Thursday, April 3, 2025
Google search engine

Homeರಾಜಕೀಯಜನರ ಬಾಯಿಗೆ ಮಣ್ಣು ಹಾಕಿದ್ದ ಬೊಮ್ಮಾಯಿ ಸರ್ವ ಸಂಪನ್ನರೇನಲ್ಲ: ಸಚಿವ ದಿನೇಶ್ ಗುಂಡೂರಾವ್

ಜನರ ಬಾಯಿಗೆ ಮಣ್ಣು ಹಾಕಿದ್ದ ಬೊಮ್ಮಾಯಿ ಸರ್ವ ಸಂಪನ್ನರೇನಲ್ಲ: ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು : ತಮ್ಮ ಅಧಿಕಾರದ ಅವಧಿಯಲ್ಲಿ ಜನರ ಬಾಯಿಗೆ ಮಣ್ಣು ಹಾಕಿದ್ದ ಮಾಜಿ ಸಿಎಂ ಮತ್ತು ಸಂಸದ ಬಸವರಾಜ ಬೊಮ್ಮಾಯಿ ಅವರು ಈಗ ಸರ್ವಸಂಪನ್ನರಂತೆ ಮಾತನಾಡುತ್ತಿದ್ದಾರೆ. ಅವರಿಗೆ ಕನಿಷ್ಠ ಪಕ್ಷ ಆತ್ಮಸಾಕ್ಷಿ ಇದ್ದಿದರೆ ಈ ರೀತಿಯ ಮಾತು ಆಡುತ್ತಿರಲಿಲ್ಲ ಎಂದು ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಕುಟುಕಿದ್ದಾರೆ.

ಬೊಮ್ಮಾಯಿಯವರೆ, ನೀವು ಮುಖ್ಯಮಂತ್ರಿಯಾಗಿ ಏನು ಕಡಿದು ಕಟ್ಟೆ ಹಾಕಿದ್ದೀರಿ? ಎಂದು ಕೇಳಿದರೆ ನೀವು ಉತ್ತರ ಕೊಡಲು ತಡಕಾಡುವಿರಿ. ಮುಖ್ಯಮಂತ್ರಿಯಾಗಿದ್ದಾಗ ನೀವು ಈ ರಾಜ್ಯಕ್ಕೆ ಕೊಟ್ಟ ಕೊಡುಗೆಯೇನು? ಉತ್ತರಿಸಿ” ಎಂದು ಎಕ್ಸ್ ತಾಣದಲ್ಲಿ ಅಗ್ರಹಿಸಿದ್ದಾರೆ.

ಬೊಮ್ಮಾಯಿಯವರೆ, ೨೦೨೩ರಲ್ಲಿ ನೀವು ಮರಳಿ ಅಧಿಕಾರಕ್ಕೆ ಬರುವುದಿಲ್ಲ ಎಂಬ ಸತ್ಯ ಗೊತ್ತಿತ್ತು. ಹಾಗಾಗಿ ಅಧಿಕಾರ ಬಿಡುವ ಮುನ್ನ ಬಜೆಟ್ ವೆಚ್ಚಕ್ಕಿಂತ ೭ ಪಟ್ಟು ವೆಚ್ಚದ ಕಾಮಗಾರಿಗಳಿಗೆ ಅನುಮೋದನೆ ನೀಡಿದಿರಿ. ಆ ಕಾಮಗಾರಿ ಕೈಗೊಂಡ ಗುತ್ತಿಗೆದಾರರಿಗೆ ಹಣ ಪಾವತಿ ಯಾರು ಮಾಡಬೇಕು? ನಿಮ್ಮ ಸ್ವಂತ ಖಜಾನೆಯಿಂದ ಕೊಡುವಂತೆ ಅಪ್ರಸ್ತುತ ಕಾಮಗಾರಿಗಳಿಗೆ ಅನುಮೋದನೆ ಕೊಟ್ಟಾಗ ಪ್ರಜ್ಞೆ ಇರಲಿಲ್ಲವೆ? ಇದು ಜನರ ಬಾಯಿಗೆ ಮಣ್ಣು ಹಾಕುವ ಕೆಲಸವಲ್ಲವೆ?

ಬೊಮ್ಮಾಯಿಯವರೆ, ನೀವು ಮುಖ್ಯಮಂತ್ರಿಯಾಗಿದ್ದಾಗ ಎಂದಾದರೂ ಕೇಂದ್ರ ಸರ್ಕಾರದ ತೆರಿಗೆ ಅನ್ಯಾಯದ ಬಗ್ಗೆ ಎದೆಯೆತ್ತಿ ಮಾತಾಡಿದ್ದೀರಾ? ಹೋಗಲಿ ಮೋದಿ ಸರ್ಕಾರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಒಮ್ಮೆಯಾದರೂ ಬಾಯಿ ಬಿಟ್ಟಿದ್ದೀರಾ? ಮೋದಿಯವರ ಮುಂದೆ ನಡು ಬಗ್ಗಿಸಿ ನಿಂತಿದ್ದೆ ನಿಮ್ಮ ಸಾಧನೆಯಲ್ಲವೆ? ಇದು ಜನರ ಬಾಯಿಗೆ ಮಣ್ಣು ಹಾಕುವ ಕೆಲಸವಲ್ಲವೆ?” ಎಂದು ಲೇವಡಿ ಮಾಡಿದ್ದಾರೆ.

ಬೊಮ್ಮಾಯಿಯವರೆ, ಗ್ಯಾರಂಟಿ ಯೋಜನೆಗಳಿಗೆ ನಮ್ಮ ಸರ್ಕಾರ ೫೮ ಸಾವಿರ ಕೋಟಿ ಮೀಸಲಿರಿಸಿದೆ. ಈ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಎಷ್ಟೋ ಮನೆಗಳ ದೀಪ ಉರಿಯುತ್ತಿದೆ ಎಂಬ ಅರಿವು ನಿಮಗರಲಿ. ನಿಮ್ಮ ನೇತೃತ್ವದ ಸರ್ಕಾರವಿದ್ದಾಗ ಯಾವುದಾದರೂ ಒಂದೇ ಒಂದು ಜನಪರ ಕಾರ್ಯಕ್ರಮ ಮಾಡಿದ ಉದಾಹರಣೆ ಇದೆಯೆ? ರಾಜ್ಯದ ಖಜಾನೆ ಲೂಟಿ ಹೊಡದಿದ್ದೆ ನಿಮ್ಮ ಸರ್ಕಾರದ ಹೆಗ್ಗಳಿಕೆಯಲ್ಲವೆ? ಎಂದು ದಿನೇಶ್ ಗುಂಡೂರಾವ್ ವ್ಯಂಗ್ಯವಾಡಿದ್ದಾರೆ.

RELATED ARTICLES
- Advertisment -
Google search engine

Most Popular