Wednesday, April 9, 2025
Google search engine

Homeರಾಜ್ಯಸುದ್ದಿಜಾಲಆದಿಶಕ್ತಿ ಶ್ರೀ ಸಪ್ತ ಮಾತೃಕೆ ದೇವಿರಮ್ಮ ತಾಯಿಯ ಬ್ರಹ್ಮ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವ

ಆದಿಶಕ್ತಿ ಶ್ರೀ ಸಪ್ತ ಮಾತೃಕೆ ದೇವಿರಮ್ಮ ತಾಯಿಯ ಬ್ರಹ್ಮ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಸಾಲಿಗ್ರಾಮ ತಾಲೂಕಿನ ದೇವಿತಂದ್ರೆ ಗ್ರಾಮದಲ್ಲಿ ಇತಿಹಾಸ ಪ್ರಸಿದ್ಧ ಆದಿಶಕ್ತಿ ಶ್ರೀ ಸಪ್ತ ಮಾತೃಕೆ ದೇವಿರಮ್ಮ ತಾಯಿಯ ಬ್ರಹ್ಮ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವವು ಸಾವಿರಾರು ಜನರ ನಡುವೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಅತ್ಯಂತ ವಿಜೃಂಭಣೆಯಿಂದ ನಡೆಯಿತು.

ಜಾತ್ರಾ ಮಹೋತ್ಸವದ ಅಂಗವಾಗಿ ದೇವಾಲಯವನ್ನು ಹೂವು ಹಾಗೂ ವಿದ್ಯುತ್ ದೀಪಗಳಿಂದ ವಿಶೇಷವಾಗಿ ಶೃಂಗಾರಮಾಡಲಾಗಿತ್ತು.

ದೇವಾಲಯದಲ್ಲಿ ಶ್ರೀ ದೇವಿರಮ್ಮ ತಾಯಿಗೆ ವಿಶೇಷ ಅಲಂಕಾರ ಮಾಡಿ ಪೂಜಾ ಕಾರ್ಯಗಳನ್ನು ನೆರವೇರಿಸಿ ಸಾರ್ವಜನಿಕರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.

ರಥೋತ್ಸವಕ್ಕೆ ಶಾಸಕ ಡಿ.ರವಿಶಂಕರ್ ಚಾಲನೆ ನೀಡಿದರು. ರಥಕ್ಕೆ ಸಾರ್ವಜನಿಕರು ಹಣ್ಣು ಜವನಗಳನ್ನು ಎಸೆಯುವ ಮೂಲಕ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥಿಸಿದರು.

ರಥೋತ್ಸವದಲ್ಲಿ ಮೈಸೂರು, ಮಂಡ್ಯ, ಹಾಸನ, ಕೊಡಗು, ಚಾಮರಾಜನಗರ, ತುಮಕೂರು, ಬೆಂಗಳೂರು, ರಾಮನಗರ ಸೇರಿದಂತೆ ನಾಡಿನ ಹಲವು ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡಿದ್ದರು.

ಪೊಲೀಸ್ ಇನ್ಸ್ಪೆಕ್ಟರ್ ಕೃಷ್ಣರಾಜು ಅವರ ನೇತೃತ್ವದಲ್ಲಿ ಅಗತ್ಯ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ರಥೋತ್ಸವದ ಹಿನ್ನೆಲೆಯಲ್ಲಿ ಮುಂಜಾನೆಯಿಂದಲೇ ಭಕ್ತರುಗಳು ದೇವಸ್ಥಾನಕ್ಕೆ ಬಂದು ವಿಶೇಷ ಪೂಜೆಗಳನ್ನು ಸಲ್ಲಿಸಿದರು.

ಜಾತ್ರಾ ಮಹೋತ್ಸವದಲ್ಲಿ ತಂಪು ಪಾನೀಯ, ಆಟಿಕೆ ಸಾಮಾನುಗಳು, ಹೋಟೆಲ್ ಗಳು, ಗೃಹ ಉಪಯೋಗಿ ವಸ್ತುಗಳು, ಬಳೆ, ಹಣ್ಣು, ಕಾಯಿ ಅಂಗಡಿಗಳು, ಸಿಹಿ ತಿಂಡಿಗಳು, ಜಲಜೀವನ್ ಮಿಷನ್ ಯೋಜನೆಯ ವಸ್ತು ಪ್ರದರ್ಶನ ಕೇಂದ್ರ ಸೇರಿದಂತೆ ವಿವಿಧ ಮಾದರಿಯ ಅಂಗಡಿಗಳು ಮಳಿಗೆಗಳು ತಲೆಯೆತ್ತಿ ಸಾರ್ವಜನಿಕರನ್ನು ತಮ್ಮತ್ತ ಸೆಳೆಯುವುದರಲ್ಲಿ ಯಶಸ್ವಿಯಾಗಿದ್ದು ಕಂಡುಬಂದಿತು.

ಶ್ರೀ ದೇವಿರಮ್ಮ ದೇವಾಲಯಕ್ಕೆ ಶಾಸಕ ಡಿ.ರವಿಶಂಕರ್, ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ, ಮುಡಾ ಮಾಜಿ ಅಧ್ಯಕ್ಷ ಎಚ್.ಎನ್.ವಿಜಯ್, ಗ್ರಾ.ಪಂ. ಅಧ್ಯಕ್ಷೆ ರೇಣುಕಾ ವೆಂಕಟೇಶ್, ಮಾಜಿ ಅಧ್ಯಕ್ಷರಾದ ರಾಣಿ ಕುಮಾರ್, ಲೋಕೇಶ್, ಉಪಾಧ್ಯಕ್ಷ ಮಹದೇವ, ತಾ.ಪಂ. ಮಾಜಿ ಅಧ್ಯಕ್ಷರಾದ ವೀಣಾ ದಿಲೀಪ್ ಹೆಚ್.ಟಿ.ಮಂಜಪ್ಪ, ಚಂದು, ಮಾಜಿ ಸದಸ್ಯ ಸಣ್ಣಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಉದಯಶಂಕರ್, ಮಹದೇವ್, ಎಸ್ಸಿ ಘಟಕದ ಅಧ್ಯಕ್ಷ ಕಂಠಿಕುಮಾರ್, ವಕ್ತಾರ ಜಾಬೀರ್, ತಹಶೀಲ್ದಾರ್ ನರಗುಂದ, ಶಿರಸ್ತೇದಾರ್ ಸತೀಶ್ ಕುಮಾರ್, ಉಪತಹಶಿಲ್ದಾರ್ ಮಹೇಶ್, ಪಿಡಿಓ ಮಹದೇವ್, ಮುಖಂಡರುಗಳಾದ ತಂದ್ರೆಧರ್ಮ, ಮಹದೇವಪ್ಪ, ಕೊತ್ವಾಲ್ ಮಂಜುನಾಥ್, ಮಹದೇವ, ಪೂರ್ಣಚಂದ್ರಗೌಡ, ಕುಮಾರಸ್ವಾಮಿ, ಕೋಮಲಾಚಾರಿ, ಶಂಕರೇಗೌಡ, ವೆಂಕಟೇಶನಾಯಕ, ನಟರಾಜ್, ಸಂತೋಷ, ತಮ್ಮಣ್ಣ, ನಾಗಣ್ಣ, ಮೂರ್ತಿ, ಬಸವಣ್ಣ, ಚಂದ್ರು, ಮೋಹನ್, ಹುಚ್ಚೇಗೌಡ, ಜನಪ್ರತಿನಿಧಿಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳು ಸೇರಿದಂತೆ ಹಲವರು ಭೇಟಿ ನೀಡಿ ದೇವಿಯ ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸಿದರು.

RELATED ARTICLES
- Advertisment -
Google search engine

Most Popular