Friday, April 4, 2025
Google search engine

Homeಅಪರಾಧಕಾನೂನುಮಾಧ್ಯಮಗಳ ವಿರುದ್ಧ ನಿರ್ಬಂಧಕಾಜ್ಞೆ ಕೋರಿ ಕೋರ್ಟ್ ಮೆಟ್ಟಿಲೇರಿದ ಬೊಮ್ಮಾಯಿ

ಮಾಧ್ಯಮಗಳ ವಿರುದ್ಧ ನಿರ್ಬಂಧಕಾಜ್ಞೆ ಕೋರಿ ಕೋರ್ಟ್ ಮೆಟ್ಟಿಲೇರಿದ ಬೊಮ್ಮಾಯಿ

ಬೆಂಗಳೂರು: ಮಾಧ್ಯಮಗಳ ವಿರುದ್ಧ ನಿರ್ಬಂಧಕಾಜ್ಞೆ ಕೋರಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕೋರ್ಟ್​ ಮೆಟ್ಟಿಲೇರಿದ್ದಾರೆ.

ತಮ್ಮ ವಿರುದ್ಧ ಯಾವುದೇ ಮಾನಹಾನಿಕರ ಹೇಳಿಕೆ ಸುದ್ದಿ ಪ್ರಸಾರ ಮಾಡದಂತೆ ಮಾಧ್ಯಮಗಳ ವಿರುದ್ಧ ನಿರ್ಬಂಧಕಾಜ್ಞೆ ಕೋರಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರು ಸಿಟಿ ಸಿವಿಲ್​ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೇ ವಕೀಲ ಜಗದೀಶ್ ಮಹದೇವ್ ವಿರುದ್ದವೂ ನಿರ್ಬಂಧಕಾಜ್ಞೆ ಕೋರಿದ್ದು, ಈ ಸಂಬಂಧ‌ ಕೋರ್ಟ್​, ನಾಳೆ(ಆಗಸ್ಟ್ 28) ಆದೇಶ ಪ್ರಕಟಿಸಲಿದೆ.

ಓರ್ವ ವ್ಯಕ್ತಿಯ ಚಾರಿತ್ರ್ಯ ವಧೆ, ಮಾನಹಾನಿಯಾಗುವಂತೆ ಯಾರಾದರು ಹೇಳಿಕೆ, ದಾಖಲೆಗಳನ್ನು ಬಿಡುಗಡೆ ಮಾಡುತ್ತಾರೆ. ಅದನ್ನು ಮಾಧ್ಯಮಗಳು ಪ್ರಸಾರ ಮಾಡದಂತೆ ಕೋರ್ಟ್​​ನಿಂದ ನಿರ್ಬಂಧಕಾಜ್ಞೆ ತರುವುದು ಮಾಮೂಲಿಯಾಗಿದೆ. ಆದ್ರೆ, ಇದೀಗ ನೂತನ ಸಂಸದ ಬಸವರಾಜ ಬೊಮ್ಮಾಯಿ ಅವರು ಇದೀಗ ಏಕೆ ಏಕಾಎಕಿ ಮಾಧ್ಯಮಗಳ ವಿರುದ್ಧ ನಿರ್ಬಂಧಕಾಜ್ಞೆ ತರಲು ಹೊರಟ್ಟಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.

ಸಿಎಂ ವಿರುದ್ಧ ಮುಡಾ ಹಗರಣ ಆರೋಪದ ಮಾಡಿದ ಬೆನ್ನಲ್ಲೇ ರಾಜ್ಯ ಸರ್ಕಾರ ವಿಪಕ್ಷ ನಾಯಕರುಗಳ ಹಳೇ ಕೇಸ್​ಗಳನ್ನು ರೀಓಪನ್​ ಮಾಡುತ್ತಿದೆ. ಅಲ್ಲದೇ ಬಿಜೆಪಿ ಸರ್ಕಾರದ ಅವಧಿಯಲ್ಲಿನ ಹಗರಣ ಬಗ್ಗೆ ಗಂಭೀರವಾಗಿ ತನಿಖೆ ನಡೆಸಲು ಮುಂದಾಗಿದೆ. ಇದೆಲ್ಲದರ ಮಧ್ಯ ಬಸವರಾಜ ಬೊಮ್ಮಾಯಿ ಕೋರ್ಟ್​ ಮೊರೆ ಹೋಗಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ ಬೊಮ್ಮಾಯಿ ವಿರುದ್ಧ ಏನಾದರೂ ಆರೋಪಗಳು ಇದ್ದಾವೆಯೇ? ಯಾರಾದರೂ ಅವುಗಳನ್ನು ಬಹಿರಂಗಪಡಿಸಲು ಮುಂದಾಗಿದ್ದಾರಾ? ಹೀಗೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

RELATED ARTICLES
- Advertisment -
Google search engine

Most Popular