Friday, April 11, 2025
Google search engine

Homeಅಪರಾಧವಂಡರ್​ಲಾ ಅಮ್ಯೂಸ್​ಮೆಂಟ್ ಪಾರ್ಕ್​ಗೆ ಬಾಂಬ್ ಬೆದರಿಕೆ: ಆರೋಪಿಗಾಗಿ ಬಿಡದಿ ಪೊಲೀಸರ ಶೋಧ

ವಂಡರ್​ಲಾ ಅಮ್ಯೂಸ್​ಮೆಂಟ್ ಪಾರ್ಕ್​ಗೆ ಬಾಂಬ್ ಬೆದರಿಕೆ: ಆರೋಪಿಗಾಗಿ ಬಿಡದಿ ಪೊಲೀಸರ ಶೋಧ

ರಾಮನಗರ: ರಾಮನಗರ ತಾಲೂಕಿನ ಬಿಡದಿ ಬಳಿಯಿರುವ ವಂಡರ್​ಲಾ ಅಮ್ಯೂಸ್​ಮೆಂಟ್ ಪಾರ್ಕ್​ಗೆ ಕಿಡಿಗೇಡಿಗಳಿಂದ ಬಾಂಬ್ ಬೆದರಿಕೆ ಹಾಕಲಾಗಿದೆ. ಆ. 3ರಂದು ಕಳುಹಿಸಿದ್ದ ಬಾಂಬ್ ಬೆದರಿಕೆ ಸಂದೇಶ ತಡವಾಗಿ ಬೆಳಕಿಗೆ ಬಂದಿದೆ. ಭಾನುವಾರ, ವಂಡರ್​ಲಾದಲ್ಲಿ 3 ಬಾಂಬ್ ಸ್ಫೋಟಿಸುತ್ತೇವೆ ಎಂದು ಇಂಗ್ಲಿಷ್ ಬಳಸಿ ಉರ್ದು ಭಾಷೆಯಲ್ಲಿ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದಾರೆ. ಇ-ಮೇಲ್ ಮಾಡಿದ್ದ ಆರೋಪಿಗಾಗಿ ಬಿಡದಿ ಪೊಲೀಸರು ಶೋಧ ನಡೆಸಿದ್ದಾರೆ.

ಮುಸ್ಲಿಮರ ಮೇಲೆ ದಬ್ಬಾಳಿಕೆ ಮಾಡುವ ಕನ್ನಡದ ಕಾಫೀರರಿಗೆ ಶಿಕ್ಷೆಯಾಗಲಿದೆ ಎಂದು ‘ಮೊಹಮ್ಮದ್ ಇರ್ಫಾನ್ ಜಿಹಾದಿ’ ಎಂಬ ಮೇಲ್ ಐಡಿಯಿಂದ ವಂಡರ್​ಲಾ ಸಿಬ್ಬಂದಿಗೆ ಆಗಸ್ಟ್ 3ರಂದು ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ ಬಂದಿತ್ತು.

ಬಾಂಬ್ ಬೆದರಿಕೆ ಹಿನ್ನೆಲೆ ವಂಡರ್​ಲಾ ಅಮ್ಯೂಸ್​ಮೆಂಟ್ ಪಾರ್ಕ್​​ನ್ನು ಪೊಲೀಸರು ಪರಿಶೀಲನೆ ಮಾಡಿದ್ದಾರೆ. ಆದರೆ ಈ ವೇಳೆ ಯಾವುದೇ ಸ್ಫೋಟಕ ಪತ್ತೆಯಾಗಿಲ್ಲ. ಹೀಗಾಗಿ ಹುಸಿ ಬಾಂಬ್ ಬೆದರಿಕೆ ಎಂದು ದೃಢಪಡಿಸಿದ್ದಾರೆ.

RELATED ARTICLES
- Advertisment -
Google search engine

Most Popular