ಗುಂಡ್ಲುಪೇಟೆ: ತಾಲೂಕಿನ ಬೊಮ್ಮಲಾಪುರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ವಿಶ್ವನಾಥ್, ಉಪಾಧ್ಯಕ್ಷರಾಗಿ ಚೆನ್ನಜಮ್ಮ ಅವಿರೋಧವಾಗಿ ಆಯ್ಕೆಯಾದರು. ಈ ಮೂಲಕ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಬೊಮ್ಮಲಾಪುರ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿತ್ತು. ಅಧ್ಯಕ್ಷರಾಗಿ ವಿಶ್ವನಾಥ್, ಉಪಾಧ್ಯಕ್ಷರಾಗಿ ಚೆನ್ನಜಮ್ಮ ಹೊರತು ಪಡಿಸಿದ ಇತರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಇಬ್ಬರ ಅವಿರೋಧ ಆಯ್ಕೆಯನ್ನು ಚುನಾವಣೆ ಅಧಿಕಾರಿಯಾಗಿದ್ದ ಚಾಮರಾಜನಗರದ ಸಿಡಿಓ ಸಹಾಯಕ ಅಭಿವೃದ್ಧಿ ಅಧಿಕಾರಿ ಡಿ.ಎ.ಸುರೇಶ್ ಘೋಷಣೆ ಮಾಡಿದರು. ಈ ಸಂದರ್ಭದಲ್ಲಿ ಬೆಂಬಲಿಗರು ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಹೂವಿನ ಹಾರಹಾಕಿ ಸನ್ಮಾನಿಸಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.
ಈ ಸಂದರ್ಭದಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರಾದ ಗಂಗಾಧರಸ್ವಾಮಿ, ಗವಿಯಪ್ಪ, ಬಸಮಣ್ಣಮ್ಮ, ಮುದ್ದಪ್ಪ, ವೃಷಬೇಂದ್ರ, ವಿಶ್ವಾಸ್ ಶ್ರೀಕಂಠಸ್ವಾಮಿ ಹಾಜರಿದ್ದು, ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಶುಭ ಕೋರಿದರು. ಈ ವೇಳೆ ಗ್ರಾಪಂ ಸದಸ್ಯರಾದ ಗೋವಿಂದರಾಜು, ನಂದೀಶ್, ಮುಖಂಡರಾದ ಶೆಟ್ಟಹಳ್ಳಿ ವೀರಪ್ಪ, ಕೊಡಸೋಗೆ ರಾಜು, ಹುಂಡೀಪುರ ಯೋಗೇಶ್, ದಕ್ಷ ಬಸವಣ್ಣ, ನಾಗೇಶ್, ಶಿವಬಸಪ್ಪ, ಜವರಯ್ಯ ಸೇರಿದಂತೆ ಬಿಜೆಪಿ ಮುಖಂಡರು ಹಾಗು ಗ್ರಾಮಸ್ಥರು ಹಾಜರಿದ್ದರು.