ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟನ್ಸ್ ವಿರುದ್ಧ ಇಂದು ಐಪಿಎಲ್ ಕ್ರಿಕೆಟ್ ಪಂದ್ಯ ನಡೆಯಲಿದೆ. ಪಂದ್ಯ ನೋಡಲು ತೆರಳುವವರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವಿಶೇಷ ಬಸ್ ಸೇವೆ ಒದಗಿಸುವುದಾಗಿ ಘೋಷಣೆ ಬೇಡಿದೆ. ಈಗಾಗಲೇ ನಮ್ಮ ಮೆಟ್ರೋ ಕಾರ್ಯಾಚರಣೆ ಸಮಯವನ್ನು ರಾತ್ರಿ 12:30 ರವರೆಗೆ ವಿಸ್ತರಣೆ ಮಾಡಿದೆ. ಇದೀಗ ಬಿಎಂಟಿಸಿ ಕೂಡ ಟಿಕೆಟ್ ಪ್ರಿಯರಿಗೆ ಶುಭ ಸುದ್ದಿ ನೀಡಿದೆ.
ಕೇವಲ ಇಂದಿನ ಪಂದ್ಯಕ್ಕೆ ಮಾತ್ರವಲ್ಲದೆ, ಬೆಂಗಳೂರಿನಲ್ಲಿ ನಡೆಯುವ ಎಲ್ಲಾ ಐಪಿಎಲ್ ಪಂದ್ಯಗಳ ದಿನ ಕೂಡ ಬಿಎಂಟಿಸಿ ವಿಶೇಷ ಬಸ್ಸುಗಳು ಕಾರ್ಯಚರಣೆ ನಡೆಸಲಿವೆ.
ಐಪಿಎಲ್ಗೆ ಬಿಎಂಟಿಸಿ ವಿಶೇಷ ಬಸ್: ಎಲ್ಲಿಂದ ಎಲ್ಲಿಗೆ ಸ್ಪೆಷಲ್ ಬಸ್:
- ಎಂ ಚಿನ್ನಸ್ವಾಮಿ ಕ್ರೀಡಾಂಗಣ – ಕಾಡುಗೋಡಿಬಸ್ ನಿಲ್ದಾಣ (ಹೆಚ್.ಎ.ಎಲ್‌ರಸ್ತೆ)
- ಚಿನ್ನಸ್ವಾಮಿ ಕ್ರೀಡಾಂಗಣ (ಜಿ-2) – ಸರ್ಜಾಪುರ
- ಚಿನ್ನಸ್ವಾಮಿ ಕ್ರೀಡಾಂಗಣ (ಜಿ-3) – ಎಲೆಕ್ಟ್ರಾನಿಕ್ ಸಿಟಿ (ಹೊಸೂರುರಸ್ತೆ)
- ಚಿನ್ನಸ್ವಾಮಿ ಕ್ರೀಡಾಂಗಣ (ಜಿ-4) – ಬನ್ನೇರುಘಟ್ಟ ಮೃಗಾಲಯ.
- ಚಿನ್ನಸ್ವಾಮಿ ಕ್ರೀಡಾಂಗಣ (ಜಿ-7) – ಜನಪ್ರಿಯ ಟೌನ್‌ಷಿಪ್ (ಮಾಗಡಿ ರಸ್ತೆ)
- ಚಿನ್ನಸ್ವಾಮಿ ಕ್ರೀಡಾಂಗಣ (ಜಿ-10) – ಆರ್.ಕೆ. ಹೆಗಡೆ ನಗರ ಯಲಹಂಕ (ನಾಗವಾರ, ಟ್ಯಾನರಿ ರಸ್ತೆ)
- ಚಿನ್ನಸ್ವಾಮಿ ಕ್ರೀಡಾಂಗಣ (317 ಜಿ) – ಹೊಸಕೋಟೆ.
- ಚಿನ್ನಸ್ವಾಮಿ ಕ್ರೀಡಾಂಗಣ (13) – ಬನಶಂಕರಿ.
ಏಪ್ರಿಲ್ 10, 18, 24 ಮತ್ತು ಮೇ 3, 13 ಹಾಗೂ 17 ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ ಪಂದ್ಯಗಳು ಆಯೋಜನೆಯಾಗಿವೆ. ಈ ಎಲ್ಲ ದಿನಗಳಲ್ಲಿಯೂ ಬಿಎಂಟಿಸಿ ವಿಶೇಷ ಬಸ್ ಸೇವೆ ಇರಲಿದೆ.