ಹೈದರಾಬಾದ್: ಬ್ರಹ್ಮಗಂಟು ಧಾರವಾಹಿಯ ಮೂಲಕ ಗುರುತಿಸಿಕೊಂಡಿದ್ದಂತ ಖ್ಯಾತ ನಟಿ ಶೋಭಿತಾ ಅವರು ಆತ್ಮಹತ್ಯೆಗೆ ಶರಣಾಗಿರುವುದಾಗಿ ತಿಳಿದು ಬಂದಿದೆ. ಹೈದರಾಬಾದಿನ ನಿವಾಸದಲ್ಲಿ ಸಾವಿಗೆ ಶರಣಾಗುವ ಮೂಲಕ ಇನ್ನಿಲ್ಲವಾಗಿರೋದಾಗಿ ಹೇಳಲಾಗುತ್ತಿದೆ.
ಹಾಸನ ಮೂಲದ ಸಕಲೇಶಪುರದ ನಟಿ ಶೋಭಿತಾ ಅವರು ಮದುವೆಯ ಬಳಿಕ ಹೈದರಾಬಾದಿನಲ್ಲಿ ನೆಲೆಸಿದ್ದರು. ಅವರು ನಿನ್ನೆ ತಡರಾತ್ರಿ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಅವರ ಮೃತದೇಹವನ್ನು ಹೈದರಾಬಾದ್ ನಲ್ಲಿ ಮರಣೋತ್ತರ ಪರೀಕ್ಷೆ ಬಳಿಕ, ಬೆಂಗಳೂರಿಗೆ ರವಾನಿಸೋ ಸಾಧ್ಯತೆ ಇದೆ.
ಅಂದಹಾಗೇ ಪದವಿ ಮುಗಿಸಿದ ಬಳಿಕ ಸಕಲೇಶಪುರದಿಂದ ಬೆಂಗಳೂರಿಗೆ ಬಂದಿದ್ದಂತ ಶೋಭಿತಾ, ಕನ್ನಡದ 12ಕ್ಕೂ ಹೆಚ್ಚು ಧಾರವಾಹಿಗಳಲ್ಲಿ ನಟಿಸಿ ಹೆಸರುಗಳಿಸಿದ್ದರು. ಮಂಗಳಗೌರಿ, ಕೋಗಿಲೆ, ಗಾಳಿಪ, ಬ್ರಹ್ಮಗಂಟು, ಕೃಷ್ಣರುಕ್ಮಿಣಿ, ದೀಪವು ನಿನ್ನದೆ ಗಾಳಿಯು ನಿನ್ನದೇ, ಅಮ್ಮಾವ್ರು, ಮನೆದೇವರು ಸೇರಿದಂತೆ ಇತರೆ ಧಾರವಾಹಿಗಳಲ್ಲಿ ನಟಿಸಿದ್ದರು. ಇದೀಗ ಕಿರುತೆರೆ ನಟಿ ಶೋಭಿತಾ ಆತ್ಮಹತ್ಯೆಗೆ ಶರಣಾಗುವ ಮೂಲಕ ಇನ್ನಿಲ್ಲವಾಗಿದ್ದಾರೆ.