Saturday, April 19, 2025
Google search engine

Homeವಿದೇಶಜುಲೈ ೪ಕ್ಕೆ ಬ್ರಿಟನ್ ಸಾರ್ವತ್ರಿಕ ಚುನಾವಣೆ : ಪ್ರಧಾನಿ ರಿಷಿ ಸುನಕ್ ಘೋಷಣೆ

ಜುಲೈ ೪ಕ್ಕೆ ಬ್ರಿಟನ್ ಸಾರ್ವತ್ರಿಕ ಚುನಾವಣೆ : ಪ್ರಧಾನಿ ರಿಷಿ ಸುನಕ್ ಘೋಷಣೆ

ಲಂಡನ್: ದೇಶದ ಸಾರ್ವತ್ರಿಕ ಚುನಾವಣೆಯು ಜುಲೈ ೪ರಂದು ನಡೆಯಲಿದೆ ಎಂದು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಘೋಷಿಸಿದ್ದಾರೆ. ಲಂಡನ್ನ ಡೌನಿಂಗ್ ಸ್ಟ್ರೀಟ್‌ನಲ್ಲಿ ಕ್ಯಾಬಿನೆಟ್ ಸಭೆ ಬಳಿಕ ಮಾತನಾಡಿದ ರಿಷಿ, ನನ್ನ ಅಧಿಕಾರಾವಧಿಯಲ್ಲಿ ನಿಮಗೆ (ಜನರಿಗೆ) ಸೂಕ್ತ ರಕ್ಷಣೆ ನೀಡಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇನೆ. ಇದೇ ನನ್ನ ವಾಗ್ದಾನ. ಬ್ರಿಟನ್ ಜನರು ತಮ್ಮ ಭವಿಷ್ಯವನ್ನು ಆಯ್ಕೆ ಮಾಡಿಕೊಳ್ಳುವ ಸಮಯ ಇದಾಗಿದೆ ಎಂದಿದ್ದಾರೆ.

ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿಯೂ ಗೆಲುವು ಸಾಧಿಸುವ ಸಾಧ್ಯತೆ ಇದೆ. ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷವು ಹಿನ್ನಡೆ ಅನುಭವಿಸಬಹುದು ಎಂದು ಸಮೀಕ್ಷೆಗಳು ಹೇಳಿವೆ. ಇದರ ಬೆನ್ನಲ್ಲೇ ಚುನಾವಣೆ ಘೋಷಣೆಯಾಗಿದೆ.

RELATED ARTICLES
- Advertisment -
Google search engine

Most Popular