Friday, April 18, 2025
Google search engine

Homeರಾಜ್ಯಸುದ್ದಿಜಾಲಬಿಪಿಎಲ್ ಕಾರ್ಡ್ ರದ್ದು ಅವೈಜ್ಞಾನಿಕ :ಹೇಮಾ ನಂದೀಶ್ ಆರೋಪ

ಬಿಪಿಎಲ್ ಕಾರ್ಡ್ ರದ್ದು ಅವೈಜ್ಞಾನಿಕ :ಹೇಮಾ ನಂದೀಶ್ ಆರೋಪ

ಮೈಸೂರು: ಬಿಪಿಎಲ್ ಕಾರ್ಡ್ ರದ್ದು ವಿಚಾರದಲ್ಲಿ ರಾಜ್ಯ ಸರಕಾರ ಆವೈಜ್ಞಾನಿಕ ನೀತಿ ಅನುಸರಿಸುತ್ತಿದೆ ಎಂದು ಮೈಸೂರು ನಗರ ಬಿಜೆಪಿ ಉಪಾಧ್ಯಕ್ಷರಾದ ಹೇಮಾನಂದೀಶ್ ಆರೋಪಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಗ್ಯಾರಂಟಿಗಳಿಗೆ ಹಣ ಹೊಂದಿಸಲಾಗದೆ, ಭ್ರಷ್ಟಾಚಾರದಲ್ಲಿ ಮುಳುಗಿ ಬೊಕ್ಕಸ ಬರಿದಾಗಿರುವ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಅವರು 11 ಲಕ್ಷ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದು ಮಾಡಿದ್ದಾರೆ.

ಅನರ್ಹತೆ ಹೆಸರಿನಲ್ಲಿ ನಿಜವಾದ ಬಿಪಿಎಲ್ ಕಾರ್ಡ್ ದಾರರಿಗೆ ಹಕ್ಕು ಕಿತ್ತುಕೊಳ್ಳುವುದು ಖಂಡನೀಯ. ಬಿಪಿಎಲ್ ಕಾರ್ಡ್ ದಾರರನ್ನು ಇಳಿಮುಖಗೊಳಿಸಿ, ಭಾಗ್ಯ ಯೋಜನೆಗಳಿಗೆ ಹಣ ಹೊಂದಿಸುವ ದುರುದ್ದೇಶ ಬಿಪಿಎಲ್ ಕಾರ್ಡ್ ರದ್ದತಿ ಹಿಂದೆ ಆಡಗಿದೆ. ಬಿಪಿಎಲ್ ಕಾರ್ಡ್ ರದ್ದು ಮಾಡಲು ದಾರಿ ಹುಡುಕುತ್ತಿರುವ ರಾಜ್ಯ ಸರಕಾರ, ಸಣ್ಣ ರೈತರು ಮನೆ ನಿರ್ಮಾಣ ಅಥವಾ ಹೈನುಗಾರಿಕೆಗೆ ಬ್ಯಾಂಕ್ ನಲ್ಲಿ ಸಾಲ ಸೌಲಭ್ಯ ಪಡೆಯಲು ತೆರಳಿದಾಗ ಬ್ಯಾಂಕ್ ಅಧಿಕಾರಿಗಳು ನೀವು ಅಂದಾಜು ಮೂರು ವರ್ಷ ತೆರಿಗೆ ಪಾವತಿಸಿರಬೇಕು ಎಂದು ಹೇಳಿರುತ್ತಾರೆ. ಅದರಂತೆ ಮುಗ್ಧ ಜನರು ಸಾಲ ಪಡೆಯುವ ಉದ್ದೇಶದಿಂದ ತೆರಿಗೆ ಕಟ್ಟಿರುತ್ತಾರೆ. ಆದರೆ, ಅದನ್ನೇ ನೆಪ ಮಾಡಿಕೊಂಡು ಇವರ ಬಿಪಿಎಲ್‌ ಕಾರ್ಡ್ ರದ್ದು ಮಾಡಲಾಗುತ್ತಿದೆ. ಅಂದರೆ, ಬಡವರು, ಮಧ್ಯಮ ವರ್ಗದವರು ಸಾಲ ಪಡೆಯುವುದೇ ತಪ್ಪಾ? ಇಂತಹ ಕುಂಟು ನೆಪ ಹೇಳಿ ಬಡ ವರ್ಗದ ಜನತೆಗೆ ಸಿಕ್ಕ ಬಿಪಿಎಲ್ ಕಾರ್ಡ್ ರದ್ದು ಮಾಡುತ್ತಿರುವುದು ಖಂಡ ನೀಯ ಎಂದು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular