Monday, April 21, 2025
Google search engine

Homeಸ್ಥಳೀಯಜನ ಸಾಮಾನ್ಯರನ್ನು ಒಟ್ಟಿಗೆ ಸೇರಿಸುವುದು ದಸರಾ: ಶ್ರೀವತ್ಸ

ಜನ ಸಾಮಾನ್ಯರನ್ನು ಒಟ್ಟಿಗೆ ಸೇರಿಸುವುದು ದಸರಾ: ಶ್ರೀವತ್ಸ

ಮೈಸೂರು ಅಕ್ಟೋಬರ್ 19(ಕರ್ನಾಟಕ ವಾರ್ತೆ)ದಸರಾ ಕಾರ್ಯಕ್ರಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ದಸರಾ ಕವಿ ಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ ಇತ್ತೀಚಿನ ದಿನಗಳಲ್ಲಿ ದಸರಾ ಎಂದರೆ ಸಾಮಾನ್ಯರ ಜೊತೆ ಸೇರುವುದು. ಪ್ರತಿಯೊಬ್ಬರ ಜನ ಸಾಮಾನ್ಯರು ಕೂಡ ದಸರಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಮಾಡುವುದೇ ದಸರಾ ಕವಿಗೋಷ್ಠಿ ಎಂದು ಶಾಸಕರಾದ ಟಿ.ಎಸ್ ಶ್ರೀವತ್ಸ ಅವರು ತಿಳಿಸಿದರು.

ಇಂದು ನಗರದ ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಯುವ ಕವಿ ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿ ಯುವಕರಲ್ಲಿನ ಸಾಮಾನ್ಯ ಪ್ರಜ್ಞೆಯನ್ನು ಮೂಡಿಸುವ ಸಲುವಾಗಿ ಯುವ ಕವಿಗೋಷ್ಠಿಯನ್ನು ಆಯೋಜಿಸಲಾಗಿದೆ. ಪ್ರತಿಯೊಬ್ಬ ಯುವ ಕವಿಗಳು ಕೂಡ ಈ ರೀತಿಯ ಅವಕಾಶಗಳನ್ನು ಪಡೆದುಕೊಂಡು ಸಾಹಿತ್ಯದ ಆಸಕ್ತಿಯನ್ನು ಬೆಳಸಿಕೊಳ್ಳಬೇಕು.
ಹಿಂದೆ ಮೈಸೂರಿನ ಮಹಾರಾಜರು ಕವಿ ಕಾವ್ಯದ ಶ್ರೇಷ್ಟತೆಯನ್ನು ಅರಿತು ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದ್ದರು. ಅದೇ ರೀತಿ ಮೈಸೂರಿನ ಪರಂಪರೆಯನ್ನು ನೆನಪು ಮಾಡುವ ರೀತಿಯಲ್ಲಿ ದಸರಾ ಸಂದರ್ಭದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಯುವಕರು ಸಾಹಿತ್ಯ ವಿಚಾರಗಳ ಬಗ್ಗೆ ಹೆಚ್ಚಿನ ಗಮನವನ್ನು ನೀಡಬೇಕು .ಸಾಹಿತ್ಯ ಪರಂಪರೆಯನ್ನು ಬೆಳಸಬೇಕು ಎಂದರು.

ಯುವ ಕವಿಗಳು ಮುಂದೆ ನಮ್ಮ ನಾಡಿನ ಪರಂಪರೆಯನ್ನು ರಚಿಸಬೇಕು. ಕವಿಗೋಷ್ಠಿಗಳಲ್ಲಿ ಪಾಲ್ಗೊಂಡು ಕನ್ನಡ ಸಾಹಿತ್ಯದ ಬಗ್ಗೆ ಅರಿವನ್ನು ಮುದಿಸಿಕೊಳ್ಳಬೇಕು ಎಂದರು.

ಖ್ಯಾತ ಕವಿ ಮತ್ತು ವಿಮರ್ಶಕರಾದ ಡಾ. ಎಚ್ ಎಸ್ ಸತ್ಯನಾರಾಯಣ ಅವರು ಮಾತನಾಡಿ ಯುವಕರು ಹೆಚ್ಚಿನ ರೀತಿಯಲ್ಲಿ ಕವಿಗೋಷ್ಠಿಗಳನ್ನ ಬಳಕೆ ಮಾಡಿಕೊಳ್ಳಬೇಕು. ಯುವ ಕವಿಗಳಿಗೆ ಪ್ರೋತ್ಸಾಹ ನೀಡುವ ಕಾವ್ಯಗಳನ್ನು ಜನ ಸಾಮಾನ್ಯರು ಪಡೆದು ಕೊಳ್ಳಬೇಕು. ಸರ್ಕಾರವು ರಚನೆಯಾದ ಹೊಸ ಕೃತಿಗಳನ್ನು ಪಡೆದು ಸಾಹಿತ್ಯದ ಬೆಳೆವಣಿಗೆಗೆ ಅವಕಾಶವನ್ನು ನೀಡಬೇಕು. ಕವಿಗಳಿಗೆ ನೀಡುವ ಸಹಾಯಧನವನ್ನು ನೀಡಿ ಗೌರವಿಸಬೇಕು ಎಂದರು.

ಕನ್ನಡ ಸಾಹಿತ್ಯದಲ್ಲಿ ಮೇರು ಸ್ಥಾನದಲ್ಲಿ ಇರುವ ವಿವಿಧ ಕವಿಗಳಾದ ಕುವೆಂಪು, ಮಾಸ್ತಿ, ಯವರು ರಚಿಸಿದ ಕೃತಿಗಳು ನಮ್ಮ ಸಾಹಿತ್ಯದ ವಿಚಾರವನ್ನು ತಿಳಿಸುತ್ತದೆ. ಇವುಗಳನ್ನು ಶಾಲಾ ಪಠ್ಯಪುಸ್ತಕಗಳಲ್ಲಿ ಮಕ್ಕಳಿಗೆ ಉಣಬಡಿಸುವ ಕಾರ್ಯವನ್ನು ನಡೆಸಬೇಕು. ಅದರಂತೆ ಯುವ ಕವಿಗಳು ರಚನೆ ಮಾಡಿರುವ ಪುಸ್ತಕಗಳನ್ನು ಪಠ್ಯ ಪುಸ್ತಕಗಳಲ್ಲಿ ಸೇರಿಸಿ ಯುವ ಕವಿಗಳಿಗೆ ಪ್ರೋತ್ಸಾಹವನ್ನು ನೀಡಬೇಕು ಎಂದರು.

ರಿಯಾಯಿತಿ ದರದಲ್ಲಿ ಮಾರಾಟ ಮಾಡುವ ಮೂಲಕ ಮತ್ತು ಗ್ರಂಥಾಲಯಗಳಲ್ಲಿ ಕವಿಗಳ ಪುಸ್ತಕಗಳನ್ನು ಸಾರ್ವಜನಿಕರಿಗೆ ಒದಲು ನೀಡುವ ಮೂಲಕ ಯುವಕವಿಗಳಿಗೆ ಪ್ರೋತ್ಸಾಹವನ್ನು ನೀಡಬೇಕು. ಕನ್ನಡ ಪುಸ್ತಕ ಪ್ರಾಧಿಕಾರದಿಂದ ದೊರೆಯುತ್ತಿರುವ ಪ್ರೋತ್ಸಾಹಧನ ಯುವ ಕವಿಗಳು ತಾವು ರಚಿಸಿದ ಕೃತಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಮುದ್ರಿಸಲು ಸಾಲುತ್ತಿಲ್ಲ ಆದರೂ ಸಹ ಯುವಕವಿಗಳು ಪ್ರಾಧಿಕಾರದ ನೀಡಿರುವ ಪ್ರೋತ್ಸಾಹ ಧನದ ಜೊತೆಗೆ ತಾವು ಕೂಡ ಕೈಜೋಡಿಸಿ ಪ್ರಕಟಣೆಗಳನ್ನು ಹೊರಡಿಸುತ್ತಿದ್ದಾರೆ. ಕಳೆದ ಎರಡು ಮೂರು ವರ್ಷಗಳಿಂದ ಈ ರೀತಿಯ ಕಾರ್ಯಗಳು ನಡೆಯುತ್ತಿಲ್ಲ ಮುಂದಿನ ದಿನಗಳಲ್ಲಿ ಚಾಲನೆ ದೊರೆತರೆ ಹಲವಾರು ಯುವ ಕವಿಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದರು.

ಸಾಹಿತ್ಯದಲ್ಲಿ ರಚನೆಯಾಗುವ ಹಲವಾರು ಕೃತಿಗಳು ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪಡೆಯುವ ಅರ್ಹತೆಯನ್ನು ಹೊಂದಿರುವ ಹಲವಾರು ಪುಸ್ತಕಗಳು ರಚನೆಯಾಗುತ್ತಿವೆ. ಸಾಹಿತ್ಯ ಲೋಕದಲ್ಲಿ ಇತ್ತೀಚಿನ ದಿನಗಳಲ್ಲಿ ಸ್ಪರ್ಧೆಗಾಗಿ ಕೃತಿಗಳನ್ನು ರಚಿಸುವ ಕೆಲವರಿದ್ದಾರೆ. ವಿಶಿಷ್ಟವಾಗಿ ಕಥೆಗಳನ್ನು ರಚಿಸುವಾಗ ದೊರೆಯುವ ಬಹುಮಾನಗಳಿಗೆ ಸೀಮಿತವಾಗುವ ಕೆಲವು ಕೃತಿಗಳಿವೆ ಆದರೆ ಬಹುಮಾನಕ್ಕೆ ಸೀಮಿತವಾಗದೆ ತಮ್ಮ ಸಾಹಿತ್ಯದ ಅಭಿರುಚಿಯನ್ನು ಎಲ್ಲರಿಗೂ ತಿಳಿಸುವಂತಹ ಪ್ರತಿಭೆಗಳಾಗಿ ಹೊರಬರಬೇಕು ಎಂದರು.

ಕವಿಗೋಷ್ಠಿ ಆಯ್ಕೆ ಪ್ರಕ್ರಿಯೆಯಲ್ಲಿ ಕೆಲವರ ಮಾತಿನಂತೆ ಎಡಪಂತಿಯ ಜನರಿಗೆ ಮಾತ್ರ ಅವಕಾಶ ನೀಡಿದ್ದೀರಿ ಎಂಬ ವಿಚಾರ ಕುರಿತು ಮಾತನಾಡಿ ತಮಗೆ ಆದ ಒಂದು ಅನುಭವದ ಬಗ್ಗೆ ವಿವರಿಸಿ ಇಲ್ಲಿ ಯಾರು ಎಡ ಬಲವಲ್ಲ ಎಲ್ಲರೂ ಕೂಡ ಸಮಾನರೆ ಹೃದಯ ವಿರುವುದು ಎಡಭಾಗದಲ್ಲಿ ಆದ್ದರಿಂದ ಪ್ರತಿಯೊಬ್ಬರೂ ಕೂಡ ಎಡಪಂತಿಯವರೇ ಎಂಬ ವಿಶೇಷ ಸಂದೇಶವನ್ನು ನೀಡಿದ್ದರು..

ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಮಹಾಪೌರರಾದ ಶಿವಕುಮಾರ್, ಖ್ಯಾತ ಕವಯತ್ರಿ ಡಾ. ವಿನಯಾ ವಕುಂದ, ಖ್ಯಾತ ಸಾಹಿತಿಗಳಾದ ಕಾ .ತಾ ಚಿಕ್ಕಣ್ಣ, ಕವಿ ಗೋಷ್ಠಿ ಉಪ ಸಮಿತಿಯ ಅಧ್ಯಕ್ಷರಾದ ಮಹೇಶ್ ಅಂಬಲಾರೆ, ಉಪಾಧ್ಯಕ್ಷರಾದ ದಂಡಿಕೆರೆ ನಾಗರಾಜು, ರವಿಚಂದ್ರ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular