ಮಂಡ್ಯ : ಮಂಡ್ಯ ಜಿಲ್ಲೆಯಲ್ಲಿ ಘೋರ ಘಟನೆಯೊಂದು ನಡೆದಿದ್ದು, ಆಸ್ತಿಗಾಗಿ ಅಣ್ಣನೇ ತಮ್ಮನನ್ನು ಸುಪಾರಿ ಕೊಟ್ಟು ಹತ್ಯೆಗೈದಿರುವ ಘಟನೆ ನಡೆದಿದೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿ ಠಾಣೆ ವ್ಯಾಪ್ತಿಯಲ್ಲಿ ಆಸ್ತಿಗಾಗಿ ಅಣ್ಣನೇ ತಮ್ಮನನ್ನು ಸುಪಾರಿ ಕೊಟ್ಟು ಕೊಲೆ ಮಾಡಿರುವ ಘಟನೆ ನಡೆದಿದೆ. ತಮ್ಮನ ಕೊಲೆಯ ಬಳಿಕ ಬಳಿಕ ಪಾಪಪ್ರಜ್ಞೆಯಿಂದ ಪಾಪ ಕಳೆದುಕೊಳ್ಳಲೆಂದು ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳಕ್ಕೆ ತೆರಳಿ ಅಣ್ಣ ಪುಣ್ಯ ಸ್ನಾನ ಮಾಡಿ ಬಂದಿದ್ದ.
ಕೃಷ್ಣೇಗೌಡ ಕೊಲೆಯಾದ ತಮ್ಮ. ಶಿವನಂಜೇಗೌಡ ತಮ್ಮನನ್ನೇ ಸುಪಾರಿಕೊಟ್ಟು ಹತ್ಯೆ ಮಾಡಿಸಿದ್ದ ಅಣ್ಣ. ಆರೋಪಿ ಅಣ್ಣ ಸೇರಿದಂತೆ, ಶಿವನಂಜೇಗೌಡ, ಚಂದ್ರಶೇಖರ್, ಬಿ.ಸುರೇಶ್, ಕೆ.ಪಿ.ಉಲ್ಲಾಸ್ ಗೌಡ, ಎ.ಎಂ.ಪ್ರಕಾಶ್, ಕೆ.ಎಂ.ಅಭಿಶೇಕ್, ಕೆ.ಶ್ರೀನಿವಾಸ್, ರಾಮನಗರದ ಹೆಚ್.ಹನುಮೇಗೌಡ ಪೊಲೀಸರು ಬಂಧಿಸಿದ್ದಾರೆ.
ಕೃಷ್ಣೇಗೌಡ ಮಾಡಿದ್ದ ಸಾಲವನ್ನು ತೀರಿಸಿದ್ದ ಅಣ್ಣ ಶಿವನಂಜೇಗೌಡ ಬಳಿಕ ಆಸ್ತಿಯನ್ನು ತನ್ನ ಪತ್ನಿ ಹೆಸರಿಗೆ ಮಾಡಿಕೊಂಡಿದ್ದ. ತಮ್ಮನಿಗೆ ಜಮೀನು ಬಿಟ್ಟುಕೊಡದೇ ಸತಾಯಿಸುತ್ತಿದ್ದ. ಇದರಿಂದ ಬೇಸತ್ತ ಕೃಷ್ಣೇಗೌಡ ಅಣ್ಣನ ವಿರುದ್ಧ ಕೇಸ್ ಹಾಕಿಸಿದ್ದ. ಇದೇ ಕಾರಣಕ್ಕೆ ಶಿವನಂಜೇಗೌಡ ಫೆ.11ರಂದು ಸುಪಾರಿ ಕೊಟ್ಟು ತಮ್ಮನನ್ನೇ ಕೊಲೆ ಮಾಡಿಸಿದ್ದ.