ಹೊದಿಕೆ ನೀಡುವ ಟ್ರಸ್ಟ್ ಕಾರ್ಯ ನಿಜಕ್ಕೂ ಶ್ಲಾಘನೀಯ: ಹರೀಶ್ ಗೌಡ
ಮೈಸೂರು: ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿರುವ ನಿರಾಶ್ರಿತರಿಗೆ ಹಾಗೂ ಅಸಹಾಯಕರಿಗೆ ಗ್ರಾಮೀಣ ಪ್ರದೇಶದ ಹಾಡಿ ಜನಾಂಗಕ್ಕೆ ಹೊದಿಕೆ ವಿತರಣಾ ಅಭಿಯಾನದ ಪ್ರಚಾರ ಸಾಮಗ್ರಿಗಳನ್ನು ಹುಣಸೂರು ರಸ್ತೆಯಲ್ಲಿರುವ ಶಾಸಕ ಕಚೇರಿಯಲ್ಲಿ ಚಾಮರಾಜ ಕ್ಷೇತ್ರದ ಶಾಸಕ ಹರೀಶ್ ಗೌಡ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ನಂತರ ಮಾತನಾಡಿದ ಅವರು ಸಾಂಸ್ಕೃತಿಕ ನಗರಿ ಎಲ್ಲರಿಗೂ ಆಶ್ರಯ ನೀಡಿದೆ, ಕೆಲವರ ಜೀವನದಲ್ಲಿ ವಿಧಿಯಾಟ ಕೆಲವು ಸನ್ನಿವೇಶಗಳು ನೆಮದಿಯಿಲ್ಲದಿದ್ದಾಗ ಕೆಲವರು ತೊಂದೆರೆಯಲ್ಲಿರುತ್ತಾರೆ, ಮಳೆ ಚಳಿ ಎನ್ನದೇ ಬಸ್ ನಿಲ್ದಾಣ, ರೈಲ್ವೇನಿಲ್ದಾಣ ದೇವಸ್ಥಾನ, ಚಿತ್ರಮಂದಿರ ಸರ್ಕಾರಿ ಕಟ್ಟಡಗಳ ಮುಂಭಾಗ ರಾತ್ರಿಹೊತ್ತು ಆಶ್ರಯಕ್ಕಾಗಿ ರಾತ್ರಿ ಕಳೆಯಲು ಮಲಗಿರುತ್ತಾರೆ. ಮೈಸೂರಿನಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ನಿರಾಶ್ರಿತರಿದ್ದು, ಮಾನವೀಯತೆ ದೃಷ್ಟಿಯಿಂದ ಚಳಿ ಮಳೆಯಿಂದ ನಿರಾಶ್ರಿತರ ರಕ್ಷಣೆ ಸಾರ್ವಜನಿಕರ ಹೊಣೆ ಎನ್ನುವ ಸಂಕಲ್ಪದೊಂದಿಗೆ ಅವರಿರುವ ಜಾಗಕ್ಕೆ ಹೋಗಿ ಹೊದಿಕೆ ನೀಡುವ ಕೆ.ಎಂ.ಪಿ.ಕೆ ಟ್ರಸ್ಟ್ ಆಯೋಜಿಸಿರುವ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.
ನಂತರ ಮಾತನಾಡಿದ ಟ್ರಸ್ಟ್ ನ ಅಧ್ಯಕ್ಷ ವಿಕ್ರಮ ಅಯ್ಯಂಗಾರ್ ಕಳೆದ ವರ್ಷವೂ ಸಹ 1000ಜನ ರಸ್ತೆ ಬದಿ ಮಲಗಿರುವ ನಿರಾಶ್ರಿತರು ಹಾಗೂ ಅಸಹಾಯಕರಿಗೆ ರಾತ್ರಿ ವೇಳೆ ರೈಲ್ವೆ ನಿಲ್ದಾಣ ,ಸಬರ್ ಬಸ್ ಸ್ಟ್ಯಾಂಡ್ ಸಿಟಿಬಸ್ ಸ್ಟ್ಯಾಂಡ್, ಮಾರುಕಟ್ಟೆ ,ಸೇರಿದಂತೆ ಸತತ 4 ವರ್ಷ ಪ್ರತಿನಿತ್ಯ ರಾತ್ರಿ 1 ತಿಂಗಳು ನಿರಂತರವಾಗಿ ಅಭಿಯಾನವನ್ನು ಯಶಸ್ವಿ ಗಳಿಸಿದ್ದೇವೆ.
ಅದರಂತೆ ಈ ವರ್ಷವೂ ಸಹ ಬರುವ ಡಿಸೆಂಬರ್ 1ರಿಂದ ಜನವರಿ 15ರವರೆಗೂ ಪ್ರತಿದಿನ ರಾತ್ರಿ ವೇಳೆ ರಸ್ತೆ ಬದಿಯಲ್ಲಿ ಮಲಗಿರುವ ಅಸಹಾಯಕರು ಹಾಗೂ ನಿರಾಶ್ರಿತರಿಗೆ 1000 ಹೊದಿಕೆ ವಿತರಿಸಲು ಮುಂದಾಗಿದ್ದು ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿದರು. ಸಾರ್ವಜನಿಕರು ಕೈಜೋಡಿಸಿ ನೆರವು ನೀಡಲು 9880752727 ಸಂಪರ್ಕಿಸಬಹುದು ಎಂದರು.
ಇದೇ ಸಂದರ್ಭದಲ್ಲಿ ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ಇಂದಿರಾ ಗಾಂಧಿ ಬ್ಲಾಕ್ ಅಧ್ಯಕ್ಷ ರವಿ ಮಂಚೇಗೌಡನ ಕೊಪ್ಪಲು, ಅರ್ಚಕರ ಸಂಘದ ಅಧ್ಯಕ್ಷರಾದ ವಿದ್ವಾನ್ ಕೃಷ್ಣಮೂರ್ತಿ, ಯುವ ಮುಖಂಡರಾದ ನವೀನ್ ,ರವಿಚಂದ್ರ, ಎಸ್ ಎನ್ ರಾಜೇಶ್, ಹರೀಶ್ ನಾಯ್ಡು ಇತರರಿದ್ದರು.