Saturday, April 19, 2025
Google search engine

Homeಅಪರಾಧಕಾರು ಹತ್ತಿಸಿ ಕಾನ್‌ ಸ್ಟೆಬಲ್ ಹತ್ಯೆಗೈದ ರಕ್ತಚಂದನ ಕಳ್ಳಸಾಗಣೆದಾರರು

ಕಾರು ಹತ್ತಿಸಿ ಕಾನ್‌ ಸ್ಟೆಬಲ್ ಹತ್ಯೆಗೈದ ರಕ್ತಚಂದನ ಕಳ್ಳಸಾಗಣೆದಾರರು

ಆಂದ್ರಪ್ರದೇಶ: ಅನ್ನಮಯ್ಯ ಜಿಲ್ಲೆಯ ಕೆ.ವಿ. ಪಲ್ಲಿ ಮಂಡಲದ ಗುಂಡ್ರೆವಾರಿಪಲ್ಲಿ ಕ್ರಾಸ್‌ ನಲ್ಲಿ ಕೂಂಬಿಂಗ್ ನಡೆಸುತ್ತಿದ್ದ ರೆಡ್ ಸ್ಯಾಂಡಲ್ ಟಾಸ್ಕ್ ಫೋರ್ಸ್ ಸಿಬ್ಬಂದಿಯ ಮೇಲೆ ಕಳ್ಳಸಾಗಣೆದಾರರ ಕಾರು ದಾಳಿ ನಡೆಸಿದ್ದು, ಕಾನ್‌ ಸ್ಟೆಬಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಸಾಣಿಪಾಯಿ ಅರಣ್ಯ ಪ್ರದೇಶದಲ್ಲಿ ಶ್ರೀಗಂಧದ ಕಳ್ಳಸಾಗಣೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ತಿರುಪತಿಯಿಂದ ಬಂದಿದ್ದ ಟ್ರಾನ್ಸ್ ಫೋರ್ಸ್ ತಂಡ ಶ್ರೀಗಂಧ ಕಳ್ಳರನ್ನು ಹಿಡಿಯಲು ಯತ್ನಿಸಿತು. ಟಾಸ್ಕ್ ಫೋರ್ಸ್ ಪೊಲೀಸರು ಕೂಂಬಿಂಗ್ ನಡೆಸುತ್ತಿರುವುದನ್ನು ಅರಿತ ಕಳ್ಳಸಾಗಾಣಿಕೆದಾರರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಆ ವೇಳೆ ಕಾರಿನಲ್ಲಿ ಪರಾರಿಯಾಗುವಾಗ ಪೊಲೀಸರ ಮೇಲೆ ಕಾರು ಹತ್ತಿಸಿದ್ದಾರೆ.

ವೇಗವಾಗಿ ಬಂದ ಸ್ಮಗ್ಲರ್ ಕಾರಿಗೆ ಡಿಕ್ಕಿ ಹೊಡೆದು ಕಾನ್ ಸ್ಟೇಬಲ್ ಗಣೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಉಳಿದ ಪೊಲೀಸರು ಕಳ್ಳಸಾಗಣೆದಾರರ ಕಾರನ್ನು ಹಿಂಬಾಲಿಸಿ ಕಳ್ಳಕಾಕರನ್ನು ಹಿಡಿದಿದ್ದಾರೆ. ಆದರೆ ಮೂವರು ಸ್ಮಗ್ಲರ್‌ ಗಳು ಕಾರಿನಿಂದ ಇಳಿದು ಓಡಿಹೋದರು. ಸ್ಮಗ್ಲರ್‌ಗಳ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಕಾರಿನಲ್ಲಿದ್ದ 7 ರಕ್ತಚಂದನದ ದಿಮ್ಮಿಗಳನ್ನು ವಶಪಡಿಸಿಕೊಂಡಿದ್ದಾರೆ. ಕಾರಿನಲ್ಲಿದ್ದ ಮತ್ತಿಬ್ಬರು ಕಳ್ಳಸಾಗಣೆದಾರರನ್ನು ಟಾಸ್ಕ್ ಫೋರ್ಸ್ ಪೊಲೀಸರು ಬಂಧಿಸಿದ್ದಾರೆ.

ಸ್ಥಳಕ್ಕಾಗಮಿಸಿದ ಪೊಲೀಸರು ಪರಾರಿಯಾದ ಕಳ್ಳಸಾಗಾಣಿಕೆದಾರರಿಗಾಗಿ ಬಲೆ ಬೀಸಿದ್ದಾರೆ.

RELATED ARTICLES
- Advertisment -
Google search engine

Most Popular