Thursday, April 3, 2025
Google search engine

HomeUncategorizedರಾಷ್ಟ್ರೀಯಬಾಲಿವುಡ್ ನಟ ಅಮಿತಾಬ್ ಬಚ್ಚನ್ ಮನೆ 83 ಕೋಟಿ ರೂಪಾಯಿಗೆ ಮಾರಾಟ

ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಮನೆ 83 ಕೋಟಿ ರೂಪಾಯಿಗೆ ಮಾರಾಟ

ಮುಂಬೈ: ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರು ಮುಂಬೈನ ಓಶಿವಾರಾದಲ್ಲಿರುವ ಡುಪ್ಲೆಕ್ಸ್ ಅಪಾರ್ಟ್‌ಮೆಂಟ್ ಅನ್ನು ೮೩ ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ ಎಂದು ವರದಿಯಾಗಿದೆ.

ಓಶಿವಾರಾದಲ್ಲಿರುವ ಕ್ರಿಸ್ಟಲ್ ಗ್ರೂಪ್‌ನ ವಸತಿ ಸಮುಚ್ಚಯವಾದ `ದಿ ಅಟ್ಲಾಂಟಿಸ್’ನಲ್ಲಿ ಈ ಅಪಾರ್ಟ್‌ಮೆಂಟ್ ಇದೆ. ೨೦೨೧ರ ಏಪ್ರಿಲ್‌ನಲ್ಲಿ ಈ ಅಪಾರ್ಟ್‌ಮೆಂಟ್ ಅನ್ನು ಅಮಿತಾಬ್ ಬಚ್ಚನ್ ಅವರು ೩೧ ಕೋಟಿಗೆ ಖರೀದಿಸಿದ್ದರು. ಇದೀಗ ನೋಂದಣಿ ಮಹಾಪರಿವೀಕ್ಷಕ ಹಾಗೂ ಮುದ್ರಾಂಕ ಆಯುಕ್ತರ (ಐಜಿಆರ್) ಪ್ರಕಾರ, ಈ ಅಪಾರ್ಟ್‌ಮೆಂಟ್ ಅನ್ನು ೮೩ ಕೋಟಿಗೆ ಮಾರಾಟ ಮಾಡಲಾಗಿದೆ. ಅದರಂತೆ ಅಮಿತಾಬ್ ಅವರು ಶೇ ೧೬೮ರಷ್ಟು ಲಾಭ ಪಡೆದಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.

೨೦೨೧ರ ಏಪ್ರಿಲ್‌ನಲ್ಲಿ ಈ ಅಪಾರ್ಟ್‌ಮೆಂಟ್ ಅನ್ನು ಖರೀದಿಸಿದ್ದ ಅಮಿತಾಬ್, ಆದೇ ವರ್ಷ ನವೆಂಬರ್‌ನಲ್ಲಿ ನಟಿ ಕೃತಿ ಸನೋನ್ ಅವರಿಗೆ ಭದ್ರತಾ ಠೇವಣಿ ೬೦ ಲಕ್ಷ ಮತ್ತು ಮಾಸಿಕ ೧೦ ಲಕ್ಷದಂತೆ ಬಾಡಿಗೆಗೆ ನೀಡಿದ್ದರು ಎಂದು ಐಜಿಆರ್ ಗುತ್ತಿಗೆ ದಾಖಲೆಗಳಿಂದ ತಿಳಿದುಬಂದಿದೆ. ಪಶ್ಚಿಮ ಮುಂಬೈನಲ್ಲಿರುವ ಓಶಿವಾರಾವು ಉತ್ತಮ ರಸ್ತೆಗಳು ಮತ್ತು ಮೆಟ್ರೊ ಸಂಪರ್ಕವನ್ನು ಹೊಂದಿರುವ ಪ್ರದೇಶವಾಗಿದ್ದು, ಆಧುನಿಕ ಜೀವನಶೈಲಿಗೆ ಹೆಸರುವಾಸಿಯಾಗಿದೆ.

RELATED ARTICLES
- Advertisment -
Google search engine

Most Popular