Saturday, April 19, 2025
Google search engine

Homeವಿದೇಶತಂದೆಯ ಸಮ್ಮುಖದಲ್ಲೇ ಸಹೋದರಿಯ ಹತ್ಯೆಗೈದ ಸಹೋದರ: ಇನ್ನೋರ್ವ ಸಹೋದರನಿಂದ ದೃಶ್ಯ ಸೆರೆ

ತಂದೆಯ ಸಮ್ಮುಖದಲ್ಲೇ ಸಹೋದರಿಯ ಹತ್ಯೆಗೈದ ಸಹೋದರ: ಇನ್ನೋರ್ವ ಸಹೋದರನಿಂದ ದೃಶ್ಯ ಸೆರೆ

ಇಸ್ಲಾಮಾಬಾದ್: ತಂದೆಯ ಸಮ್ಮುಖದಲ್ಲೇ ಸಹೋದರನೋರ್ವ ತನ್ನ ಸಹೋದರಿಯ ಕತ್ತು ಹಿಸುಕಿ ಹತ್ಯೆಗೈದ ಅಮಾನವೀಯ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದ್ದು, ಇದರ ಜೊತೆಗೆ ಇನ್ನೋರ್ವ ಸಹೋದರ ಘಟನೆಯ ಚಿತ್ರೀಕರಣ ಮಾಡಿದ್ದಾನೆ ಎನ್ನಲಾಗಿದೆ.

ಮರಿಯಾ ಬೀಬಿ ಎಂಬ ಯುವತಿಯನ್ನು ಆಕೆಯ ಸಹೋದರ ಮೊಹಮ್ಮದ್ ಫೈಜಲ್ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಈ ವೇಳೆ ಸಹೋದರಿಯ ತಂದೆ ಅಲ್ಲೇ ಇದ್ದರೂ ಯಾವ ಸಹಾಯಕ್ಕೆ ಹೋಗಲಿಲ್ಲ. ಇತ್ತ ಓರ್ವ ಸಹೋದರ ತನ್ನ ಸಹೋದರಿಯ ಕತ್ತು ಹಿಸುಕಿ ಹತ್ಯೆಗೈಯುತಿದ್ದರೆ ಇನ್ನೋರ್ವ ಸಹೋದರ ಶೆಹಬಾಜ್ ತನ್ನ ಮೊಬೈಲ್ ನಲ್ಲಿ ದೃಶ್ಯ ಸೆರೆ ಹಿಡಿಯುತ್ತಿದ್ದ ಎನ್ನಲಾಗಿದೆ.

ಸದ್ಯ ಈ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಘಟನೆಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಸಹೋದರಿಯನ್ನು ಸಹೋದರ ಹತ್ಯೆಗೈಯುವ ವೇಳೆ ಅಲ್ಲೇ ಪಕ್ಕದಲ್ಲಿ ಇದ್ದ ತಂದೆ ಮಗಳ ಸಹಾಯಕ್ಕೆ ಹೋಗಲಿಲ್ಲ ಬದಲಾಗಿ ಹತ್ಯೆ ನಡೆದ ಬಳಿಕ ತನ್ನ ಮಗನಿಗೆ ಕುಡಿಯಲು ನೀರು ಕೊಟ್ಟಿದ್ದಾನೆ ಈ ದೃಶ್ಯ ಸೆರೆಯಾದ ವಿಡಿಯೋದಲ್ಲಿ ಸೆರೆಯಾಗಿದೆ.

ಹತ್ಯೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು. ಆರೋಪಿಗಳಾದ ಸತ್ತಾರ್ ಮತ್ತು ಫೈಜಲ್ ನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹತ್ಯೆಯಾದ ಯುವತಿ ಅಪರಿಚಿತ ವ್ಯಕ್ತಿಯ ಜೊತೆಗೆ ಹಲವು ಬಾರಿ ವಿಡಿಯೋ ಕಾಲ್‌ನಲ್ಲಿ ಮಾತನಾಡುವುದನ್ನು ಸಹೋದರ ಫೈಝಲ್‌ ನೋಡಿರುವುದಾಗಿ ಹೇಳಲಾಗಿದ್ದು ಇದೆ ವಿಚಾರಕ್ಕೆ ಕೋಪಗೊಂಡು ಸಹೋದರೀಯ ಹತ್ಯೆಗೈದಿರುವುದಾಗಿ ಹೇಳಲಾಗಿದೆ. ಸದ್ಯ ಪೊಲೀಸರು ಸಹೋದರರನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

RELATED ARTICLES
- Advertisment -
Google search engine

Most Popular