟಾಂಗ್ ನೀಡಿದರು.
ರಾಜ್ಯದಲ್ಲಿ ಪ್ರಬಲ ವಿರೋಧ ಇದ್ದರೂ, ಜಿಲ್ಲಾ ಚುನಾವಣಾ ಸಮಿತಿ ಸದಸ್ಯರ ಸಭೆ ಕರೆದು ನಳಿನ್ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ವಿಧಾನಸಭೆ ಸೋಲಿನ ಬಗ್ಗೆ ಬೇರೆಯವರ ತಲೆಗೆ ಕಟ್ಟಿ ಪಾರಾಗಲು ಬಿ.ಎಲ್ ಸಂತೋಷ್ ಮತ್ತು ತಂಡ ಯತ್ನಿಸುತ್ತಿದೆ ಎಂಬ ಮಾತು ಕೇಳಿ ಬಂದಿದೆ.